Sindagi MLA: ನೂತನ ಮಿನಿ ವಿಧಾನ ಸೌಧ ಕಟ್ಟಡ ವೀಕ್ಷಿಸಿದ ಶಾಸಕರು

0
206

ಸಿಂದಗಿ: ಪಟ್ಟಣದ ಆಲಮೇಲ ರಸ್ತೆಯಲ್ಲಿ ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗುತ್ತಿರುವ ಮಿನಿ ವಿಧಾನ ಸೌಧದ ಕಟ್ಟಡಕ್ಕೆ ಶಾಸಕ ಅಶೋಕ ಮನಗೂಳಿ ಹಾಗೂ ವಿಜಯಪುರ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಭೇಟಿ ನೀಡಿ ಪರಿಶೀಲಿಸಿದರು.

ಯೋಜನೆಗೆ ರೂಪಿಸಲಾದ ನೀಲ-ನಕ್ಷೆಯನ್ನು ಪರಿಶೀಲಿಸಿ ಅವರು ಕಟ್ಟಡ ನಿರ್ಮಾಣ ವಿನ್ಯಾಸಕ್ಕೆ ಸಂಬಂಧಿಸಿ ಸಲಹೆ-ಸೂಚನೆಗಳನ್ನು ನೀಡಿದರು.

   

ಈ ವೇಳೆ ಸಿಂದಗಿ ಶಾಸಕ ಅಶೋಕ ಮನಗೂಳಿ ಮಾತನಾಡಿ, ವಿಧಾನಸೌಧದ ಕಾಮಗಾರಿ ನಗರದಲ್ಲಿ ಮಿನಿ ಅಚ್ಚುಕಟ್ಟಾಗಿ ಹಂತದಲ್ಲಿ ಸಾಗುತ್ತಿದ್ದು, ಕಾಮಗಾರಿ ಇದೀಗ ಮೊದಲ ಪೂರ್ಣಗೊಂಡಿದ್ದು, ಎರಡನೇ ಅಂತಸ್ತಿನ ಫ್ಲ್ಯಾಟ್ ಪೂರ್ಣಗೊಂಡಿದೆ. ಹೆಚ್ಚಿನ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿ ಆದಷ್ಟು ಬೇಗ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.

ನಗರಕ್ಕೆ ಪ್ರವೇಶವಾಗುವ ಮೇಲ್ಸೇತುವೆ ವೀಕ್ಷಣೆ: 

ಗ್ರಾಪಂ ಮೀಸಲಾತಿ ಪ್ರಕಟಿಸಿದ ಬಳಿಕ ಸಿಂದಗಿ ನಗರಕ್ಕೆ ಪ್ರವೇಶವಾಗುವ ಪಾತ್ರಹಳ್ಳದ ಬಳಿಯಿರುವ ಪೂರ್ಣಗೊಳ್ಳದ ಮೇಲ್ಸೇತುವೆಯನ್ನು ವೀಕ್ಷಿಸಿದ ಜಿಲ್ಲಾಧಿಕಾರಿಗಳು, ಸುಮಾರು ಒಂದೂವರೆ ವರ್ಷದಿಂದ ಈ ಮೇಲ್ಸೇತುವೆ ಕಾರ್ಯ ಪೂರ್ಣಗೊಳ್ಳದೇ ಇರುವುದನ್ನು ಗಮನಿಸಿದ ತಕ್ಷಣ ಕಾಮಗಾರಿಯನ್ನು ಮಾಡುವಂತೆ ಪಿಡಬ್ಲ್ಯೂಡಿ ಅಭಿಯಂತರ ತಾರಾನಾಥ ರಾಠೋಡ ಅವರಿಗೆ ಸೂಚಿಸಿದರು. 

ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಭೇಟಿ:

ಪಟ್ಟಣದ ನೀರು ಶುದ್ದೀಕರಿಸುವ ಘಟಕ ಹಾಗೂ ಪಂಪ್ ಹೌಸ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಕುಡಿಯುವ ನೀರಿನ ಅಶುದ್ಧತೆಯಿಂದ ಸ್ಥಳೀಯ ಜನತೆಗೆ ತೊಂದರೆಯಾದರೆ ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೇ ಹೊಣೆಗಾರರು. ಮತ್ತು ಶುದ್ದೀಕರಿಸುವ ಘಟಕವನ್ನು ಸರಿಯಾಗಿ ನಿರ್ವಹಣೆ ಮಾಡಬೇಕು ಎಂದು ಪಂಪ ಹೌಸ್ ಸಿಬ್ಬಂದಿಗಳಿಗೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಸಿಂದಗಿ ತಹಶೀಲ್ದಾರ ನಿಂಗಪ್ಪ ಬಿರಾದಾರ, ಮುಖ್ಯಾಧಿಕಾರಿ ಮೋಹನ್ ಜಾಧವ, ಆರೋಗ್ಯ ಅಧಿಕಾರಿ ನಬಿರಸೂಲ್ ಉಸ್ತಾದ, ಜೆಇ ಎ,ಜಿ, ನಾಟೀಕಾರ, ಪಂಪ್ ಹೌಸ್ ಸಿಬ್ಬಂದಿ ಪ್ರಕಾಶ ಮಲ್ಲೇದ  ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.