spot_img
spot_img

ಸೋಮನ ಕುಣಿತ ಕಲಾವಿದರು ನೆಟ್ಟೇಗೆರೆ ದ್ಯಾವೇಗೌಡರು

Must Read

- Advertisement -

ಬೆಂಗಳೂರು ಮೈಸೂರು ಹೆದ್ದಾರಿಯ ರಾಮನಗರದ ಬಳಿ ಇರುವ ಜಾನಪದ ಲೋಕದಲ್ಲಿ  ಭಾನುವಾರ ನಡೆದ ಜಾನಪದ ಲೋಕೋತ್ಸವದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು ನೆಟ್ಟೇಗೆರೆ ಗ್ರಾಮದ ಸೋಮನ ಕುಣಿತ ಕಲಾವಿದರಾದ ದ್ಯಾವೇಗೌಡ ಎಂ.ಎಂ. ಇವರಿಗೆ ಕರ್ನಾಟಕ ಜಾನಪದ ಪರಿಷತ್ತಿನ 2024ನೇ ಸಾಲಿನ ಜಾನಪದ ಲೋಕ ಪ್ರಶಸ್ತಿ ಲಭಿಸಿತು.

ದ್ಯಾವೇಗೌಡರು ನನ್ನ ಮಿತ್ರ ರಮೇಶ ಅವರ ಪತ್ನಿಯ ಸೋದರಮಾವ. ರಮೇಶರಿಂದ  ಪರಿಚಯವಾಗಿ ಕಲಾವಿದರು ತಮ್ಮ ಜನಪದ ಕಲೆಯ ಕುರಿತಾಗಿ ಮಾತನಾಡಿದರು. 

ದ್ಯಾವೇಗೌಡರು ವಂಶಪಾರಂಪರಿಕವಾಗಿ ಬಂದ ಅರ್ಚಕ ವೃತ್ತಿಯ ಜೊತೆಗೆ ಸೋಮನ ಕುಣಿತ ಕೂಡ ರೂಢಿಸಿಕೊಂಡಿದ್ದಾರೆ. ಇವರ ತಂದೆ ದಿವಂಗತ ಮಳಲಿಗೌಡರು ಸೋಮನ ಕುಣಿತದ ಅಪೂರ್ವ ಕಲಾವಿದರಾಗಿದ್ದರು. ಚನ್ನರಾಯಪಟ್ಟಣ ತಾ. ನೆಟ್ಟೇಗೆರೆ ಗ್ರಾಮದ ಗ್ರಾಮ ದೇವತೆ ಅಮ್ಮ (ದೇವಮ್ಮ) ದೇವರ ಅರ್ಚಕರಾಗಿದ್ದರು. ಪರಂಪರಾಗತವಾಗಿ ತಂದೆಯಿಂದ ಬಂದ ಅರ್ಚಕ ವೃತ್ತಿಯನ್ನು ಮಾಡುತ್ತಲೇ ಸೋಮನ ಕುಣಿತ ಕಲೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ದೂತರಾಯ ಸೋಮನ ಕುಣಿತ ಹಳೆ ಮೈಸೂರು ವ್ಯಾಪ್ತಿಯಲ್ಲಿ ಇನ್ನೂ ಜೀವಂತವಾಗಿರುವಂತಹ ವಿಶಿಷ್ಟ ಜನಪದ ಕಲೆ. ಊರಿನ ಮುಖ್ಯ ಜಾತ್ರೆ ಹಬ್ಬಗಳಲ್ಲಿ ಗ್ರಾಮ ದೇವತೆ ಬಳಿ ಸೋಮ ಇಲ್ಲದಿದ್ದರೆ ಗ್ರಾಮ ದೇವತೆಗೆ ಶೋಭೆ ಇರುವುದಿಲ್ಲ. ಸೋಮನ ಕುಣಿತ ಇಲ್ಲದಿದ್ದರೆ ಉತ್ಸವಕ್ಕೆ ಕಳೆ ಇರುವುದಿಲ್ಲ. ದ್ಯಾವೇಗೌಡರು ದೂತರಾಯ ಸೋಮನನ್ನು ಹೊತ್ತು ಕುಣಿಯುವ ಶೈಲಿ ಇಂದಿಗೂ ಆಕರ್ಷಣೀಯ ಎಂಬುದಾಗಿ ಸನ್ಮಾನ ಪತ್ರದಲ್ಲಿ ತಿಳಿಸಿದೆ. ನಿಮ್ಮ ಈ ಕಲೆಯನ್ನು ಗುರುತಿಸಿದವರು ಯಾರು ಎಂದೆ.      

- Advertisement -

ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾಗಿರುವ ಡಾ. ಹಿ.ಶಿ.ರಾಮಚಂದ್ರೇಗೌಡರು ಒಮ್ಮೆ ನಮ್ಮೂರಿನ ದೇವರ ಉತ್ಸವದಲ್ಲಿ ನನ್ನ ಸೋಮನ ಕುಣಿತ ನೋಡಿ ಇಷ್ಟಪಟ್ಟರು. ತಾವು ಕೂಡ ಕುಣಿಯಲು ಪ್ರಯತ್ನಿಸಿದರು.. ಇವರ ಈ ನೃತ್ಯ ಕಲೆಯನ್ನು ಗುರುತಿಸಿ ಕರ್ನಾಟಕ ಜಾನಪದ ಪರಿಷತ್ತು ತಾ.11-2-2024 ರಂದು ಜಾನಪದ ಲೋಕದಲ್ಲಿ 2 ದಿನಗಳ ಕಾಲ ನಡೆದ ಲೋಕೋತ್ಸವದಲ್ಲಿ ಶ್ರೀ ಆದಿಚುಂಚನಗಿರಿ ಪೀಠಾಧ್ಯಕ್ಷರಾಗಿದ್ದ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮಿಗಳ ಹೆಸರಿನಲ್ಲಿ ನೀಡಿರುವ ದತ್ತಿ ನಿಧಿಯಿಂದ ಜಾನಪದ ಲೋಕ ಪ್ರಶಸ್ತಿ ಜೊತೆಗೆ ಪ್ರಶಸ್ತಿ ಮೊತ್ತವಾಗಿ ಹತ್ತು ಸಾವಿರ ರೂ.ಗಳನ್ನು ಪಡೆದಿದ್ದಾರೆ. ಈಗಿನ ಪೀಠಾಧ್ಯಕ್ಷರಾಗಿರುವ ಶ್ರೀ ಡಾ.ನಿರ್ಮಲಾನಂದ ಸ್ವಾಮೀಜಿಯವರು ದ್ಯಾವೇಗೌಡರನ್ನು ಸನ್ಮಾನಿಸಿ ಗೌರವಿಸಿದ್ದಾರೆ.

ದ್ಯಾವೇಗೌಡರು ವೃತ್ತಿಯಲ್ಲಿ ಶಿಕ್ಷಕರು. ಮುಖ್ಯೋಪಾಧ್ಯಾಯರಾಗಿ ನಿವೃತ್ತರು. ಯುವಕರಿಗೆ ಸೋಮನ ಕುಣಿತ ಕಲಿಸುತ್ತಿರುವ ಇವರಿಗೆ 20 ವರ್ಷ ವಯಸ್ಸು ಇದ್ದಾಗಲೇ ಸೋಮನ ಕುಣಿತ ಪ್ರಾರಂಭಿಸಿ ಪಳಗಿದ್ದಾರೆ. ಇವರ ತಂದೆ ಮಳಲಿಗೌಡರು ಸುತ್ತಲ ಹದಿನೈದು ಹಳ್ಳಿಗಳಲ್ಲಿ ಸೋಮನ ಕುಣಿತಕ್ಕೆ ಹೋಗುತ್ತಿದ್ದರಂತೆ. ಚನ್ನರಾಯಪಟ್ಟಣ ತಾ. ವಾರನಹಳ್ಳಿ, ಮಂಜೇನಹಳ್ಳಿ, ಚೌಳಗಾಲ, ಬನವಾಸೆ, ತಿಪ್ಪೂರು, ಸಾತೇನಹಳ್ಳಿ, ಬಾಗೂರು ಹೀಗೆ ಹಳ್ಳಿಗಳಲ್ಲಿ ಇವರ ತಂದೆ ದೇವರ ಉತ್ಸವಕ್ಕೆ ಸೋಮನ ಕುಣ ತ ಪ್ರದರ್ಶಿಸಿದ್ದು ದ್ಯಾವೇಗೌಡರು ಏಳು ಹಳ್ಳಿಗಷ್ಟೇ ಸೀಮಿತವಾಗಿದ್ದಾರೆ.


ಗೊರೂರು ಅನಂತರಾಜು, ಹಾಸನ.

- Advertisement -

ಮೊ: 9449462879

ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್ ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group