spot_img
spot_img

ಸಿಲಿಕಾನ್ ಸಿಟಿಯ ಆ್ಯಕ್ಸಿಸ್ ಬ್ಯಾಂಕ್ ATM ಅವ್ಯವಸ್ಥೆ ಸರಿಪಡಿಸಿ, ಇಲ್ಲಾಂದ್ರೆ ಮುಚ್ಚಿಬಿಡಿ

Must Read

- Advertisement -

ಬೆಂಗಳೂರು – ಭಾರತದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎಟಿಎಮ್ ಮಶೀನ್ ಗಳ ಅವಶ್ಯಕತೆ ಎಷ್ಟಿದೆಯೆಂಬುದು ನಾಗರಿಕರಿಗೆ ಗೊತ್ತು ಆದರೆ ಸಂಬಂಧಪಟ್ಟ ಬ್ಯಾಂಕಿಗೆ ಇದರ ಅರಿವು ಇರುವುದಿಲ್ಲ ಎಂಬುದಕ್ಕೆ ಹನುಮಂತ ನಗರ ವ್ಯಾಪ್ತಿಗೆ ಬರುವ ನಿರ್ಮಲ ಸ್ಟೋರ್ಸ್ ಬಳಿ ಇರುವ ಆಕ್ಸಿಸ್ ಬ್ಯಾಂಕ್ ನ ಎಟಿಎಮ್ ಅವ್ಯವಸ್ಥೆಯೇ ಉದಾಹರಣೆ.

ಇಲ್ಲಿ ಎ. ಟಿ.ಎಂನಲ್ಲಿ 2 ಗಂಟೆಗಳ ಸಮಯ ಅನಾಮತ್ತಾಗಿ ವ್ಯರ್ಥವಾಗಿತ್ತು. ಮೇ 14 ರ ಮಧ್ಯಾಹ್ನ ಸುಮಾರು 4.30 ರ ಸಮಯ Axis Bank ನ ATM ನಲ್ಲಿ ದುಡ್ಡು ತೆಗೆಯಲು ಹೋದರೆ ಅತ್ಯಂತ ಕರಾಳ ಅನುಭವವಾಯಿತು.

ಎ. ಟಿ.ಎಂ ನ ಮುಂಭಾಗದಲ್ಲಿ ಇರುವ ಬಸ್ ಬುಕಿಂಗ್ ಕೌಂಟರ್ ನಲ್ಲಿ ಪ್ರಯಾಣ ಮಾಡಲು ಟಿಕೆಟ್ ತೆಗೆದು ಕೊಂಡು ಬಂದು ಆಕ್ಸಿಸ್ ಬ್ಯಾಂಕ್ ನ ATM ನ ಎ. ಟಿ.ಎಂ ನಲ್ಲಿ ಹಣ ಡ್ರಾ ಮಾಡಲು ನನ್ನ ಎ. ಟಿ.ಎಂ ಕಾರ್ಡ್ ಅನ್ನು ಎ. ಟಿ.ಎಂ ಮೆಷಿನ್ ನಲ್ಲಿ ಹಾಕಿದ್ದೆ ಹಣವಂತೂ ಬರಲಿಲ್ಲ ಆದರೆ ಕಾರ್ಡ್ ಸಹ ಬರಲಿಲ್ಲ !

- Advertisement -

ಈ ಬಗ್ಗೆ ಸಿಬ್ಬಂದಿಯನ್ನು ಕೇಳೋಣವೆಂದರೆ ಅಲ್ಲಿ ಬ್ಯಾಂಕ್ ನ ಎ. ಟಿ.ಎಂ ನಿರ್ವಹಣೆ ಮಾಡುವ ಸಿಬ್ಬಂದಿ ವರ್ಗದವರೇ ಇರಲಿಲ್ಲ. ಎಟಿಎಂ ಕಾಯಬೇಕಾದ ಅಲ್ಲಿ ಒಬ್ಬ ಸೆಕ್ಯುರಿಟಿ ಗಾರ್ಡ್ ಸಹ ಇರಲಿಲ್ಲ. ಅದರ ಜೊತೆಗೆ ಎ. ಟಿ.ಎಂ ನ ಕೌಂಟರ್ ಒಳಗೆ ಗಬ್ಬು ನಾತ ತುಂಬಿಕೊಂಡಿದ್ದರೆ ಇದ್ದರೆ ಮತ್ತೊಂದೆಡೆ ಸ್ವಚ್ಚತೆ ಎಂಬುದು ಮರೀಚಿಕೆ ಆಗಿತ್ತು.

ಎ. ಟಿ.ಎಂ ಸರಿ ಇಲ್ಲದೆ ಇದ್ದರೆ ಸರಿ ಇಲ್ಲ ಎಂಬ ನಾಮ ಫಲಕ ಸಹ ಹಾಕಬೇಕಿತ್ತು. ಅಕ್ಕ ಪಕ್ಕದಲ್ಲಿ ಇರುವ ಅಂಗಡಿಯಲ್ಲಿ ಎಟಿಎಂ ಬಗ್ಗೆ ಕೇಳಿದರೆ, ಅಯ್ಯೋ, ಇದರದು ಇದೇ ಗೋಳು ಸಾರ್ ! ಎಂಬ ಉತ್ತರ ನಾಗರಿಕರೊಬ್ಬರಿಂದ ಬಂತು.

ಆದರೆ ನನ್ನ ಕಾರ್ಡ್ ಗಾಗಿ ಹಾಗೂ ನನಗೆ ತುರ್ತು ಹಣದ ಅವಶ್ಯಕತೆ ಇದ್ದ ಕಾರಣ ನನ್ನ ಹೋರಾಟ ಮುಂದುವರೆದಿತ್ತು.

- Advertisement -

ಬ್ಯಾಂಕುಗಳು ಎಟಿಎಂ ಮಶೀನ್ ಸ್ಥಾಪನೆ ಮಾಡಿದರೆ ಅದರ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಬೇಕು ಅದು ಸಾಧ್ಯವಾಗದಿದ್ದರೆ ಯಾಕೆ ಇಡಬೇಕು ? ಅವ್ಯವಸ್ಥೆಯ ಆಗರವಾಗಿರುವ ಹನುಮಂತ ನಗರದ ಆಕ್ಸಿಸ್ ಬ್ಯಾಂಕ್ ನ ATM ಅನ್ನು ಬ್ಯಾಂಕಿನವರು ಮುಚ್ಚುವ ಮನಸ್ಸು ಮಾಡಿ ನಾಗರಿಕರಿಗೆ ನೆಮ್ಮದಿ ನೀಡಲಿ ಎಂದು ಬ್ಯಾಂಕಿನ ಶಾಖಾ ವ್ಯವಸ್ಥಾಪಕರಲ್ಲಿ ನನ್ನ ಕೋರಿಕೆ


 

ತೀರ್ಥಹಳ್ಳಿ ಅನಂತ ಕಲ್ಲಾಪುರ , ಬೆಂಗಳೂರು
ಮೊಬೈಲ್ ನಂಬರ್ – 9480129458 .

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group