ಅವ್ಯವಸ್ಥೆಯ ತಾಣವಾದ ಸಿಂದಗಿ ಪಟ್ಟಣ ; ಸಾರ್ವಜನಿಕರಿಂದ ಹಿಡಿಶಾಪ

Must Read

ಸಿಂದಗಿ: ಪಟ್ಟಣದಲ್ಲಿ ಎಲ್ಲೆಂದರಲ್ಲಿ ತಗ್ಗು-ದಿನ್ನೆ ತುಂಬಿದ ರಸ್ತೆಗಳು ಹಾಗೂ ಗಟಾರುಗಳು ತುಂಬಿ ರಸ್ತೆಗಳಲ್ಲಿ ಮಲೀನ ನೀರು ಹರಿದು ಕೆಸರುಗದ್ದೆಯಂತಾಗಿ ಪುರಸಭೆಯ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ.

ಪಟ್ಟಣದ ಪ್ರಮುಖ ರಸ್ತೆಗಳು ಎಲ್ಲೆಂದರಲ್ಲಿ ತಗ್ಗುಗಳು ಬಿದ್ದು ರಸ್ತೆ ಹಾಳಾಗಿ ಹೋಗಿವೆ ಅದರಲ್ಲಿ ಕಳೇದ 2-3 ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ನಗರದ ಹೃದಯ ಭಾಗವಾಗಿರುವ ಟಿಪ್ಪು ಸುಲ್ತಾನ ವೃತ್ತದಲ್ಲಿನ ರಸ್ತೆ ತಗ್ಗು-ಗುಂಡಿಗಳಿಂದ ತುಂಬಿಹೋಗಿ ಇಡೀ ರಸ್ತೆಯೇ ಗಟಾರಮಯವಾದಂತಾಗಿದೆ ಅಲ್ಲದೆ ಪುರಸಭೆಯು ಅವೈಜ್ಞಾನಿಕವಾಗಿ ಮಾಡಿರುವ ಕಾಮಗಾರಿಗಳಿಂದ ಮಳೆಯಿಂದ ಹರಿದು ಬರುವ ನೀರು ಚರಂಡಿ ಮುಖಾಂತರ ಹಳ್ಳಕ್ಕೆ, ಮುಖ್ಯ ಕಾಲುವೆಗೆ ಸೇರುವ ವ್ಯವಸ್ಥೆ ಮಾಡದೇ ಇರುವ ಪರಿಣಾಮ ಮಳೆ ನೀರು ಸರಾಗವಾಗಿ ಹರಿದು ಹೋಗದೆ ರಸ್ತೆಯ ಮೇಲೆ ನಿಂತು ಗಲೀಜುಮಯವಾಗಿ ಸಾರ್ವಜನಿಕರು ಈ ರಸ್ತೆಯಲ್ಲಿ ತಿರುಗಾಡಲು ಹರಸಾಹಸ ಪಡಬೇಕಾದ ದುಸ್ಥಿತಿ ಬಂದೊದಗಿದೆ

ಇದರಿಂದ ಸಂಚಾರಕ್ಕೂ ತೊಂದರೆಯುಂಟಾಗಿ ಜನರು ಪುರಸಭೆಯ ಆಡಳಿತ ವೈಖರಿಗೆ ಹಿಡಿಶಾಪ ಹಾಕುತ್ತಿರುವುದು ಸರ್ವೆಸಾಮಾನ್ಯವಾಗಿದೆ. ಇದೇ ರೀತಿ ರಾಷ್ಟ್ರಪತಿ ಗಳಿಂದ ಪ್ರಶಸ್ತಿಗೆ ಬಾಜನವಾಗಿದ್ದ ನಗರದ ಅರಳಗುಂಡಗಿ ಜಮೀನು ಇಂದು ಲೇಔಟವಾಗಿದ್ದರಿಂದ ಅಲ್ಲಿಯು ಪುರಸಭೆಯಿಂದ ನಿರ್ಲಕ್ಷಕ್ಕೆ ಒಳಗಾಗಿ ನಿವಾಸಗಳಿಂದ ನಿತ್ಯ ನಿಂದನೆಗೆ ಗುರಿಯಾಗುತ್ತಿದೆ ಅಲ್ಲದೆ ಹೆಣ್ಣುಮಕ್ಕಳಿಗಾಗಿ ನಿರ್ಮಾಣವಾದ ಶೌಚಾಲಯ ನೀರಿನ ಕೊರತೆಯಿಂದ ಮುಚ್ಚಲಾಗಿದ್ದು ಅದಕ್ಕೂ ಹೆಣ್ಣು ಮಕ್ಕಳ ಹಿಡಿಶಾಪ ಹಾಕುತ್ತಿರುವುದು ಹೇಳತೀರದ್ದಾಗಿದೆ.

ಪಟ್ಟಣದ ಶಿವಶಂಕರ ಬಡಾವಣೆ, ಮಗರಬಿ ಗಲ್ಲಿ, ವಡ್ಡರ ಓಣಿ, ಸೋಂಪುರ ರಸ್ತೆಗೆ ಹೊಂದಿಕೊಂಡಿರುವ ಕುಲಕರ್ಣಿ ಲೇಔಟ್‌ನ ರಸ್ತೆಗಳು ಹಾಳಾಗಿ ಕೆಸರು ಗದ್ದೆಯಂತಾಗಿವೆ. ಇಲ್ಲಿನ ನಿವಾಸಿಗಳು ದ್ವಿಚಕ್ರವಾಹನದಲ್ಲಿ ಸವಾರಿ ಮಾಡಬೇಕಾದರೆ ಪ್ರತಿದಿನ ಒಬ್ಬರಿಲ್ಲ ಒಬ್ಬರು ಕೆಳಗೆ ಬಿದ್ದು ಗಾಯ ಮಾಡಿಕೊಳ್ಳುವುದು, ರಸ್ತೆಗಳಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುವ ದೃಶ್ಯ ಕಣ್ಣಿ ರಾಚುವುದು ವಿಶೇಷವೇನಲ್ಲ.

ಈ ಲೇಔಟ್ ಎನ್.ಎ ಆಗಿ ಪುರಸಭೆಯಿಂದ ಮಾನ್ಯತೆ ಪಡೆದಿದೆ ಮತ್ತು ಪುರಸಭೆಗೆ ಸಂಬಂಧಿಸಿದೆ ಅಭಿವೃದ್ಧಿ ಕರವನ್ನು ನಮ್ಮಿಂದ ಕಟ್ಟಿಸಿಕೊಂಡಿದ್ದಾರೆ. ನಾವು ಎಲ್ಲಾ ರೀತಿಯ ತೆರಿಗೆಗಳನ್ನು ಕಟ್ಟಿದ್ದರು ಕೂಡಾ ನಮಗೆ ಸಿಗಬೇಕಾ ಕನಿಷ್ಠ ಮೂಲ ಸೌಕರ್ಯಗಳನ್ನೂ ಕೂಡಾ ನಮಗೆ ನೀಡಿಲ್ಲ ಅಂತ ಇಲ್ಲಿನ ಸಾರ್ವಜನಿಕರು ಪುರಸಭೆಯ ಅಧಿಕಾರಿಗಳಿಗೆ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವರದಿ: ಪಂಡಿತ್ ಯಂಪೂರೆ, ಸಿಂದಗಿ

Latest News

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ

ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...

More Articles Like This

error: Content is protected !!
Join WhatsApp Group