spot_img
spot_img

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

Must Read

spot_img
- Advertisement -

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ ಸಮಾರಂಭ ನಡೆಯಲಿದೆ.

ಸೋಮವಾರ ದಿ. ೨೫ ರಂದು ಮಧ್ಯಾಹ್ನ  ೩ ಗಂಟೆಗೆ ಬಸವ ಮಂಟಪದಲ್ಲಿ ಕಾರ್ಯಕ್ರಮ ಜರುಗುವುದು ಎಂದು ಸೊಸಾಯಿಟಿಯ ಅಧ್ಯಕ್ಷ ಬಸವರಾಜ ತೇಲಿ ಹೇಳಿದರು.

ಸೊಸಾಯಿಟಿಯ ಸಭಾ ಭವನದಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.  ಅರಭಾವಿಯ ಶ್ರೀ ದುರದುಂಡೇಶ್ವರ ಪುಣ್ಯಾರಣ್ಯ ಮಠದ ಶ್ರೀ ಸಿದ್ಧಲಿಂಗ ಸ್ವಾಮಿಗಳು, ಕೊಪ್ಪಳ ಶ್ರೀ ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮಿಗಳು, ಅಂಕಲಗಿ ಕುಂದರಗಿ ಮಠದ ಶ್ರೀ ಅಮರಸಿದ್ದೇಶ್ವರ ಸ್ವಾಮಿಗಳು, ಸುಣಧೋಳಿ ಶ್ರೀ ಜಡಿಸಿದ್ದೇಶ್ವರ ಮಠದ ಶ್ರೀ ಶಿವಾನಂದ ಸ್ವಾಮಿಗಳು ಮತ್ತು ಮೂಡಲಗಿ ಮಠದ  ಶ್ರೀದತ್ತಾತ್ರೇಯಬೋಧ ಸ್ವಾಮಿಗಳು ಸೊಸಾಯಿಟಿಯ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸುವವರು ಎಂದು ಸೊಸಾಯಿಟಿಯ ಉಪಾಧ್ಯಕ್ಷ ಗಿರೀಶ ಢವಳೇಶ್ವರ ತಿಳಿಸಿದರು.      

- Advertisement -

ಈ ಸಮಾರಂಭಕ್ಕೆ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಕರಾಗಿ, ಅತಿಥಿಗಳಾಗಿ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ, ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಜಾರಕಿಹೊಳಿ, ಸಂಸದರಾದ ಶ್ರೀಮತಿ ಮಂಗಲಾ ಅಂಗಡಿ, ರಾಜ್ಯ ಸಭಾ ಸದಸ್ಯರಾದ ಈರಣ್ಣ ಕಡಾಡಿ, ಬಿಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಬೆಳಗಾವಿ ಜಿಲ್ಲೆಯ ಸಹಕಾರ ಸಂಘಗಳ  ಸುರೇಶ ಗೌಡ, ಎಮ್.ಎಸ್.ಮನಿ ಮತ್ತು ಶ್ಯಾಯಿನ್ ಆಖ್ತರ ಪಾಲ್ಗೊಳ್ಳುವರು.

ಮುಂಜಾನೆ ೧೦ ಗಂಟೆಗೆ ಸೊಸಾಯಿಟಿಯ ಸಭಾ ಭವನದಲ್ಲಿ ವಾರ್ಷಿಕ ಸರ್ವ ಸಾದಾರಣ ಸಭೆ ನಡೆಯುವುದು. ಬಸವ ರಂಗ ಮಂಟಪದಲ್ಲಿ ೧೧ ಗಂಟೆಗೆ ಜಾನಪದ ಕಲಾ ತಂಡದಿಂದ ಕಾರ್ಯಕ್ರಮ, ೩ ಗಂಟೆಯಿಂದ ಬೆಳ್ಳಿ ಹಬ್ಬದ ಸಂಭ್ರಮ, ಸಂಜೆ ೬.೩೦ ಕ್ಕೆ ಖ್ಯಾತ ಹಿನ್ನೆಲೆ ಗಾಯಕರಾದ ಡಾllಶಮಿತಾ ಮಲ್ನಾಡ ತಂಡದಿಂದ ರಸ ಮಂಜರಿ ಕಾರ್ಯಕ್ರಮ ಇದೆ.     

ಸೊಸಾಯಿಟಿಯ ನಿರ್ದೇಶಕರುಗಳಾದ ಚನ್ನಬಸು ಬಡ್ಡಿ, ಶ್ರೀಕಾಂತ ಹಿರೇಮಠ, ರವೀಂದ್ರ ಬಾಗೋಜಿ, ಶ್ರೀಶೈಲ ಮದಗನ್ನವರ, ಮಲ್ಲಿಕಾರ್ಜುನ ಢವಳೇಶ್ವರ, ದೇವಪ್ಪ ಕೌಜಲಗಿ ಮತ್ತು ಲಕ್ಷ್ಮಣ ತೆಳಗಡೆ ಉಪಸ್ಥಿತರಿದ್ದರು.

- Advertisement -
- Advertisement -

Latest News

ಶರಣರ ಚರಿತ್ರೆ ಆಲಿಸುವದರಿಂದ ಜೀವನ ಪಾವನ; ಹಂಗರಗಿ

ಸಿಂದಗಿ: ಪುರಾಣ ಎಂಬುದು ಪುಂಡರಗೋಷ್ಠಿಯಲ್ಲ ಪುರಾಣ ಎಂದರೆ ಅಧ್ಯಾತ್ಮ ಶರಣರ ಬದುಕಿನ ಅರ್ಥ ತಿಳಿದುಕೊಂಡು ಅವರ ಹಾದಿಯಲ್ಲಿ ಸಾಗುವ ನಡೆ ಕಲಿಸುವ ಧರ್ಮದ ಪಾಠಶಾಲೆ ಇದ್ದಂತೆ...
- Advertisement -

More Articles Like This

- Advertisement -
close
error: Content is protected !!
Join WhatsApp Group