- Advertisement -
ಸಿಂದಗಿ: ಬೆಂಗಳೂರಿನ ರಾಡಿಸನ್ ಬ್ಲೂ ಏರಿಯಾದಲ್ಲಿ 2023 ರ ಬ್ಯುಸಿನೆಸ್ ಮೆಂಟ್ ರಾಷ್ಟ್ರವ್ಯಾಪಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಯಲ್ಲು ಬೊಮ್ಮನಹಳ್ಳಿರವರಿಗೆ ಪ್ರಥಮ ದರ್ಜೆ ಗುತ್ತಿಗೆದಾರರೆಂದು ಗುರುತಿಸಿ ನ್ಯಾಷನಲ್ ವೈಡ್ ಅವಾರ್ಡ್ ನೀಡಿ ಗೌರವಿಸಿದ್ದಾರೆ.
ಸುಮಾರು ವರ್ಷಗಳಿಂದ ಪ್ರಥಮ ದರ್ಜೆ ಗುತ್ತಿಗೆದಾರರಾಗಿ ಉತ್ತಮ ಕಾರ್ಯನಿರ್ವಹಿಸುತ್ತಿರುವ ಇವರು ಸಮಾಜ ಸಂಘಟನೆಯಲ್ಲಿ ಪಾಲ್ಗೊಂಡು ಸಮಾಜ ಸೇವೆಯಲ್ಲೂ ಮುಂಚೂಣಿಯಲ್ಲಿದ್ದು ಕೋವಿಡ್ ಸಂದರ್ಭದಲ್ಲಿ ಬಡವರ ಬೆನ್ನೆಲುಬಾಗಿ ನಿಂತು ಕೈಲಾದಷ್ಟು ದಿನಸಿ ವಸ್ತುಗಳನ್ನು ನೀಡಿ ಹೃದಯವಂತಿಕೆಯನ್ನು ಮೆರೆದಿದ್ದಾರೆ ಎನ್ನಲಾಗಿದೆ ಇವರ ಕಾರ್ಯ ವೈಖರಿ ಗುರುತಿಸಿ ಪ್ರಶಸ್ತಿ ಲಭಿಸಿದೆ.
ಕಾರ್ಯಕ್ರಮದಲ್ಲಿ ಖ್ಯಾತ ಬ್ಯಾಂಕರ್ ನಿರಂಜನ ದೇಶಪಾಂಡೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಶಶಿಕುಮಾರ, ಏಪೆರೇರ್ಟ್ ಮುಖ್ಯಸ್ಥರು ಹಾಗೂ ಗೋಪಿ ರೆಡ್ಡಿ ಸಿರ್ ಆಪ್ತ ಕೃಷ್ಣ ಹಾಗೂ ಮಾಳು ಬಾಗೇವಾಡಿ ಸೇರಿದಂತೆ ವಿವಿಧ ಜಿಲ್ಲೆಯ ಗುತ್ತಿಗೆದಾರರು ಇದ್ದರು.