Homeಸುದ್ದಿಗಳುSindagi: ಮೋರಟಗಿ ಗ್ರಾ ಪಂ ಅಧ್ಯಕ್ಷರಾಗಿ ಗೌರಮ್ಮ ನಡವಿನಕೇರಿ, ಉಪಾಧ್ಯಕ್ಷ ರಾಗಿ ದಾವಲಬಿ ಮುಲ್ಲಾ ಆಯ್ಕೆ

Sindagi: ಮೋರಟಗಿ ಗ್ರಾ ಪಂ ಅಧ್ಯಕ್ಷರಾಗಿ ಗೌರಮ್ಮ ನಡವಿನಕೇರಿ, ಉಪಾಧ್ಯಕ್ಷ ರಾಗಿ ದಾವಲಬಿ ಮುಲ್ಲಾ ಆಯ್ಕೆ

ಸಿಂದಗಿ: ತಾಲ್ಲೂಕಿನ ಮೋರಟಗಿ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಗೌರಮ್ಮ ನಡುವಿನಕೇರಿ, ಉಪಾಧ್ಯಕ್ಷರಾಗಿ ದಾವಲಬಿ ಮುಲ್ಲಾ ಅವಿರೋಧವಾಗಿ ಆಯ್ಕೆಯಾದರು.

ತಾಲೂಕಿನ ಮೋರಟಗಿ ಗ್ರಾಮ ಪಂಚಾಯಿತಿ ಒಟ್ಟು 22 ಸದಸ್ಯ ಬಲ ಹೊಂದಿದೆ. ಎಲ್ಲ ಸದಸ್ಯರು ಹಾಜರಿದ್ದರು. ಅಧ್ಯಕ್ಷ ಸ್ಥಾನ ಎಸ್ಸಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಮಿಸಲಾತಿ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಗೌರಮ್ಮ ನಡುವಿನಕೇರಿ ಸಲ್ಲಿಸಿದರು, ಎರಡು ಸ್ಥಾನಗಳಿಗೆ ಇಬ್ಬರ ನಾಮಪತ್ರ ಸಲ್ಲಿಕೆಯಾಗಿದ್ದರಿಂದಾಗಿ ಚುನಾವಣಾಧಿಕಾರಿ ಅರಣ್ಯಾಧಿಕಾರಿ ಆರ್ ಎಸ್ ಬಿರಾದಾರ ಎರಡು ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.

ಪಿಡಿಒ ರಾಘವೇಂದ್ರ ಚಕ್ರವರ್ತಿ. ಕಾರ್ಯದರ್ಶಿ ಕೆ.ಡಿ ಮಕಾನದಾರ. ಸಿಬ್ಬಂದಿ ಮಲ್ಲು ದುದ್ದಗಿ ಇದ್ದರು.

ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗುತ್ತಿದಂತೆ ಸದಸ್ಯರು ಹಾಗೂ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ, ಗುಲಾಲ ಎರಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಊರಿನ ಹಿರಿಯರಾದ ಮೈಹಿಬೂಬ ಕಣ್ಣೆ. ಎನ್ ಆರ್ ತಿವಾರಿ, ಶ್ರೀಶೈಲಗೌಡ ಪಾಟೀಲ್, ನಿಂಗಣ್ಣಗೌಡ ಪಾಟೀಲ್, ಈರಣ್ಣಗೌಡ ಪಾಟೀಲ, ಬಸಲಿಂಗಪ್ಪ ಗೌಡ ಬೊನಾಳ, ಸಲೀಂ ಕಣ್ಣಿ, ರವಿ ನಡವಿನಕೇರಿ, ಯುಸೂಪ ಮುಲ್ಲಾ, ಸೋಹೆಲ ಮುಲ್ಲಾ, ಶಿವು ಕೇರಿಗೊಂಡ, ಲಾಲಸಾಬ ಜಮಾದಾರ, ಚನ್ನು ಬಳಗಾನೂರ, ರಾಜು ಮಳಗಿ, ಇತರರು ಉಪಸ್ಥಿತರಿದ್ದರು.

RELATED ARTICLES

Most Popular

error: Content is protected !!
Join WhatsApp Group