spot_img
spot_img

ಪ್ರೇಮಿಗಳ ದಿನ ಕುರಿತು ಕೆಲವು ವಿಚಾರಗಳು; ಪ್ರೀತಿ ವ್ಯಕ್ತಪಡಿಸುವ ಸುದಿನ

Must Read

- Advertisement -

ಚಳಿಗಾಲದ ರಜಾದಿನಗಳು ಮುಗಿದು ಹೋದವು, ನಮ್ಮ ಹೊಸ ವರ್ಷ ಮುಂತಾದ ಆಚರಣೆಗಳು ಮುಗಿದು ಹೋದವು ಎಂದು ಕೊರಗಬೇಡಿ. ನಮಗಾಗಿ ಈಗ ಕಾದಿದೆ ಪ್ರೇಮಿಗಳ ದಿನಾಚರಣೆ. ಈ ಸಂದರ್ಭದಲ್ಲಿ ಪ್ರೇಮಿಗಳ ದಿನಾಚರಣೆಯ ಕುರಿತಾದ ಒಂದಷ್ಟು ವಿಚಾರಗಳನ್ನು ನಿಮಗಾಗಿ ತಂದಿದ್ದೇನೆ.

ಪ್ರೇಮಿಗಳಿಗಷ್ಟೇ ಅಲ್ಲದೆ ಪ್ರೀತಿಯನ್ನು ಬಯಸುವ, ಪ್ರೀತಿಯನ್ನು ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯು ತನ್ನ ಪ್ರೀತಿ ಪಾತ್ರ ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ತಮ್ಮ ಪ್ರೀತಿ ಪಾತ್ರ ಪ್ರಾಣಿ – ಪಕ್ಷಿಗಳಿಗೆ ಹೀಗೆ ತಾವು ಪ್ರೀತಿಸುವ ಪ್ರತಿ ಅಂಶಗಳಿಗೂ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ಸುದಿನವಿದು.

ಪ್ರೀತಿ ಮತ್ತು ಪ್ರಣಯವನ್ನೆ ತುಂಬಿಕೊಂಡಿರುವ ಈ ಸುಂದರವಾದ ದಿನವನ್ನು ನಾವು ಹೇಗೆ ತಾನೇ ಆಚರಿಸದೆ ಇರಲು ಸಾಧ್ಯ ?

- Advertisement -

ಹಾಗಾದರೆ ಬನ್ನಿ, ಈ ಪ್ರೇಮಿಗಳ ದಿನಾಚರಣೆಯ ಸುತ್ತ ಇರುವ ಒಂದಷ್ಟು ವಿಚಾರಗಳ ಬಗ್ಗೆ ಗಮನ ಹರಿಸುತ್ತಾ ಆಚರಿಸೋಣ…

ಪ್ರತಿ ವರ್ಷ ಫೆ 14 ರಂದು ವಿಶ್ವದಾದ್ಯಂತ ಪ್ರೇಮದ ಪಲ್ಲವಿ ಕೋಟ್ಯಂತರ ಹೃದಯಗಳಿಂದ ಕೋಟ್ಯಂತರ ಹೃದಯಗಳಿಗೆ ಹರಿದಾಡುವ ದಿನ. ಈ ದಿನದಂದು ತಮ್ಮ ಪ್ರೇಮವನ್ನು ನಿವೇದಿಸಿಕೊಳ್ಳಲು ಹಾಗೂ ಆಗಲೇ ಪ್ರೇಮಿಗಳಾದವರು ತಮ್ಮ ಪ್ರೇಮವನ್ನು ಮತ್ತಷ್ಟು ಗಾಢವಾಗಿಸಿಕೊಳ್ಳಲು ಕಾಯುವ ದಿನ. ವ್ಯಾಲೈಂಟೆನ್ಸ್ ಡೇ ಅಥವಾ ಪ್ರೇಮಿಗಳ ದಿನಾಚರಣೆ ಎಂದು ವಿಶ್ವದಾದ್ಯಂತ ಆಚರಿಸುವ ಈ ದಿನವನ್ನು ಭಾರತದಲ್ಲೂ ವರ್ಷದಿಂದ ವರ್ಷಕ್ಕೆ ಹೆಚ್ಚಾಗಿ ವ್ಯಾಪಕವಾಗಿ ಆಚರಿಸಲಾಗುತ್ತಿದೆ. ಪ್ರಜಾಪ್ರಭುತ್ವವನ್ನು ಒಪ್ಪಿರುವ ನಮ್ಮ ದೇಶದಲ್ಲಿ ಈ ಆಚರಣೆ ಸಹಜವಾಗಿ ಅರ್ಥಪೂರ್ಣವನ್ನು ಪಡೆದುಕೊಳ್ಳುತ್ತಿದೆ.

ಕುತೂಹಲ ಕೆರಳಿಸುವ, ಅಚ್ಚರಿಯ ಸಂಗತಿಗಳು

ಫೆಬ್ರವರಿ ಹತ್ತಿರ ಬರುತ್ತಿದ್ದಂತೆಯೇ ಮಾಧ್ಯಮಗಳಲ್ಲಿ ಪ್ರೇಮಿಗಳ ದಿನ (ವ್ಯಾಲೆಂಟೈನ್ಸ್ ಡೇ) ಪರ ಮತ್ತು ವಿರೋಧವಾದ ಪ್ರತಿಕ್ರಿಯೆಗಳು ಕಂಡುಬರುತ್ತವೆ. ಯುವಜನತೆ ಇದನ್ನು ಬೇಕು ಎಂದೂ ಸಂಪ್ರದಾಯವಾದಿಗಳು ನಮ್ಮದಲ್ಲದ ಇದು ಬೇಡ ಎಂದೂ ವಾದ ಮಾಡುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ಹದಿನೈದು ಇಪ್ಪತ್ತು ವರ್ಷಗಳಿಗೂ ಹಿಂದೆ ಇಂತಹದ್ದೊಂದು ದಿನ ಇದೆ ಎಂದೇ ಗೊತ್ತಿಲ್ಲದ ಭಾರತೀಯರಿಗೆ ಇದು ಪರಿಚಿತವಾದದ್ದು ಇದರ ಇತಿಹಾಸಕ್ಕಿಂತಲೂ ಹೆಚ್ಚಾಗಿ ಈ ದಿನಾಚರಣೆಯ ಗೊಂದಲದಿಂದ.

- Advertisement -

ಇತಿಹಾಸವನ್ನು ಕೆದಕಿದರೆ ಹದಿನೆಂಟನೆಯ ಶತಮಾನದಲ್ಲಿ, ಅಂದರೆ ಆಂಗ್ಲ ಸಾಹಿತ್ಯದ ಪಿತಾಮಹ ಜೆಫ್ರಿ ಚಾಸರ್ (Geoffrey Chaucer) ರ ಕಾಲದಲ್ಲಿ ಪ್ರೇಮಿಗಳು ಒಬ್ಬರಿಗೊಬ್ಬರು ತಮ್ಮ ಪ್ರೇಮವನ್ನು ನಿವೇದಿಸಿಕೊಳ್ಳಲು ಉಡುಗೊರೆ ಮತ್ತು ಹೂವುಗಳನ್ನು ಬಳಸುತ್ತಿದ್ದರು. ಇದರೊಂದಿಗೆ ಶುಭಾಶಯ ಪತ್ರವೊಂದಿದ್ದು ಜೀವನಸಂಗಾತಿಯಾಗಲು ನೀಡುವ ಆಹ್ವಾನವೂ ಆಗಿತ್ತು.

ಈ ಶುಭಾಶಯ ಪತ್ರಗಳನ್ನು ಅಂದು ಚಿಕ್ಕದಾಗಿ ವ್ಯಾಲೆಂಟೈನ್ಸ್ ಎಂದೂ ಕರೆಯುತ್ತಿದ್ದರು. ಪ್ರೇಮದ ದೇವತೆಯಾದ ಸಂತ ವ್ಯಾಲೆಂಟೈನ್ ನನ್ನೇ ಉಲ್ಲೇಖಿಸಿ ನೀಡುವ ಉಡುಗೊರೆ ಪತ್ರಕ್ಕೆ ಚಿಕ್ಕದಾಗಿ ಈ ಹೆಸರು ಬಂದಿತು. ಹೆಸರು ಸಹಾ ಭಾವನಾಪೂರ್ವಕವಾದುದರಿಂದ ಈ ಹೆಸರು ಹೆಚ್ಚು ವ್ಯಾಪ್ತಿಯಾಯಿತು.

ಅಷ್ಟಕ್ಕೂ ಫೆ. ಹದಿನಾಲ್ಕೇ ಏಕೆ? 

ಸಂತ ವ್ಯಾಲೆಂಟೈನ್ ರೋಮನ್ ಚಕ್ರವರ್ತಿ ಕ್ಲಾಡಿಯಸ್ -2 ರವರ ಆಜ್ಞೆ ಮೀರಿ ಪ್ರೇಮಿಗಳನ್ನು ಮದುವೆ ಮಾಡಿಸುತ್ತಿದ್ದ. ಇದು ಚಕ್ರವರ್ತಿಯ ದೃಷ್ಟಿಯಲ್ಲಿ ಮಹಾಪರಾಧವಾದುದರಿಂದ ಫೆ. 14 ರಂದು ಅವನ ಶಿರಚ್ಛೇದಗೊಳಿಸಲಾಯಿತು. ಹೀಗೆ ಪ್ರೇಮಿಗಳನ್ನು ಒಂದುಗೂಡಿಸುತ್ತಿದ್ದ ಸಂತ ವ್ಯಾಲೆಂಟೈನ್ ನ ಮರಣದ ದಿನವಾದ ಫೆ. 14 ನ್ನು ಅವನ ಸ್ಮರಣಾರ್ಥ ವ್ಯಾಲೆಂಟೈನ್ಸ್ ಡೇ ಎಂದೇ ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.

ವಾಸ್ತವವಾಗಿ ಪ್ರೇಮಿಗಳ ದಿನಾಚರಣೆ ಎಂಬ ಕಲ್ಪನೆಯೇ ವಿಚಿತ್ರ, ಏಕೆಂದರೆ ಪ್ರೀತಿ ಎನ್ನುವುದು ಯಾವುದೊಂದು ದಿನಕ್ಕೆ ಸೀಮಿತವಾಗಿಲ್ಲ. ಇದು ಜಗತ್ತಿನಲ್ಲಿ ಜೀವ ಎನ್ನುವುದು ಇರುವವರೆಗೂ ಪ್ರತಿ ಕ್ಷಣ ಇರುವ ಭಾವನೆ. ಇದನ್ನು ವ್ಯಕ್ತಪಡಿಸಲು ಯಾವುದೇ ಸಮಯ, ಸಂದರ್ಭ ಹಾಗೂ ಯಾರ ಅಪ್ಪಣೆಯೂ ಬೇಕಾಗಿಲ್ಲ.

ಪ್ರೇಮಿಗಳ ದಿನಾಚರಣೆಯ ಮೂಲ

ಪ್ರೇಮಿಗಳ ದಿನವನ್ನು ಹಿಂದೆ ಬೇರೆ ಬೇರೆ ದಿನಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಆಚರಿಸುತ್ತಿದ್ದರು. ಆದರೆ ಇಂದು ನಾವು ಮಾತಾನಾಡುತ್ತಿರುವ ಪ್ರೇಮಿಗಳ ದಿನಾಚರಣೆಯು ಕ್ರಿ.ಶ 270 ರಲ್ಲಿ ಎರಡನೆ ಕ್ಲಾಡಿಯಸ್‍ನ ಅವಧಿಯಲ್ಲಿ ಜಾರಿಗೆ ಬಂದಿತು. ಕ್ಲಾಡಿಯಸ್‍ಗೆ ತಮ್ಮ ಯುವಕರು ಯುದ್ಧದ ಸಂದರ್ಭದಲ್ಲಿ ಮದುವೆಯಾಗುವುದು ಇಷ್ಟವಿರಲಿಲ್ಲ. ಏಕೆಂದರೆ ಆತನ ಪ್ರಕಾರ ಯುವಕರು ಮದುವೆಯಾಗದೆ ಒಬ್ಬಂಟಿಯಾಗಿದ್ದಷ್ಟು ಯುದ್ಧದಲ್ಲಿ ಉತ್ತಮ ರೀತಿಯಲ್ಲಿ ಹೋರಾಡುತ್ತಾರೆ ಎಂಬ ಭಾವನೆಯಾಗಿತ್ತು. ಹೀಗಿದ್ದಾಗ ಬಿಷಪ್ ವ್ಯಾಲೇಂಟಿನ್ ಕ್ಲಾಡಿಯಸ್‍ನ ಈ ನಿರ್ಧಾರದ ಬಗ್ಗೆ ಅಸಮಾಧಾನ ಹೊಂದಿದ್ದನು. ಆತನು ಮದುವೆಯಾಗಲು ಇಚ್ಛಿಸುವವರನ್ನು ರಹಸ್ಯವಾಗಿ ಮದುವೆ ಮಾಡಿಸುತ್ತಿದ್ದ. ಈ ಅಪರಾಧಕ್ಕಾಗಿ ಅವನನ್ನು ಫೆಬ್ರವರಿ 14 ರಂದು ಸೆರಮನೆಗೆ ತಳ್ಳಲಾಯಿತು. ಈ ಬಿಷಪ್ ತನ್ನ ಸಾವಿಗೆ ಮೊದಲು ” ಇಂತಿ ನಿಮ್ಮ ವ್ಯಾಲೆಂಟೈನ್ ” ಎಂದು ಸಹಿ ಮಾಡಿದ ಪ್ರೇಮ ಪತ್ರವನ್ನು ಬರೆದು ಸತ್ತನು. ಹಾಗಾಗಿ ಪ್ರೇಮಿಗಳನ್ನು ಒಂದುಗೂಡಿಸುತ್ತಿದ್ದ ವ್ಯಾಲೆಂಟೈನ್ ನ ಮರಣದ ದಿನವಾದ ಫೆ. 14 ನ್ನು ಅವನ ಸ್ಮರಣಾರ್ಥ ವ್ಯಾಲೆಂಟೈನ್ಸ್ ಡೇ ( ಪ್ರೇಮಿಗಳ ದಿನ ) ಎಂದು ಕರೆಯಲಾಗುತ್ತದೆ.

ಕೆಂಪು ಗುಲಾಬಿ

ಕೆಂಪು ಗುಲಾಬಿಗಳು ಎಲ್ಲೆಡೆಯು ಪ್ರೀತಿ ಮತ್ತು ಮಧುರ ಬಾಂಧವ್ಯಕ್ಕೆ ಚಿಹ್ನೆಯಾಗಿ ಬಳಕೆಯಾಗುತ್ತವೆ. ಬಹುಶಃ ಇದು ರೋಮನ್‍ರ ಪ್ರೀತಿಯ ದೇವತೆಯಾದ ಶುಕ್ರನಿಗೆ ಅತ್ಯಂತ ಪ್ರೀತಿ ಪಾತ್ರ ಹೂವಾಗಿರುವುದರಿಂದ ಈ ಸ್ಥಾನಮಾನ ದೊರೆತಿದೆಯೇನೊ? 

 ಈಗ ನಿಮ್ಮ ಪ್ರೀತಿಯ ಅಗಾಧತೆಯನ್ನು ವ್ಯಕ್ತಪಡಿಸಲು ಎಂತಹ ಹೂವುಗಳು ಬೇಕು ಎಂಬುದನ್ನು ನೀವೇ ಆಲೋಚಿಸಬೇಕು. ಕೇವಲ ಅಮೆರಿಕಾವೊಂದರಲ್ಲೆ ಈ ದಿನದಂದು ಸುಮಾರು 200 ದಶಲಕ್ಷದಷ್ಟು ಗುಲಾಬಿ ಹೂಗಳು ಮಾರಾಟವಾಗುತ್ತವೆಯೆಂದರೆ ನೀವೇ ಊಹಿಸಿ.

ಅಮರ ಮಧುರ ಪ್ರೇಮ, ಅಧರ ಮಧುರ ಚುಂಬನ

2011 ರಷ್ಟು ಹಿಂದಕ್ಕೆ ಹೋದಾಗ ನಮಗೆ ಒಂದು ಕುತೂಹಲಕಾರಿ ಸ್ಪರ್ಧೆಯು ಕಂಡು ಬರುತ್ತದೆ. ಅದೆಂದರೆ ಧೀರ್ಘ ಚುಂಬನ ಸ್ಪರ್ಧೆ. ಥೈಲ್ಯಾಂಡ್‍ನಲ್ಲಿ ಫೆಬ್ರವರಿ 14 ರಂದು ಈ ಸ್ಪರ್ಧೆ ನಡೆಯಿತು. ಸ್ಪರ್ಧಿಗಳು ಕುಳಿತುಕೊಳ್ಳುವಂತಿಲ್ಲ, ಮಲಗುವಂತಿಲ್ಲ, ಒಬ್ಬರಿಂದ ಒಬ್ಬರು ಬೇರೆಯಾಗುವಂತಿಲ್ಲ. ಒಂದು ವೇಳೆ ಹೀಗೆ ಮಾಡಿದರೆ ಅವರನ್ನು ಸ್ಪರ್ಧೆಯಿಂದ ಹೊರಗೆ ಕಳುಹಿಸಲಾಗುತ್ತದೆ. ಯಾವುದಾದರು ಸ್ಪರ್ಧಿ ನಿಶ್ಶಕ್ತಗೊಂಡರೆ ಅರ್ಧಗಂಟೆ ಅವಧಿಯನ್ನು ಅವರಿಗೆ ನೀಡಲಾಗುತ್ತದೆ. ಈ ಸ್ಪರ್ಧೆಯಲ್ಲಿ ವಿಜೇತರಾದ ಜೋಡಿಯ ದಾಖಲೆ 46 ಗಂಟೆ 24 ನಿಮಿಷದ ದೀರ್ಘ ಚುಂಬನವಾಗಿರುತ್ತದೆ. ಈ ದಾಖಲೆ ಬರೆದ ಜೋಡಿಗೆ 3,200 ಡಾಲರ್ ಮೊತ್ತದ ವಜ್ರದ ಉಂಗುರವನ್ನು ನೀಡಲಾಯಿತು.

ಚಾಕೊಲೇಟ್ ಮುಲಾಮು

1800 ಕ್ಕೂ ಹಿಂದೆ ವೈದ್ಯರು ಭಗ್ನ ಪ್ರೇಮಿಗಳಿಗೆ ಚಾಕೊಲೇಟನ್ನು ತಿನ್ನುವಂತೆ ಸಲಹೆ ನೀಡುತ್ತಿದ್ದರಂತೆ. ಆಗ ಅದನ್ನು ತಿಂದ ರೋಗಿಗಳು ತಮ್ಮ ಮೊದಲ ಪ್ರೇಮದ ದುರಂತದ ದುಃಖವನ್ನು ಪರಿಹರಿಸಿಕೊಂಡ ಭಾವನೆಯನ್ನು ವ್ಯಕ್ತಪಡಿಸಿದರಂತೆ. ಇದು ನಿಜಕ್ಕು ತಮಾಷೆಯ ವಿಚಾರ, ಇಂದು ಸುಮಾರು ಹುಡುಗಿಯರು ಮತ್ತು ಹೆಂಗಸರು ಚಾಕೊಲೇಟ್ ಎಂದರೆ ಜೀವ ಬಿಡುತ್ತಾರೆ, ಯಾವಾಗ ತಮಗೆ ಪ್ರೀತಿ ಕೈಕೊಡುತ್ತದೊ ಎಂಬ ಭಯವಿರಬಹುದೆ ?

ಅಂದು ಸಾರ್ವಜನಿಕ ರಜಾ ದಿನವನ್ನಾಗಿ ಘೋಷಿಸಲಾಯಿತು !

ಇಂಗ್ಲೆಂಡಿನ ರಾಜ ಏಳನೆಯ ಹೆನ್ರಿಯು ಫೆಬ್ರವರಿ 14 ನ್ನು ಸೆಂಟ್ ವ್ಯಾಲೆಂಟೈನ್ಸ್ ಡೇ ಎಂದು ಘೋಷಿಸಿ, ಅಧಿಕೃತ ರಜಾದಿನವನ್ನಾಗಿ ಘೋಷಣೆ ಮಾಡುವವರೆಗೂ ಇದು ರಜಾದಿನವಾಗಿರಲಿಲ್ಲ. ಆದರೆ ಇಂದು ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಈ ದಿನವನ್ನು ಸಾರ್ವಜನಿಕ ರಜಾದಿನವನ್ನಾಗಿ ಘೋಷಿಸಲಾಗಿದೆ.

ಏನೇ ಇರಲಿ.. 

ರಜಾ ಪಡೆದು ಮಜಾ ಮಾಡುತ್ತಾ, ಚಾಕೊಲೇಟ್ ತಿಂದು, ಗುಲಾಬಿ ಹಂಚಿ ಪ್ರೇಮಿಗಳ ದಿನವನ್ನು ಆಚರಿಸಲು ಅನುವು ಮಾಡಿಕೊಟ್ಟ ರಾಜ ಹೆನ್ರಿಗೆ ನಾವು ಧನ್ಯವಾದಗಳನ್ನು ಹೇಳಲೆಬೇಕು. ಅಲ್ವಾ ?


ಹೇಮಂತ ಚಿನ್ನು

ಕರ್ನಾಟಕ ಶಿಕ್ಷಕರ ಬಳಗ

- Advertisement -
- Advertisement -

Latest News

ವಿದ್ಯಾರ್ಜನೆ ಯಾತಕ್ಕಾಗಿ?

ತಾವು ಕಲಿತು ಆರoಕಿ ಸಂಬಳ ಗಿಟ್ಟಿಸುವ ಕೆಲಸಕ್ಕೆ ಅರ್ಹತೆ ಪಡೆದಿಲ್ಲ. ತನ್ನ ಮಕ್ಕಳು ಪ್ರಾರಂಭದಲ್ಲಿಯೇ ಆರoಕೆ ಸಂಬಳ ಗಿಟ್ಟಿಸುವಾಗ ಯಾವ ಹೆತ್ತವರು ಬೀಗುವುದಿಲ್ಲ ಹೇಳಿ...ಈಗಿನ ದಿನಗಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group