spot_img
spot_img

ಭೂಮಿಕಾ ಅಸೊಸಿಯೇಟ್ಸ ನಿಂದ ಗಾಯನದ ಸಿಂಚನ

Must Read

- Advertisement -

ಮೈಸೂರು -ನಗರದ ಚಾಮುಂಡಿಪುರದಲ್ಲಿರುವ ಭೂಮಿಕಾ ಅಸೋಸಿಯೇಟ್ಸ್ ಹಾಗೂ ದಿ.ಮೈಕ್ ಚಂದ್ರು ಗೆಳೆಯರ ಬಳಗ ಇವರುಗಳ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ನಾದಬ್ರಹ್ಮ ಸಂಗೀತಾ ಸಭಾದಲ್ಲಿ ‘ನೆನಪಿನ ದೋಣಿ’ ೬೦, ೭೦, ೮೦, ೯೦ರ ದಶಕದಲ್ಲಿ ಮನಸೂರೆಗೊಂಡ ಜನಪ್ರಿಯ ಕನ್ನಡ-ಹಿಂದಿ ಚಲನಚಿತ್ರಗೀತೆಗಳ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕು.ಹಂಸಿನಿ ಎಸ್.ಕುಮಾರ್, ಶ್ರೀಮತಿ ದಿವ್ಯ ಸಚ್ಚಿದಾನಂದ, ಡಾ.ಶರ್‌ಮಲಿ ಎಸ್.ರೈ, ಸಿಂಚನ ಕಸ್ತೂರಿ, ನಿತಿನ್ ರಾಜಾರಾಮಶಾಸ್ತ್ರಿ, ಅಶ್ವಿನ್ ಪ್ರಭು, ಮೈಸೂರು ಆನಂದ್ ಇವರುಗಳು ತಮ್ಮ ಸಿರಿಕಂಠದಿಂದ ೩೦ಕ್ಕೂ ಅಧಿಕ ಹಾಡುಗಳನ್ನು ಹೇಳಿ ಸಭಿಕರ ಮನಸೂರೆಗೊಂಡರು.

ಲೈವ್ ವಾದ್ಯವೃಂದಲ್ಲಿ ರಿದಂ ಪ್ಯಾಡ್‌ನಲ್ಲಿ ವಿನಯ್ ರಂಗಧೋಳ್, ಕೀಬೋರ್ಡ್ನಲ್ಲಿ ಮೆಲ್ವಿನ್ ರಿಮಾ, ಸ್ಯಾಕ್ಸಾಫೋನ್‌ನಲ್ಲಿ ಹರೀಶ್ ಪಾಂಡವ್, ಗಿಟಾರ್‌ನಲ್ಲಿ ಪ್ರದೀಪ್ ಕಿಗ್ಗಾಲ್, ಕೊಳಲಿನಲ್ಲಿ ವರ್ಷ ಆಚಾರ್, ತಬಲಾದಲ್ಲಿ ಆತ್ಮಾರಾಮ್, ಡೋಲಕ್‌ನಲ್ಲಿ ರೋಷನ್ ಸೂರ್ಯ, ಡ್ರಮ್ಸ್ನಲ್ಲಿ ಆದಿತ್ಯ ಭಾರದ್ವಾಜ್ ಸಹಕಾರ ನೀಡಿದರು.ನಿರೂಪಣೆಯನ್ನು ಆಕಾಶವಾಣಿ ನಿರೂಪಕ ಮಂಜುನಾಥ್ ಸೊಗಸಾಗಿ ನಿರ್ವಹಿಸಿದರು.

- Advertisement -

ನಂತರ ಮಾತನಾಡಿದ ಮೈಸೂರು ಆನಂದ್ ಇದರ ಕೇಂದ್ರಬಿಂದು ಭೂಮಿಕಾ ಅಸೋಸಿಯೇಟ್ಸ್ ಮಾಲೀಕರಾದ ಸುರೇಶ್. ಅವರು ಎಲೆಮರೆಯ ಕಾಯಿ ಹಾಗೆ ಇದ್ದುಕೊಂಡು ವರ್ಷಕ್ಕೆ ಒಂದೇ ಕಾರ್ಯಕ್ರಮ ಮಾಡೋದು. ೪-೫ ತಿಂಗಳ ಹಿಂದೆಯೇ ಇದಕ್ಕೆ ಬೇಕಾಗುವ ಪೂರ್ವ ತಯಾರಿ ಮಾಡಿಕೊಳ್ಳುತ್ತಾರೆ. ಹಾಡಿನ ಸೆಲೆಕ್ಷನ್‌ನಿಂದ ಹಿಡಿದು ಪ್ರತಿಯೊಂದು ಜವಾಬ್ದಾರಿಯನ್ನು ಅವರೇ ವಹಿಸಿಕೊಳ್ಳುತ್ತಾರೆ ಎಂದು ಅವರನ್ನು ಪ್ರಶಂಸಿಸಿದರು.

ವೇದಿಕೆ ಕಾರ್ಯಕ್ರಮ ಇರಲಿಲ್ಲ. ಪ್ರಾರ್ಥನೆಯಲ್ಲಿ ನಿತಿನ್ ರಾಜಾರಾಮ್ ಶಾಸ್ತ್ರಿ ಮಾಡಿದರು. ಹೆ ಮೇರೆ ವತನ್, ಜಯ ಜಯ ರಾಮ, ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ, ಒಲಿದ ಜೀವ ಜೊತೆಯಲಿರಲು ಬಾಳು ಸುಂದರ, ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ ಹೀಗೆ ಅನೇಕ ಹಾಡುಗಳನ್ನು ಕಲಾವಿದರು ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದರು. ಮಳೆಯ ಸಿಂಚನದ ನಡುವೆಯೂ ಗಾಯನ ಸಿಂಚನಕ್ಕೆ ತೊಂದರೆಯಾಗಲಿಲ್ಲ. ಪ್ರೇಕ್ಷಕರು ಹಾಡುಗಳನ್ನು ಆಸ್ವಾದಿಸಿದರು.

- Advertisement -
- Advertisement -

Latest News

ಹಿರಿಯರು ಕುಟುಂಬದ ಬಲವಾದ ಅಡಿಪಾಯ — ಸಿದ್ದಲಿಂಗ ಕಿಣಗಿ

    ಸಿಂದಗಿ - ಅಜ್ಜಿಯರು ಕುಟುಂಬದ ದೊಡ್ಡ ಸಂಪತ್ತು, ಪ್ರೀತಿಯ ಪರಂಪರೆಯ ಸ್ಥಾಪಕರು, ಶ್ರೇಷ್ಠ ಕಥೆಗಾರರು ಮತ್ತು ಸಂಪ್ರದಾಯದ ಪಾಲಕರು. ಅಜ್ಜ-ಅಜ್ಜಿಯರು ಕುಟುಂಬದ ಬಲವಾದ...
- Advertisement -

More Articles Like This

- Advertisement -
close
error: Content is protected !!
Join WhatsApp Group