ತಿಮ್ಮಾಪೂರ :- ಪ್ರತಿ ವರ್ಷದಂತೆ ಈ ವರ್ಷವು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲುಕಿನ ತಿಮ್ಮಾಪೂರ ಗ್ರಾಮದ ಅರಾದ್ಯದೇವರಾದ ಶ್ರೀ ಮಾರುತೇಶ್ವರ ಹಾಗೂ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಇತ್ತೀಚೆಗೆ ಮಹಾರಥೋತ್ಸವ ಸಡಗರ ಸಂಭ್ರಮದಿoದ ನೇರವೇರಿತು.
ಅಂದು ಮುಂಜಾನೆ ಬಸವೇಶ್ವರನಿಗೆ ರುದ್ರಾಭಿಷೇಕ ಮಂಗಳಾರತಿ ಜರುಗಿದ ನಂತರ 25ನೇ ವರ್ಷದ ಮಹಾರಥೋತ್ಸವದ ನಿಮಿತ್ತ ರಜತ ಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಈ ಕಾರ್ಯಕ್ರಮದ ನಿಮಿತ್ತ ಗ್ರಾಮದಲ್ಲಿ ಸೇವೆ ಸಲ್ಲಿಸಿದ ಹಾಗೂ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ಬಳಗಕ್ಕೆ ಹಳೆ ವಿದ್ಯಾರ್ಥಿಗಳಿಂದ ಗುರುವಂದನ ಕಾರ್ಯಕ್ರಮ ಜೊತೆಗೆ ದೇಶದ ಗಡಿ ಕಾಯುವ ಹಾಲಿ ಸೈನಿಕರಿಗೆ ಮತ್ತು ಮಾಜಿ ಸೈನಿಕರಿಗೆ ಗಣ್ಯರಿಗೆ ಮತ್ತು ಗ್ರಾಮದ ಕೃಷಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳು ಜರುಗಿದವು
ಕಾರ್ಯಕ್ರಮದ ನಂತರ ಮಧ್ಯಾಹ್ನ ಕಳಸದ ಮೆರವಣಿಗೆಯು ಗ್ರಾಮದಲ್ಲಿ ಸಂಚರಿಸಿದ ನಂತರದ ಕಳಸವನ್ನು ರಥಕ್ಕೆ ಏರಿಸಲಾಗಿತ್ತು ನಂತರ ಭಕ್ತರು ರಥದ ಹಗ್ಗ ಎಳೆಯುವ ಮೂಲಕ ಭಕ್ತಿ ಭಾವದಲ್ಲಿ ಪರವಶರಾದರು.ರಥೋತ್ಸವದ ಪೂರ್ವದಲ್ಲಿ ಗ್ರಾಮದರಲ್ಲಿ ಉಚ್ಚಯ್ಯ (ಸಣ್ಣ ತೇರು)ನ್ನು ಪಾದಗಟ್ಟೆಯವರಿಗೆ ಎಳೆಯಲಾಯಿತು.
ಕಳೆದ ೨೦೦೦ ಇಸ್ವಿಯಲ್ಲಿ ಚಿತ್ತರಗಿ-ಇಲಕಲ್ಲನ ವಿಜಯ ಮಹಾಂತಶ್ರೀಗಳು ಕೊಳೂರ ಶ್ರೀಗಳು, ಹಡಗಲಿ- ನಿಡಗುಂದಿಯ ರುದ್ರಮುನಿ ಶ್ರೀಗಳು ನಂದವಾಡಗಿಯ ಸಾನಿಧ್ಯದಲ್ಲಿ ಪ್ರಾರಂಭಗೊoಡು ಈ ಇಂದಿಗೆ ೨೪ ವರ್ಷಪೂರೈಸಿ ೨೫ ನೇ ವರ್ಷದ ರಜತ ಮಹೋತ್ಸವದ ರಥೋತ್ಸವವನ್ನು ಹಡಗಲಿ-ನಿಡಗುಂದಿಯ ರುದ್ರಮುನಿ ಶ್ರೀಗಳು ಗ್ರಾಮದ ವೆ.ಮೂ ಬಸಯ್ಯ ಹೀರೇಮಠ ಹಾಗೂ ಗಣ್ಯರು ಸಾಮೂಹಿಕವಾಗಿ ಚಾಲನೆ ನೀಡಿದರು ಈ ಸಂಧರ್ಭದಲ್ಲಿ ಗ್ರಾಮದ ಹಿರಿಯರು ಇತರರು ಉಪಸ್ಥಿತರಿದ್ದರು.
ಅಲಂಕಾರಗೊಂಡ ರಥ: ವಿವಿಧ ಬಣ್ಣದ ಧ್ವಜ ಬಾಳೆಕಂಬಗಳ ವಿವಿಧ ಬಗೆಯ ಹೂಗಳಿಂದ ಶೃಂಗಾರ ಮಾಡಿದ ಭವ್ಯವಾದ ರಥ ನೋಡುಗರ ಕಣ್ಮನ ಸೆಳೆಯಿತು. ರಥೋತ್ಸವದಲ್ಲಿ ತಿಮ್ಮಾಪೂರ, ಹಡಗಲಿ, ಚಿತ್ತರಿಗಿ, ಹುನಗುಂದ ಇಲಕಲ್ಲ ಅಮರಾವತಿ, ಬೇವೂರ, ಹಳ್ಳೂರ, ಭಗವತಿ, ಬೆಳಗಲ್ಲ, ಇದ್ದಲಗಿ, ಧನ್ನೂರ ಕೂಡಲಸಂಗಮ, ಬೆಂಗಳೂರ ಸೇರಿದಂತೆ ವಿವಿಧ ಮಹಾರಾಷ್ರ ಕೊಲ್ಹಾಪೂರ ಪೂಣೆ ಮಂಗಳೂರಿನ ಭಕ್ತರು ಸೇರಿದಂತೆ ಅಪಾರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ನಾಟಕ ಪ್ರದರ್ಶನ: ಅಂದು ರಾತ್ರಿ ಬಾಗಲಕೋಟ ಜಿಲ್ಲೆಯ ಬೀಳಗಿ ತಾಲೂಕಿನ ಚಿಕ್ಕಲಗುಂಡಿ ಗ್ರಾಮದ ವಿಟ್ಟಲ್ ಜೋಗಿ (ಚಿಕ್ಕಲಗುಂಡಿ )ಯವರ, ತಾಯಿಯ ಋಣ ಮಣ್ಣಿನ ಗುಣ ಎಂಬ ಸೈನಿಕನ ಕುಟುಂಬದ ಆಧಾರಿತ, ಸಾಮಾಜಿಕ ಹಾಸ್ಯ ಭರಿತ ನಾಟಕ ಯಶಸ್ವಿಯಾಗಿ ಜರುಗಿತು