ಸಿಂದಗಿ: ತಾಲೂಕಿನ ಗ್ರಾಮ ಪಂಚಾಯತ್‍ನ ಮೊದಲ ಅವಧಿ ಪೂರ್ಣಗೊಂಡಿದ್ದು, ಎರಡನೆಯ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿಯನ್ನು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರ ಅಧ್ಯಕ್ಷತೆಯಲ್ಲಿ ನಗರದ ಹೊರವಲಯದಲ್ಲಿರುವ ಭಾವಿಕಟ್ಟಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡ ಸಿಂದಗಿ ತಾಲೂಕಿನ 16 ಗ್ರಾಪಂ.ಗಳ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಪಟ್ಟಿಯನ್ನು ಘೋಷಿಸಿದರು.
ಈ ವೇಳೆ ತಹಶೀಲ್ದಾರ್ ನಿಂಗಣ್ಣ ಬಿರಾದಾರ, ತಾಪಂ ಇಓ ಬಾಬು ರಾಠೋಡ ಸೇರಿದಂತೆ ಅಧಿಕಾರಿಗಳು ಗ್ರಾಮ ಪಂಚಾಯತ ಸದಸ್ಯರು ಉಪಸ್ಥಿತರಿದ್ದರು.
ಮೀಸಲಾತಿ ವಿವರ: ಯಂಕಂಚಿ ಗ್ರಾಪಂ ಅಧ್ಯಕ್ಷ- ಅ ವರ್ಗ, ಉಪಾಧ್ಯಕ್ಷ- ಎಸ್‍ಸಿ ಮಹಿಳೆ, ಯರಗಲ್ ಬಿಕೆ ಗ್ರಾಪಂ ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಎಸ್‍ಸಿ, ಸುಂಗಠಾಣ ಗ್ರಾಪಂ ಅಧ್ಯಕ್ಷ- ಅ ವರ್ಗ, ಉಪಾಧ್ಯಕ್ಷ- ಸಾಮಾನ್ಯ, ಗೋಲಗೇರಿ ಗ್ರಾಪಂ ಅಧ್ಯಕ್ಷ- ಅ ವರ್ಗ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ, ಗುಬ್ಬೇವಾಡ ಗ್ರಾಪಂ ಅಧ್ಯಕ್ಷ- ಎಸ್‍ಸಿ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ, ಹಂದಿಗನೂರ ಗ್ರಾಪಂ ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಅ ವರ್ಗ, ಹೊನ್ನಳ್ಳಿ ಗ್ರಾಪಂ ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ, ಹಿಕ್ಕನಗುತ್ತಿ ಗ್ರಾಪಂ ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ, ನಾಗಾವಿ ಬಿಕೆ ಗ್ರಾಪಂ ಅಧ್ಯಕ್ಷ- ಬ ವರ್ಗ ಮಹಿಳೆ ಮತ್ತು ಉಪಾಧ್ಯಕ್ಷ- ಅ ವರ್ಗ, ರಾಂಪೂರ ಪಿಎ ಗ್ರಾಪಂ ಅಧ್ಯಕ್ಷ- ಅ ವರ್ಗ ಮಹಿಳೆ, ಉಪಾಧ್ಯಕ್ಷ: ಸಾಮಾನ್ಯ, ಚಾಂದಕವಟೆ ಗ್ರಾಪಂ ಅಧ್ಯಕ್ಷ-ಎಸ್.ಸಿ ಮಹಿಳೆ, ಉಪಾಧ್ಯಕ್ಷ- ಅ ವರ್ಗ ಮಹಿಳೆ, ಚಟ್ಟರಕಿ ಗ್ರಾಪಂ ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ, ಕೊಕಟನೂರ ಗ್ರಾಪಂ ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ- ಅ ವರ್ಗ ಮಹಿಳೆ, ಕನ್ನೊಳ್ಳಿ ಗ್ರಾಪಂ ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ, ಬಂದಾಳ ಗ್ರಾಪಂ ಅಧ್ಯಕ್ಷ- ಎಸ್‍ಸಿ, ಉಪಾಧ್ಯಕ್ಷ- ಬ ವರ್ಗ ಮಹಿಳೆ, ಬ್ಯಾಕೋಡ ಗ್ರಾಪಂ ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ- ಎಸ್‍ಸಿ ಮಹಿಳೆ ಮೀಸಲಾತಿಯನ್ನು ಪ್ರಕಟಿಸಲಾಗಿದೆ.