Belagavi KLE: ಈ ಸೋರುವಿಕೆ ನಿಲ್ಲುವುದೆಂದು?

Must Read

ಬೆಳಗಾವಿ: ನಗರದ ಕೆಎಲ್ಈ ಆಸ್ಪತ್ರೆಯ ಮುಖ್ಯ ದ್ವಾರದ ಎದುರಿಗಿನ ವಾಹನ ನಿಲ್ಲುವ ಸ್ಥಳದಲ್ಲಿ ಭೂಗತ ಪೈಪ್ ಲೈನ್ ಕಳೆದ ಆರೇಳು ತಿಂಗಳಿನಿಂದ ಸೋರುತ್ತಿದ್ದು ಮಹಾನಗರ ಪಾಲಿಕೆಯಾಗಲಿ, ಜಲ ಮಂಡಳಿಯಾಗಲಿ ಈ ಕಡೆ ಕಣ್ಣೆತ್ತಿ ಕೂಡ ನೋಡಿಲ್ಲ.

ಪೈಪ್ ಲೈನ್ ಸೋರಿಕೆಯಾಗಿದ್ದರಿಂದ ರಸ್ತೆಯ ಮೇಲೆ ನೀರು ನಿಲ್ಲುತ್ತಿದ್ದು ವಾಹನ ಬಂದಾಗ ರಸ್ತೆ ಪಕ್ಕ ನಿಂತವರಿಗೆ ನಿಂತ ನೀರು ಸಿಡಿಯುವ ಸಂಭವವಿದೆ. ಅಲ್ಲದೆ ಅದೇ ಜಾಗದ ಪಕ್ಕದಲ್ಲಿ ಸಣ್ಣ ಚಹಾ ಅಂಗಡಿಗಳಿಗೆ ತೊಂದರೆಯಾಗುತ್ತಿದೆ.

ಆಸ್ಪತ್ರೆಗೆ ಬಂದ ಜನರಿಗೂ ಬಸ್ ಸಲುವಾಗಿ ಈ ಜಾಗದಲ್ಲಿ ನಿಲ್ಲಲು ತೊಂದರೆಯಾಗುತ್ತಿದೆ. ಇದನ್ನೆಲ್ಲ ನೋಡಿಯೂ ನೋಡದಂತೆ ಮಹಾನಗರ ಪಾಲಿಕೆ ಹಾಗೂ ಜಲಮಂಡಳಿ ತಣ್ಣಗೆ ಕುಳಿತುಕೊಂಡಿವೆ.

ಇನ್ನಾದರೂ ರಸ್ತೆಯಲ್ಲಿ ನೀರು ಸೋರಿ ಹೋಗುವ ಈ ಸಮಸ್ಯೆಗೆ ಸಂಬಂಧ ಪಟ್ಟ ಇಲಾಖೆ ಮುಕ್ತಿ ಕಾಣಿಸಲಿ ಎಂಬುದು ಜನತೆಯ ಬೇಡಿಕೆಯಾಗಿದೆ.


ಉಮೇಶ ಬೆಳಕೂಡ

Latest News

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ

ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...

More Articles Like This

error: Content is protected !!
Join WhatsApp Group