spot_img
spot_img

ಭಾಜಪ, ಕಾಂಗ್ರೆಸ್‍ನಲ್ಲಿ ಅಭ್ಯರ್ಥಿಗಳು ಅತಂತ್ರ ; ಜೆಡಿಎಸ್ ಅಭ್ಯರ್ಥಿ ಕನ್ಫರ್ಮ್ ; ಆಕಾಂಕ್ಷಿಗಳಿಂದ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ

Must Read

- Advertisement -

ಸಿಂದಗಿ: ಸಾರ್ವತ್ರಿಕ ಚುನಾವಣೆ ಮೇ. 10 ರಂದು ನಿಗದಿಯಾಗಿರುವ ಹಿನ್ನೆಲೆಯಲ್ಲಿ ಆಯಾ ಕ್ಷೇತ್ರಗಳಿಂದ ಹಲವಾರು ಜನ ಆಕಾಂಕ್ಷಿಗಳು ಟಿಕೆಟ್‍ಗಾಗಿ ವರಿಷ್ಠರಲ್ಲಿ ಸರ್ಕಸ್ ನಡೆಸಿದ್ದು ಆದರೆ ವರಿಷ್ಠರು ಲಾಬಿ, ಕ್ಷೇತ್ರ ಸುತ್ತಾಟ ಹಾಗೂ ಅನೇಕ ಮಾರ್ಗಗಳನ್ನು ಹೆಣೆಯುತ್ತ ಗೆಲ್ಲುವ ಸೂತ್ರಗಳನ್ನು ರೂಪಿಸುತ್ತಿರುವುದು ಸರ್ವೆ ಸಾಮಾನ್ಯವಾಗಿ ಕಂಡು ಬರುತ್ತಿದೆ.

ಹೌದು, ಕಳೆದ ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಕೊನೆಯ ಹಂತದಲ್ಲಿ ಚುನಾವಣಾ ಅಖಾಡಕ್ಕೆ ಇಳಿದ ಹಿನ್ನೆಲೆಯಲ್ಲಿ ಬಹು ಹಿನ್ನಡೆ ಅನುಭವಿಸಿತ್ತು ಎನ್ನುವ ದೃಷ್ಟಿಯಿಂದ ಹಲವು ತಿಂಗಳ ಹಿಂದೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪಂಚತಂತ್ರ ಯಾತ್ರೆಯಲ್ಲಿಯೇ ದಿ. ಶಿವಾನಂದ ಪಾಟೀಲರಿಗೆ ಟಿಕೇಟ್ ಘೋಷಣೆ ಮಾಡಿದ್ದರು ಆದರೆ ಅವರು ಅಕಾಲಿಕ ನಿಧನರಾದ ಹಿನ್ನೆಲೆಯಲ್ಲಿ ಅವರ ಪತ್ನಿ ವಿಶಾಲಾಕ್ಷಿ ಪಾಟೀಲ ಅವರಿಗೆ ಅಧಿಕೃತವಾಗಿ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದ್ದನ್ನು ಹೊರತು ಪಡಿಸಿದರೆ ಇನ್ನುಳಿದ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಅಭ್ಯರ್ಥಿಗಳ ಘೋಷಣೆ ಮಾಡದೇ ಅತಂತ್ರ ಸ್ಥಿತಿಗೆ ಬಂದು ತಲುಪಿದಂತಾಗಿದೆ.

ಬಿಜೆಪಿ ಪಕ್ಷದ ರೇಸ್‍ನಲ್ಲಿ ಶಂಭುಲಿಂಗ ಕಕ್ಕಳಮೇಲಿ, ಮುತ್ತು ಶಾಬಾದಿ ಸೇರಿದಂತೆ ಹಲವಾರು ಜನರು ಟಿಕೇಟ್‍ಗಾಗಿ ಪೈಪೋಟಿಯ ಮಧ್ಯದಲ್ಲಿ ಶಾಸಕ ರಮೇಶ್ ಭೂಸನೂರ ಅವರಿಗೆ ಮುಂದಿನ ಚುನಾವಣೆಯ ಟಿಕೇಟ್ ಕನ್‍ಫರ್ಮ ಎಂದು ಕಳೆದ ವಿಜಯ ಸಂಕಲ್ಪಯಾತ್ರೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ನಿತೀನ ಗಡ್ಕರಿಯವರು ಭಾಷಣದಲ್ಲಿ ಭಾಜಪಾ ಅಭ್ಯರ್ಥಿ ರಮೇಶ ಭೂಸನೂರಕೋ ಓಟ್ ಡಾಲೋ ಚುನ್‍ಕೆ ಲಾಓ ಎಂದಿದ್ದರು ಆದರೆ ಪಕ್ಷದ ಆಯ್ಕೆಪಟ್ಟಿಯಲ್ಲಿ ಇನ್ನೂ ಯಾರ ಹೆಸರೂ ಪ್ರಕಟಗೊಂಡಿಲ್ಲ ಎಂದು ದಟ್ಟವಾಗಿ ಕೇಳಿ ಬರುತ್ತಿದೆ. ಆದಾಗ್ಯೂ ಮೊನ್ನೆ ನಡೆದ ಸಚಿವ ಸಂಪುಟದಲ್ಲಿ ಪಂಚಮಸಾಲಿ, ಮುಸ್ಲೀಂ, ಪ.ಜಾ ಗಳಿಗೆ ಮಿಸಲಾತಿಯಲ್ಲಿ ಗೊಂದಲ ಸೃಷ್ಟಿಸಿದ್ದು ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಜನತೆ ಮಾತನಾಡುತ್ತಿರುವುದು ಸರ್ವೇಸಾಮಾನ್ಯವಾಗಿದೆ.

- Advertisement -

ಕಾಂಗ್ರೆಸ್ ಹೈಕಮಾಂಡ್ ಯಾರ ಪರ?

ಉಪ ಚುನಾವಣೆಯ ಅಭ್ಯರ್ಥಿ ಅಶೋಕ್ ಮನಗೂಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠಲ್ ಕೊಳ್ಳೂರ, ರಾಕೇಶ್ ಕಲ್ಲೂರ ಸೇರಿದಂತೆ ಇತರರು ಅರ್ಜಿ ಸಲ್ಲಿಸಿದ್ದಾರೆ. ಆದರೆ ಅಶೋಕ್ ಮನಗೂಳಿ ಹಾಗೂ ವಿಠಲ್ ಕೊಳ್ಳೂರ, ರಾಕೇಶ ಕಲ್ಲೂರ ಅವರ ಹೆಸರು ಅಂತಿಮ ಪಟ್ಟಿಯಲ್ಲಿವೆ ಎಂದು ಹೇಳಲಾಗುತ್ತಿದ್ದು, ಸುಮಾರು 5 ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಮೂರನೇ ಸ್ಥಾನದಲ್ಲಿತ್ತು ಅದನ್ನು ಕಳೆದ ಉಪ ಚುನಾವಣೆಯಲ್ಲಿ ಇಡೀ ಸರಕಾರವೇ ಈ ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದರೂ ಮತ್ತು ಇಲ್ಲಿನ ಕಾಂಗ್ರೆಸ್ ನಾಯಕರ ಆಂತರಿಕ ಕಲಹಗಳ ಮಧ್ಯದಲ್ಲಿಯೂ ಕೂಡಾ ಅಶೋಕ ಮನಗೂಳಿ ಅವರ ಪ್ರಯತ್ನದಿಂದ 2ನೇ ಸ್ಥಾನಕ್ಕೆ ಇರಿಸಿದ್ದಾರೆ ಇದನ್ನೆಲ್ಲ ಪರಿಗಣಿಸಿ ಹೈಕಮಾಂಡ್ ಯಾರಿಗೆ ಟಿಕೇಟ್ ನೀಡುತ್ತೆ ಅನ್ನೋದು ಜನರಲ್ಲಿ ಕುತೂಹಲ ಕೆರಳಿಸಿದೆ.

ಭಿನ್ನಮತ ಸ್ಪೋಟ:

ಉಪ ಚುನಾವಣೆಯಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಅಶೋಕ್ ಮನಗೂಳಿ ಅವರಿಗೆ ಟಿಕೇಟ್ ನೀಡಿದ್ದರಿಂದ ಮೂಲ ಕಾಂಗ್ರೆಸ್ಸಿಗರನ್ನು ಕಡೆಗಣಿಸಿದ್ದಾರೆ ಎನ್ನುವ ಆಪಾದನೆ ಮತ್ತು ನಾಯಕರ ಆಂತರಿಕ ಕಲಹಗಳಿಂದ ಪಕ್ಷಕ್ಕೆ ಹಿನ್ನಡೆಯಾಗಿತ್ತು ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಹಳೆ ಚಾಳಿ ಮುಂದುವರೆಸಿದ್ದಾರೆ ಎಂದು ಹಲವು ಮೂಲ ಕಾರ್ಯಕರ್ತರು ಅಸಮಾಧಾನಗೊಂಡು ಪಕ್ಷ ತೊರೆದು ಬೇರೆ ಬೇರೆ ಪಕ್ಷಗಳ ಕಡೆ ವಾಲುತ್ತಿದ್ದಾರೆ ಎನ್ನುವ ಆತಂಕವೂ ರಾಜ್ಯ ನಾಯಕರಲ್ಲಿ ಮನೆ ಮಾಡಿದೆ ಕಾರಣ ಮೂಲ ಕಾರ್ಯಕರ್ತರಿಗೆ, ಪಕ್ಷಕ್ಕಾಗಿ ದುಡಿದವರಿಗೆ ಕೂಲಿ ಕೊಡಿ ಎನ್ನುವ ಮಾತುಗಳು ಕ್ಷೇತ್ರದಲ್ಲೆಡೆ ಕೇಳಿ ಬರುತ್ತಿದ್ದು, ಇದು ಪಕ್ಷಕ್ಕೆ ಮತ್ತಷ್ಟು ಹಿನ್ನಡೆ ಉಂಟಾಗಲಿದೆ. ಹೀಗಾಗಿ ಮೂಲ ಕಾರ್ಯಕರ್ತರ ಸಭೆ ನಡೆಸಿ ಟಿಕೆಟ್ ನೀಡಬೇಕು ಎನ್ನುವ ದೂರುಗಳು ವರಿಷ್ಠರವರೆಗೆ ತಲುಪಿವೆ ಎಂದು ತಿಳಿದು ಬಂದಿದೆ.

ಮತದಾರರ ಒಲವು:

ಕ್ಷೇತ್ರದ ಜನತೆ ದಿ.ಶಿವಾನಂದ ಪಾಟೀಲ ಅನುಕಂಪದಲ್ಲಿ ಅವರ ಪತ್ನಿಪರ ಮತ ಚಲಾಯಿಸುತ್ತಾರೋ ಅಥವಾ ಆಡಳಿತರೂಢ ಭಾಜಪ ಪಕ್ಷಕ್ಕೆ ಆಶಿರ್ವಾದ ನೀಡುತ್ತಾರೋ, ಸಿದ್ದರಾಮಯ್ಯನವರ ಕೈಬಲ ಪಡಿಸುತ್ತೋ ಎನ್ನುವುದು ಕಾದು ನೋಡಬೇಕಾಗಿದೆ.

- Advertisement -
- Advertisement -

Latest News

ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ !

ಮೂಡಲಗಿ - ಎಮ್ಮೆ ಮಾರಿ ಬಂದ ಹಣ ಕೇಳಿದ್ದಕ್ಕೆ ಕುಪಿತಗೊಂಡ ವ್ಯಕ್ತಿಯೊಬ್ಬ ಕುಡಿತದ ನಶೆಯಲ್ಲಿ ಹೆಂಡತಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ. ತಾಲೂಕಿನ ಫುಲಗಡ್ಡಿ...
- Advertisement -

More Articles Like This

- Advertisement -
close
error: Content is protected !!
Join WhatsApp Group