ಅನ್ಮ ಪ್ರಸಾದ ಸೇವೆಗಾಗಿ ಶ್ರೀಶೈಲಕ್ಕೆ ಹೊರಟ ಸಿಂದಗಿ ಭಕ್ತಾದಿಗಳು

Must Read

ಸಿಂದಗಿ: ನೆರೆಯ ಆಂದ್ರಪ್ರದೇಶ ರಾಜ್ಯದ ಸುಕ್ಷೇತ್ರ ಶ್ರೀಶೈಲ ಶ್ರೀ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವ ನಿಮಿತ್ತ ಅನ್ನಪ್ರಸಾದ ಸೇವೆ ಮಾಡುವುದಕ್ಕಾಗಿ ಸಿಂದಗಿ ಪಟ್ಟಣದ ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ(ಮಾಗಣಗೇರಿ) ಮತ್ತು ಸ್ನೇಹಿತರ ಬಳಗದ ವತಿಯಿಂದ ಭಕ್ತಾಧಿಗಳು ಶ್ರೀಶೈಲಕ್ಕೆ ತೆರಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ(ಮಾಗಣಗೇರಿ) ಮಾತನಾಡಿ, ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿ ದೇವರ ಜಾತ್ರಾಮಹೋತ್ಸವವು ಪ್ರತಿವರ್ಷ ಯುಗಾದಿ ಅಮವಾಸ್ಯೆಯಂದು ಜರುಗುತ್ತದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಿಂದ ಲಕ್ಷಾಂತರ ಭಕ್ತರು ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿ ದೇವರ ದರ್ಶನಕ್ಕೆ ತೆರಳುತ್ತಾರೆ. ಅದರಲ್ಲಿ ವಿಶೇಷವಾಗಿ ಉತ್ತರಕರ್ನಾಟಕದಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಹೋಗುವುದು ವಾಡಿಕೆಯಾಗಿದೆ. ಹೀಗಾಗಿ ಪ್ರತಿವರ್ಷ ನಾನು ಮತ್ತು ನಮ್ಮ ಸ್ನೇಹಿತರ ಬಳಗದಿಂದ ಶ್ರೀಶೈಲಕ್ಕೆ ಆಗಮಿಸುವ ಭಕ್ತರಿಗೆ ಅನ್ನಪ್ರಸಾದ ಸೇವೆಯನ್ನು ನೆರವೇರಿಸುತ್ತಾ ಬಂದಿದ್ದು, ಈ ನಿಟ್ಟಿನಲ್ಲಿ ಶ್ರೀಶೈಲಕ್ಕೆ ತೆರಳುತ್ತಿರುವುದಾಗಿ ತಿಳಿಸಿದರು.

ಈ ವೇಳೆ ಗುರುಸಂಗಪ್ಪ ಪಟ್ಟಣಶೆಟ್ಟಿ, ನಿಂಗಪ್ಪ ಮುಂಡೇವಾಡಗಿ, ರವಿ ಬಿರಾದಾರ, ದವಲತರಾಯಗೌಡ ಮನ್ನಾಪೂರ, ವಿಜು ಪಟ್ಟಣಶೆಟ್ಟಿ, ಚನ್ನು ಮುಂಡೇವಾಡಗಿ, ಉಮೇಶ ಜೋಗೂರ, ಮಲ್ಲೇಶಪ್ಪ ಕುಂಬಾರ, ರುದ್ರಯ್ಯ ಮಠ, ಗುರಪ್ಪ ಬಡಿಗೇರ, ಪರಶುರಾಮ ಕುಂಬಾರ, ಮಯೂರಮಠ, ಪಿಂಟ್ಯಾ ಹಡಪದ ಸೇರಿದಂತೆ ಹಲವರು ಇದ್ದರು.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group