spot_img
spot_img

‘ಅಜ್ಜನ ಮನೆಯ ಅಂಗಳದಲ್ಲಿ’ ಮಕ್ಕಳ ಕಾದಂಬರಿ ಹಾಗೂ ‘ಹಾಡು ಕೊಗೀಲೆ ಹಾಡು’ ಕವನ ಸಂಕಲ ಕೃತಿಗಳ ಲೋಕಾರ್ಪಣೆ

Must Read

- Advertisement -

ಸಿಂದಗಿ: 12ನೇ ಶತಮಾನದಲ್ಲಿ ರಚಿತ ಬಸವಣ್ಣನವರ ವಚನಗಳು ಮಕ್ಕಳಿಗಾಗಿ ರಚಿಸಿರುವ ನೀತಿಯುತ, ಉಪಯುಕ್ತ ವಚನಗಳು ಸರಳ ಭಾಷೆಯಲ್ಲಿವೆ. ಮಕ್ಕಳ ಸಾಹಿತ್ಯವು ಪ್ರೌಢಸಾಹಿತ್ಯದಷ್ಟೇ ಪರಿಪೂರ್ಣ ಸಾಹಿತ್ಯವಾಗಿದೆ. ಇದು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ ಎಂದು ಮುಳಬವಾಡದ ಮಕ್ಕಳ ಸಾಹಿತಿ ಪ.ಗು. ಸಿದ್ದಾಪೂರ ಹೇಳಿದರು,

ಪಟ್ಟಣದ ಬಸವಮಂಟಪದಲ್ಲಿ ವಿದ್ಯಾಚೇತನ ಪ್ರಕಾಶನ ಹಾಗೂ ವಿಶ್ವಚೇತನ ಪ್ರಕಾಶನ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಮಕ್ಕಳ ಸಾಹಿತಿ ಹ.ಮ. ಪೂಜಾರ ಅವರ ಅಜ್ಜನ ಮನೆಯ ಅಂಗಳದಲ್ಲಿ ಮಕ್ಕಳ ಕಾದಂಬರಿ, ಮಕ್ಕಳ ಸಾಹಿತಿ ಎಸ್.ಎಸ್. ಸಾತಿಹಾಳ ಅವರ ಹಾಡು ಕೋಗಿಲೆ ಹಾಡು ಕವನ ಸಂಕಲ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಪ್ರೌಢಸಾಹಿತ್ಯದಂತೆ ಮಕ್ಕಳ ಸಾಹಿತ್ಯದಲ್ಲಿ ಕಥೆ, ಕವನ, ನಾಟಕ, ನಿಳ್ಗವಿತೆಯಿದೆ, ಹನಿಗವನಗಳು, ಕಾದಂಬರಿ, ಪ್ರವಾಸ ಕಥನಗಳನ್ನೊಳಗೊಂಡಿದೆ. ಪ್ರೌಢಸಾಹಿತ್ಯ ಕೆಲವೊಮ್ಮೆ ವಿವಾದಗಳು ಸೃಷ್ಟಿ ಮಾಡಬಹುದು.

ಪ್ರೌಢ ಸಾಹಿತ್ಯಕ್ಕಿಂತ ಮಕ್ಕಳ ಸಾಹಿತ್ಯ ಗಟ್ಟಿಯಾಗಿದೆ. ಮಕ್ಕಳ ಸಾಹಿತಿ ಹ.ಮ. ಪೂಜಾರ ಅವರ ಅಜ್ಜನ ಮನೆಯ ಅಂಗಳದಲ್ಲಿ ಮಕ್ಕಳ ಕಾದಂಬರಿ, ಮಕ್ಕಳ ಸಾಹಿತಿ ಎಸ್.ಎಸ್. ಸಾತಿಹಾಳ ಅವರ ಹಾಡು ಕೊಗೀಲೆ ಹಾಡು ಕವನ ಸಂಕಲ ಕೃತಿಗಳ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿವೆ.

- Advertisement -

ಸಾಹಿತಿ ಅಶೋಕ ಚಿಂಚಲಿ ಅವರು ಹಾಡು ಕೋಗಿಲೆ ಹಾಡು ಕವನ ಸಂಕಲನ ಕೃತಿ ಪರಿಚಯಿಸಿ, ಶಿಕ್ಷಕ ಸಾಹಿತಿ ಎಸ್.ಎಸ್. ಸಾತಿಹಾಳ ಅವರ ಹಾಡು ಕೋಗಿಲೆ ಹಾಡು ಮಕ್ಕಳ ಕವನ ಸಂಕಲನವು ಮಕ್ಕಳಲ್ಲಿ ನಾಡಪ್ರೇಮ, ದೇಶಪ್ರೇಮ, ಪರಿಸರ ಕಾಳಜಿ, ಮಾನವೀಯ ಮೌಲ್ಯಗಳನ್ನು ಹೆಚ್ಚಿಸುವ ಉತ್ತಮ ಕೃತಿಯಾಗಿದೆ ಎಂದು ಹೇಳಿದರು.

ಸಾಹಿತಿ ಸಿ.ಎಂ. ಬಂಡಗಾರ ಅವರು ಅಜ್ಜನ ಮನೆಯ ಅಂಗಳದಲ್ಲಿ ಮಕ್ಕಳ ಕಾದಂಬರಿ ಕೃತಿ ಪರಿಚಯಿಸಿ, ಅಜ್ಜನ ಮನೆಯ ಅಂಗಳದಲ್ಲಿ ಮಕ್ಕಳ ಕಾದಂಬರಿ ಮಕ್ಕಳಲ್ಲಿ ಪರಸ್ಪರ ಸಹಬಾಳ್ವೆ, ಜಾತ್ಯತೀತತೆ, ದೇಶಪ್ರೇಮ, ಸಾಮಾಜಿಕ ಕಳಕಳಿ, ಗ್ರಂಥಾಲಯದ ಮಹತ್ವ ಮುಂತಾದ ಅಂಶಗಳನ್ನು ಉದ್ದೀಪನಗೊಳಿಸುವ ಉತ್ತಮ ಮೌಲ್ಯಯುತ ಕೃತಿಯಾಗಿದೆ ಎಂದು ಅಭಿಪ್ರಾಯ ಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಕಥೆಗಾರ ಡಾ.ಚನ್ನಪ್ಪ ಕಟ್ಟಿ, ಎಚ್.ಜಿ. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎ.ಆರ್. ಹೆಗ್ಗನದೊಡ್ಡಿ ಅವರು ಮಾತನಾಡಿದರು. 

- Advertisement -

ರಾಷ್ಟ್ರೀಯ ಬಸವದಳದ ಅಧ್ಯಕ್ಷ ಶಿವಾನಂದ ಕಲಬುರ್ಗಿ, ಸಾಹಿತಿಗಳಾದ ಶಂಕರ ಬೈಚಬಾಳ, ಜಿ.ಎಸ್. ಭೂಸಗೊಂಡ, ಸಿದ್ದರಾಮ ಬಿರಾದಾರ, ರಾಚು ಕೊಪ್ಪಾ, ಶಿವಕುಮಾರ ಶಿವಸಿಂಪಿ, ಎಸ್.ಬಿ. ಗೌಸಾನಿ, ಪ್ರೊ.ಹಣಮಶೆಟ್ಟಿ, ಶಿಕ್ಷಕರಾದ ಆರ್.ಕೆ. ಪಾಟೀಲ, ರಾಯಪ್ಪ ಇವಣಗಿ, ಎ.ಎಸ್. ಯತ್ನಾಳ, ಎಂ.ಎಂ. ದೊಡಮನಿ, ಶಂಕರ ಕಟ್ಟಿಮನಿ, ರೇಖಾ ನಾಗಠಾಣ, ಪ್ರೇಮಾ ನಾಯಕ್, ಜ್ಯೋತಿ ಪೂಜಾರ ಸೇರಿದಂತೆ ಇತರರು ಇದ್ದರು.

ಎಸ್.ಎಸ್. ಸಾತಿಹಾಳ ಸ್ವಾಗತಿಸಿದರು. ಎಸ್.ಕೆ. ಗುಗ್ಗರಿ ನಿರೂಪಿಸಿದರು. ಶಿವಕುಮಾರ ಶಿವಸಿಂಪಿ ವಂದಿಸಿದರು.

- Advertisement -
- Advertisement -

Latest News

ಸೌರ ವಿದ್ಯುತ್ ಉತ್ಪಾದನೆ ಮಾಹಿತಿ ಕಾರ್ಯಾಗಾರ

ಕ್ಯಾಷುಟೆಕ್ ನಿರ್ಮಿತಿ ಕೇಂದ್ರ ಶಕ್ತಿನಗರದ ಅಭಿಯಂತರುಗಳಿಗೆ ಹಾಗೂ, ರಾಯಚೂರು ಜಿಲ್ಲೆಯ ವಿವಿಧ ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ "ಸುಸ್ಥಿರ ಹಸಿರು ವಿದ್ಯುಚ್ಛಕ್ತಿ ಉತ್ಪಾದನೆಗೆ ಸೌರಶಕ್ತಿ ಬಳಕೆ"...
- Advertisement -

More Articles Like This

- Advertisement -
close
error: Content is protected !!
Join WhatsApp Group