spot_img
spot_img

Sindagi: ಸ್ನೇಹ ಸಂಗಮ ಬಳಗದ ವತಿಯಿಂದ ನೂತನ ಶಾಸಕ ದಂಪತಿಗೆ ಸನ್ಮಾನ

Must Read

spot_img
- Advertisement -

ಸಿಂದಗಿ: ಅಧಿಕಾರ ಶಾಶ್ವತವಲ್ಲ ಅಧಿಕಾರಾವಧಿಯಲ್ಲಿ ಮಾಡಿದ ಕಾರ್ಯಗಳು ಶಾಶ್ವತ ಆ ನಿಟ್ಟಿನಲ್ಲಿ ದಿ. ಮಾಜಿ ಸಚಿವ ಎಂ.ಸಿ.ಮನಗೂಳಿ ಅವರು ಗ್ರಾಮ ಸೇವಕರಾಗಿ ರೈತರ ನಾಡಿಮಿಡಿತ ಅರಿತು ರೈತಾಪಿ ಜನರಿಗೆ ನ್ಯಾಯ ಒದಗಿಸಲು ಪಣ ತೊಟ್ಟು ಈ ಕ್ಷೇತ್ರಕ್ಕೆ ಶಾಶ್ವತ ಯೋಜನೆಗಳನ್ನು ತಂದು ಕೊಟ್ಟಿದ್ದಾರೆ ಅಂತೆಯೇ ಈ ಭಾಗ ಹಸಿರು ನಾಡಾಗಿದ್ದು ಅವರು ಕೊಟ್ಟ ಬಳುವಳಿ ಎಂದು ಗಣಿತ ತಜ್ಞ ಎಚ್.ಟಿ.ಕುಲಕರ್ಣಿ ಹೇಳಿದರು.

ಪಟ್ಟಣದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ 1984ರ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಸ್ನೇಹ ಸಂಗಮ ಬಳಗದವತಿಯಿಂದ ನೂತನ ಶಾಸಕರಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ನನ್ನ ಬದುಕಿಗೆ ಗೌರವ ನೀಡಿದ ದಿ.ಎಂ.ಸಿ.ಮನಗೂಳಿ ಅಂತೆಯೇ ಮನಗೂಳಿ ಮನೆತನದ ಜೊತೆ ನನಗೆ ಅವಿನಾಭಾವ ಸಂಬಂಧವಿದೆ ಎಂದರು.

ಸನ್ಮಾನ ಸ್ವೀಕರಿಸಿದ ಶಾಸಕ ಅಶೋಕ ಮನಗೂಳಿ ಮಾತನಾಡಿ,   ಶಿಕ್ಷಣ, ಸ್ನೇಹ, ಸಾಮಾಜಿಕ ಸೇವೆ ಅಂದರೇನು ಎನ್ನುವುದನ್ನು ಅರಿತುಕೊಳ್ಳಲು ವಿದ್ಯಾಗುರುಗಳ ಹಾಗೂ ಸ್ನೇಹಿತರ ಬಳಗವೇ ಕಾರಣ ಅದಕ್ಕಾಗಿ ಮನಗೂಳಿ ಮನೆತನ 40 ವರ್ಷಗಳಿಂದ ರಾಜಕೀಯ ಸೇವೆಯಲ್ಲಿ 9 ಬಾರಿಯ ಚುನಾವಣೆಯಲ್ಲಿ ಮೂರು ಗೆದ್ದಿದ್ದೇವೆ ಸೋಲು ಗೆಲುವುಗಳನ್ನು ಎಣಿಸದೇ ಸಾಮಾಜಿಕ ಸೇವೆಯಲ್ಲಿ ತೊಡಗಿದ್ದಲ್ಲದೇ ನಮ್ಮ ತಂದೆ ಮಾಜಿ ಸಚಿವ ದಿ. ಎಂ.ಸಿ.ಮನಗೂಳಿ ಅವರು ಈ ಕ್ಷೇತ್ರಕ್ಕೆ ಶಾಶ್ವತ ಯೋಜನೆಗಳನ್ನು ತಂದಿದ್ದಾರೆ ಅವರು ಬಿಟ್ಟು ಹೋದ ಕಾರ್ಯಗಳನ್ನು ಕೈಗೊಂಡು ಮಾದರಿ ಕ್ಷೇತ್ರವನ್ನಾಗಿ ಮಾಡುವ ಉದ್ದೇಶ ಹೊಂದಿದ್ದೇನೆ ಅದಕ್ಕೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ನಮ್ಮ ತಂದೆಯವರ ಅಪೇಕ್ಷೆಯಂತೆ 5 ವರ್ಷದ ಅವಧಿಯಲ್ಲಿ ಬಿಡುವಿಲ್ಲದೇ ಕ್ಷೇತ್ರದ ಸೇವಕನಾಗಿ ಕೆಲಸ ಮಾಡುವೆ ಎಂದರು.

- Advertisement -

ನಿವೃತ್ತ ದೈಹಿಕ ನಿರ್ದೆಶಕ ಕೆ.ಎಸ್ ಸೋಮಾಪುರ ಮಾತನಾಡಿ, ನಿತ್ಯ ಗ್ರಾಮೀಣ ಜನರ ಒಡನಾಟ ಹಾಗೂ ಸ್ನೇಹಿತರ ಮತ್ತು ಗ್ರಾಮೀಣ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದಾದರೆ ಈ ಕ್ಷೇತ್ರದ ಖಾಯಂ ಎಂಎಲ್‍ಎ ಇರಲು ಸಾಧ್ಯ ಆ ದಿಸೆಯಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದು ಕಿವಿ ಮಾತು ಹೇಳಿದರು.

ಡಾ. ಅರವಿಂದ ಮನಗೂಳಿ ಮಾತನಾಡಿ, ಸ್ನೇಹಕ್ಕೆ ಮಿಗಿಲಾದ ವಸ್ತು ಯಾವುದು ಇಲ್ಲ ಅಲ್ಲದೆ ಸ್ನೇಹಿತನು ಉನ್ನತ ಸ್ಥಾನ ಏರಿದರೆ ಸಂತೋಷ ಪಡುತ್ತಾನೆ ಹೊರತು ಯಾವುದೆ ಆಸೆಯಿಂದಲ್ಲ ಕಾರಣ ಸ್ನೇಹಿತರ ಅಪೇಕ್ಷೆಯಂತೆ ಈ ಕ್ಷೇತ್ರದ ಸವಾಂಗೀಣ ಅಭಿವೃದ್ಧಿಯೊಂಂದಿಗೆ ಶಾಶ್ವತ ಯೋಜನೆಗಳನ್ನು ತರುವಲ್ಲಿ ಶ್ರಮ ವಹಿಸಲಿ ಎಂದು ಶುಭ ಹಾರೈಸಿದರು.

ಸಾನ್ನಿಧ್ಯ ವಹಿಸಿದ ಸಾರಂಗಮಠದ ಪೂಜ್ಯಶ್ರೀ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು, ನಿವೃತ್ತ ಪ್ರಾಚಾರ್ಯ ಬಿ.ಎಂ. ಬಿರಾದಾರ ಮಾತನಾಡಿದರು.

- Advertisement -

ಈ ಸಂದರ್ಭದಲ್ಲಿ ನಿವೃತ್ತ ದೈಹಿಕ ಶಿಕ್ಷಕ ಎಚ್.ಎಂ.ಉತ್ನಾಳ, ಗಣೇಶ ಪೈ, ಡಾ. ಮನೋರಮಾ ಕಕ್ಕಳಮೇಲಿ, ಡಾ. ಚಂದ್ರು ತಾಳಿಕೋಟಿ, ವಿಶ್ವನಾಥ ಚಿಂಚೋಳಿ, ಬೋಗರಾಜ ನರಗೋದಿ, ಜಗದೀಶ ಪತ್ತಾರ, ಹೇಮಲತಾ ವಸ್ತ್ರದ, ರವಿ ಗೋಲಾ, ಶರಣಗೌಡ ಪಾಟೀಲ ಅನಿಸಿಕೆ ವ್ಯಕ್ತಪಡಿಸಿದರು.

ಡಾ. ನಿಂಗರಾಜ ಅಸ್ಕಿ ಸ್ವಾಗತಿಸಿದರು. ಹೇಮಲತಾ ವಸ್ತ್ರದ ನಿರೂಪಿಸಿದರು. ಎಂಎಂ.ವಾರದ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಸಂಗನಬಸವ ಬಿರಾದಾರ ವಂದಿಸಿದರು.

- Advertisement -
- Advertisement -

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -

More Articles Like This

- Advertisement -
close
error: Content is protected !!
Join WhatsApp Group