spot_img
spot_img

ಸ್ಮಾರ್ಟ್ ಕ್ಲಾಸ್ ಕಾರ್ಯಾಗಾರ

Must Read

ಯರಗಟ್ಟಿ: ಪಟ್ಟಣದ ಸರ್ಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ  ಬಾಸ್ಕ ಇಂಡಿಯ ಲಿಮಿಟೆಡ್ ಇವರ ಸಹಯೋಗದಲ್ಲಿ ಸ್ಮಾರ್ಟ್ ಕ್ಲಾಸ್ ಕಾರ್ಯಾಗಾರ ವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಾಗಾರಕ್ಕೆ ತರಬೇತಿದಾರರಾಗಿ ಪುಣೆಯ ಸೆನ್ಸ್ ಇಲೆಕ್ಟ್ರಾನಿಕ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಶ್ರೀಮತಿ ಸುಮಿತ ಮೇಡಂ ಇವರು “ತರಗತಿಯಲ್ಲಿ ಪೆನಲ್ ಬೋರ್ಡಿನ ಬಳಕೆ, ಅದರ ನಿರ್ವಹಣೆ” ಬಗ್ಗೆ ಸುದೀರ್ಘವಾಗಿ ಮಾಹಿತಿಯನ್ನು ಪ್ರಾಯೋಗಿಕವಾಗಿ ನೀಡಿದರು.

ಎಲ್ಲ ಶಿಕ್ಷಕರು ತರಬೇತಿಯಲ್ಲಿ ಉತ್ಸುಕತೆಯಿಂದ ಪಾಲ್ಗೊಂಡು ತಾವೂ ಪೆನಲ್ ಬೋರ್ಡನ್ನು ಬಳಕೆ ಮಾಡಿದರು. ರಾಬರ್ಟ್ ಬಾಷ್ ಸಾಮಾನ್ಯವಾಗಿ ಬಾಷ್ ಎಂದು ಕರೆಯಲ್ಪಡುತ್ತದೆ ಮತ್ತು BOSCH ಎಂದು ಶೈಲೀಕರಿಸಲ್ಪಟ್ಟಿದೆ, ಇದು ಜರ್ಮನಿಯ ಗೆರ್ಲಿಂಗನ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಜರ್ಮನ್ ಬಹುರಾಷ್ಟ್ರೀಯ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಂಪನಿಯಾಗಿದೆ. ಕಂಪನಿಯು 1886 ರಲ್ಲಿ ಸ್ಟಟ್‌ಗಾರ್ಟ್‌ನಲ್ಲಿ ರಾಬರ್ಟ್ ಬಾಷ್ ಅವರಿಂದ ಸ್ಥಾಪಿಸಲ್ಪಟ್ಟಿತು.

ಈ ಕಂಪನಿಯು ಈಗ ಜಗತ್ತಿನಾದ್ಯಂತ ತನ್ನ ಮಾರುಕಟ್ಟೆ ವಿಸ್ತರಿಸಿಕೊಂಡಿದ್ದು. ಯರಗಟ್ಟಿ ಶಾಲೆಗೆ ಕಂಪ್ಯೂಟರ್ ವಿತರಿಸುವ ಮೂಲಕ ಅವುಗಳನ್ನು ಬಳಕೆ ಕುರಿತು ತರಬೇತಿ ನೀಡುತ್ತಿರುವುದು ಅಭಿನಂದನಾರ್ಹ ಸಂಗತಿ ಎಂದು ಯರಗಟ್ಟಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೆಟ್ರಿಕ್ ಪೂರ್ವ ಬಾಲಕಿಯರ ಸರಕಾರಿ ವಸತಿ ನಿಲಯ ಮೇಲ್ವಿಚಾರಕಿ ಆಶಾ ಫರೀಟ್ ಕಾರ್ಯ ಕ್ರಮ ಉದ್ಘಾಟಿಸುವ ಮೂಲಕ ಬಾಸ್ಕ ಕಂಪನಿ ಕುರಿತು ತಿಳಿಸಿದರು.

ಈ ತರಬೇತಿಯಲ್ಲಿ ಮುಖ್ಯೋಪಾಧ್ಯಾಯರು ಶಿಕ್ಷಕರು ಮಕ್ಕಳು ಹಾಜರಿದ್ದು ಒಟ್ಟಾರೆಯಾಗಿ ತರಬೇತಿಯು ಯಶಸ್ವಿಯಾಗಿ ಮೂಡಿ ಬಂದಿತು ಯರಗಟ್ಟಿಯ ಶಾಲೆಗೆ ಎರಡು ಸ್ಮಾರ್ಟ್ ಕ್ಲಾಸ್ ಗಳನ್ನು ಕೊಡಮಾಡಿರುವ , ಬಾಸ್ಕ ಇಂಡಿಯಾ ಲಿಮಿಟೆಡ್ ಸಂಸ್ಥೆಯ ವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಶಾಲೆಯ ಶಿಕ್ಷಕರಾದ ಎಸ್ ಬಿ ಮಿಕಲಿ, ಎಸ್ ಪಿ ಪಾಣಿ ಶೆಟ್ಟಿ, ಆರ್ ಕೆ ಹುಣಸಿಕಟ್ಟಿ, ಮುಖ್ಯೋಪಾಧ್ಯಾಯ ರಾದ ಎ. ಎ. ಮಕ್ತುಮನವರ, ರಫೀಕ್ ಮುರಗೋಡ, ಪಿ. ಎಸ್. ಶಿಂಧೆ ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಮುಖ್ಯೋಪಾಧ್ಯಾಯ ಎ ಎ ಮಕ್ತುಮನವರ ಸ್ವಾಗತಿಸಿದರು. ಶಿಕ್ಷಕ ಆರ.ಕೆ.ಹುಣಸಿಕಟ್ಟಿ ನಿರೂಪಿಸಿದರು.

- Advertisement -
- Advertisement -

Latest News

ಉಂಡು ಮಲಗಿದ ಮೇಲೂ ಗಂಡ ಹೆಂಡಿರ ಜಗಳ !

ಸಂಸಾರದ ಬಂಡಿ ಸರಾಗವಾಗಿ ಸಾಗಬೇಕಾದರೆ ಗಂಡ ಹೆಂಡತಿ ಎನ್ನುವ ಎರಡು ಗಾಲಿಗಳು ಸಮಸಮವಾಗಿ ಚಲಿಸಬೇಕು. ಎರಡೂ ಗಾಲಿಗಳಿಗೆ ಪ್ರಾಧಾನ್ಯತೆಯಿದೆ. ಒಂದು ಹೆಚ್ಚು ಒಂದು ಕಡಿಮೆ ಇಲ್ಲ....
- Advertisement -

More Articles Like This

- Advertisement -
close
error: Content is protected !!