ಸಿಂದಗಿ: ಪರೀಕ್ಷೆ ಬರೆದ 6538 ವಿದ್ಯಾರ್ಥಿಗಳು

0
628

ಸಿಂದಗಿ: 2023 ಸಾರ್ವತ್ರಿಕ ಚುನಾವಣೆ ಘೋಷಣೆಯಾದ ಬೆನ್ನಲ್ಲೆ ಸಿಂದಗಿ ಅಖಂಡ ತಾಲೂಕಿನಲ್ಲಿ ಇಂದು ನಡೆದ ಇಂಗ್ಲೀಷ, ಕನ್ನಡ, ಉರ್ದು ವಿಷಯಗಳ 27 ಪರೀಕ್ಷಾ ಕೇಂದ್ರಗಳಲ್ಲಿ 6538 ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದು ಯಶಸ್ವಿಯಾಗಿದ್ದಾರೆ ಎಂದು ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಐ.ಎಸ್.ಟಕ್ಕೆ ತಿಳಿಸಿದ್ದಾರೆ.

ಸತತ 2 ವರ್ಷಗಳಿಂದ ಕರೋನಾ ಕರಿ ನೆರಳಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಆತಂಕದಲ್ಲೆ ನಡೆದಿದ್ದವು ಆದರೆ ನಿಜವಾದ ಕರೋನಾ ಸದ್ಯ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ತಗುಲಿದಂತಾಗಿದೆ ಏಕೆಂದರೆ ಈ ವಿದ್ಯಾರ್ಥಿಗಳು 8ರಿಂದ 9ನೇ ತರಗತಿಗಳು ಸರಿಯಾಗಿ ನಡೆಯದೇ ವಿಷಯವಾರು ವಿದ್ಯಾಭ್ಯಾಸ ದೊರಕದೇ ಆನ್‍ಲೈನ್ ಅರೆಬರೆ ಬೋಧನೆ ಪಡೆದು ವಿಷಯ ಪ್ರಾವಿಣ್ಯ ದೊರಕಿಲ್ಲ ನೇರವಾಗಿ ಎಸ್‍ಎಸ್‍ಎಲ್‍ಸಿ ವಿಷಯ ಬೋಧನೆ ಸಿಕ್ಕಿದ್ದರಿಂದ ಇವರಿಗೆ ಹಿಂದಿನ ವಿಷಯಗಳ ಆಧಾರದ ಮೇಲೆ ಪರೀಕ್ಷೆ ಎದುರಿಸಬೇಕೆನ್ನುವ ಆತಂಕದಲ್ಲಿ ಮತ್ತು ವಿದ್ಯಾಭ್ಯಾಸ ಕೊರತೆಯಿಂದ ಫಲಿತಾಂಶಗಳು ಹಿನ್ನಡೆಯಾಗುವ ಸಾಧ್ಯತೆ ಹೆಚ್ಚಿರುವ ಹಿನ್ನಲೆಯಲ್ಲಿ ಶಿಕ್ಷಣ ಸಚಿವರು ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅಂಕಗಳನ್ನು ನೀಡುವ ವಾಗ್ದಾನ ಮಾಡಿರಬಹುದು ಎಂದು ಹೇಳಲಾಗುತ್ತಿದೆ.