spot_img
spot_img

Sindagi: ಮಕ್ಕಳಲ್ಲಿ ಸಂಗೀತ ಅಭಿರುಚಿ ಬೆಳೆಸಿ – ಡಾ. ಕಲ್ಲಯ್ಯ ಶ್ರೀ

Must Read

spot_img
- Advertisement -

ಸಿಂದಗಿ: ಮಕ್ಕಳಲ್ಲಿ ಸಂಗೀತ ಸಾಹಿತ್ಯದ ಅಭಿರುಚಿ ಬೆಳೆಸಬೇಕು ಎಂದು ಗದಗ ವೀರೇಶ್ವರ ಪುಣ್ಯಾಶ್ರಮದ ಡಾ.ಕಲ್ಲಯ್ಯ ಶ್ರೀಗಳು ನುಡಿದರು.

ತಾಲೂಕಿನ ಚಿಕ್ಕಸಿಂದಗಿ ಗ್ರಾಮದ ಹೊರ ವಲಯದ ಜಾನಪದ ಕಲಾವಿದ ಹಾಗೂ ಹಿರಿಯ ವೈದ್ಯ ರಾಮಲಿಂಗಪ್ಪ ಅಗಸರ ಅವರ ಆರೋಗ್ಯ ಧಾಮದಲ್ಲಿ ಶುಕ್ರವಾರರಂದು ಅನಿರೀಕ್ಷಿತವಾಗಿ ಭೆಟ್ಟಿ ನೀಡುವ ಮೂಲಕ ಅವರು ಮಾತನಾಡಿ, ಮಕ್ಕಳಿಗೆ ಸಂಗೀತ ಸಾಹಿತ್ಯ ಎರಡೂ ಮಾನವನ ಮನೋವಿಕಾಸಕ್ಕೆ ಸಹಕಾರಿ ಆಗಿರುವದರಿಂದ ತಮ್ಮ ಭಾಗದಲ್ಲಿ ಮಕ್ಕಳಿಗೆ ವಿದ್ಯಾಭಾಸದ ಜೊತೆಗೆ ಉತ್ತಮ ಸಂಸ್ಕಾರ ನೀಡುವ ಮೂಲಕ ಸಂಗೀತದಲ್ಲಿ ತೊಡಗುವಂತೆ ಪ್ರೇರಣೆ ನೀಡಬೇಕು ಎಂದರು.

ಗದಗ ವೀರೇಶ್ವರ ಪುಣ್ಯಾಶ್ರಮದ ಸಂಸ್ಕೃತ ಶಿಕ್ಷಕ ಸಾಹಿತಿ ಶಿವಚಲಯ್ಯ ಸಾಲಿಮಠ ಮಾತನಾಡಿ ಚಿಕ್ಕಸಿಂದಗಿ ಅಗಸರವರ ಕುಟುಂಬಸ್ಥರು ಸಾಹಿತ್ಯ ಸಂ

- Advertisement -

ಸಾಂಸ್ಕೃತಿಕ  ಚಟುವಟಿಕೆಯಲ್ಲಿ ನಿರಂತರವಾಗಿ ಭಾಗವಹಿಸುತ್ತಾ ಬಂದಿರುವ ನಿಮಿತ್ತ ಅವರ ಹೆಸರು ಸಮಾಜದಲ್ಲಿ ಇದೆ ಎಂದರು.

ಗದಗ ವೀರೇಶ್ವರ ಪುಣ್ಯಾಶ್ರಮದ ಡಾ.ಕಲ್ಲಯ್ಯ ಸ್ವಾಮಿಗಳಿಗೆ ಬಂದಾಳ ಗ್ರಾಮದ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಪಾಠ ಶಾಲೆಯ ಮುಖ್ಯ ಶಿಕ್ಷಕ ನಿಂಗನಗೌಡ ಪಾಟೀಲ ಸನ್ಮಾನಿಸಿ  ಗೌರವಿಸಿದರು. ಗದಗ ಅಂದಾನಯ್ಯ ಸ್ವಾಮಿಗಳು, ಶಿಕ್ಷಕ ಮಕ್ಕಳ ಸಾಹಿತಿ ಬಸವರಾಜ ರಾ ಅಗಸರ ಮತ್ತು ಕುಟುಂಬಸ್ಥರು ಇದ್ದರು.

 ವಿನಯಕುಮಾರ ಅಗಸರ ಸ್ವಾಗತಿಸಿ ವಂದಿಸಿದರು.

- Advertisement -
- Advertisement -

Latest News

ದಲಿತರ ಹಣ ಗ್ಯಾರಂಟಿಗಳಿಗೆ ಬಳಸಿದ ಕಾಂಗ್ರೆಸ್ ; ತನಿಖೆ ಮಾಡಿಸಬೇಕು – ಈರಣ್ಣ ಕಡಾಡಿ ಆಗ್ರಹ

ಮೂಡಲಗಿ: ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಮೀಸಲಾದ ಅನುದಾನದ ಹಣವನ್ನು ರಾಜ್ಯದ ಗ್ಯಾರಂಟಿ ಯೋಜನೆಗಳಿಗೆ ಉಪಯೋಗಿಸಿಕೊಂಡಿದ್ದು, ಅದು ದಲಿತ...
- Advertisement -

More Articles Like This

- Advertisement -
close
error: Content is protected !!
Join WhatsApp Group