spot_img
spot_img

ಜಾತ್ರೆಗಳಿಂದ ಭಾವೈಕ್ಯತೆಯನ್ನು ಸಾರಿದಂತಾಗುತ್ತದೆ – ಈರಣ್ಣ ಕಡಾಡಿ

Must Read

- Advertisement -

ಸಂಭ್ರಮದಿಂದ ಜರುಗಿದ ಮಡ್ಡಿ ವೀರಭದ್ರ ದೇವರ ಜಾತ್ರೆ

ಮೂಡಲಗಿ :ಧಾರ್ಮಿಕ ಆಚರಣೆಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿವೆ. ಜಾತ್ರಾಮಹೋತ್ಸವಗಳಲ್ಲಿ ಭೇದ-ಭಾವಗಳನ್ನು ಮರೆತು ಎಲ್ಲ ಜನಾಂಗದ ಜನರು ಸೇರಿ ಜಾತ್ರೆಯನ್ನು ಮಾಡುವುದರಿಂದ ನಮ್ಮ ಮಕ್ಕಳಿಗೆ ಸಂಸ್ಕೃತಿ, ಸಂಪ್ರದಾಯದ ಅರಿವು ಮೂಡಿಸಿ ಭಾವೈಕ್ಯತೆಯ ಸಂಕೇತವನ್ನು ಸಾರೋಣಾ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು

ಪಟ್ಟಣದ ಈರಣ್ಣ ನಗರದ ವೀರಭದ್ರೇಶ್ವರ ದೇವಸ್ಥಾನದ ನೂತನವಾಗಿ ನಿರ್ಮಿಸಿದ ಗೋಪುರ ಉದ್ಘಾಟನೆ, ಕಳಸಾರೋಹಣ ಕಾರ್ಯಕ್ರಮವು ಶ್ರೀಗಳ ಅಮೃತ ಹಸ್ತದಿಂದ ಅದ್ದೂರಿ ಸೋಮವಾರದಂದು ಜರುಗಿತು ನಂತರ ನಡೆದ ಸತ್ಸಂಗ ಸಮ್ಮೇಳನದ  ಕಾರ್ಯಕ್ರಮದ ವೇದಿಕೆಯಲ್ಲಿ  ಅತಿಥಿಯಾಗಿ ಅವರು ಮಾತನಾಡಿದರು.

- Advertisement -

ಮಡ್ಡಿ ವೀರಭದ್ರೇಶ್ವರ ದೇವಸ್ಥಾನದ ಗೋಪುರವನ್ನು ಅತ್ಯದ್ಭುತವಾಗಿ ನಿರ್ಮಿಸಲಾಗಿದ್ದು, ದೇವಸ್ಥಾನಕ್ಕೆ ಒಂದು ಹೊಸ ಸೊಬಗನ್ನು ನೀಡಿದಂತಾಗಿದೆ. ದೇವಸ್ಥಾನದ ಅಭಿವೃದ್ದಿಗೆ ರಾಜ್ಯಸಭೆಯ ಸಂಸದರ ನಿಧಿಯಲ್ಲಿ 10 ಲಕ್ಷ ರೂ, ಅನುದಾನ ನೀಡುವುದಾಗಿ ಭರವಸೆ ನೀಡಿದ ಅವರು, ಆ ಅನುದಾನದಿಂದ ಮತ್ತಷ್ಟು ದೇವಸ್ಥಾನದಲ್ಲಿ ಅಭಿವೃದ್ಧಿಯಾಗಲ್ಲಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿದ್ದ ಹೊಸದುರ್ಗದ ಭಗೀರಥ ಪೀಠದ ಪುರುಷೋತ್ತಮಾನಂದ ಪುರಿ ಶ್ರೀಗಳು ಶ್ರವಣ ಅಂದರೆ ಕೇಳುವಂಥದ್ದು, ಶ್ರಾವಣ ಮಾಸದಲ್ಲಿ ನಮ್ಮ ಆಚಾರ ವಿಚಾರಗಳಿಗನುಗುಣವಾಗಿ ನಾವು ಬದುಕುತ್ತಿದ್ದೇವೆ. ಅನಿತ್ಯವಾದ ಶರೀರಕ್ಕೆ ಸಾವು ಬರುವ ಮುಂಚೆಯೇ ಪುಣ್ಯ ಸಂಪಾದನೆ ಮಾಡಬೇಕು ಅದಕ್ಕಾಗಿ ದಾನ ಧರ್ಮ ಮಾಡಬೇಕು, ಬಡವರಿಗೆ ಸಹಾಯ ಮಾಡಬೇಕು, ದಯೆ ಪ್ರೀತಿ ಕರುಣೆ ಇಂಥ ಮಾನವೀಯ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿ ಕೊಂಡು ಹೋಗಬೇಕು. ಬಿದ್ದವನನ್ನು ಮೇಲಕ್ಕೆತ್ರುವುದೇ ಧರ್ಮ ಪರೋಪಕಾರಾರ್ಥಂ ಇದಂ ಶರೀರಂ ಎಂಬಂತೆ ಎಲ್ಲ ಜೀವಗಳಿಗೆ ಉಪಕಾರ ಮಾಡಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದರು.

ಕೂಡಲಸಂಗಮ ಪೀಠದ ಜಯ ಮೃತ್ಯುಂಜಯ ಶ್ರೀಗಳು ಮಾತನಾಡಿ, ವೀರಭದ್ರೇಶ್ವರ ಪ್ರಾಚೀನ ಪುರುಷ ಎಲ್ಲ ರೀತಿಯ ಭಕ್ತರನ್ನು ಹೊಂದಿದ್ದಾರೆಂದು ಹೇಳಿ, ಶ್ರೀ ವೀರಭದ್ರನ ಬಂಗಾರದ ಕಳಸ ನೋಡಿ ನಿಮ್ಮ ಜ್ಞಾನದ ಬಂಗಾರವನ್ನು ಹೆಚ್ಚು ಮಾಡಿಕೊಳ್ಳಿ, ದೇವಸ್ಥಾನದ ಕಂಬ ನೋಡಿ ನಿಮ್ಮ ಕಾಲುಗಳನ್ನು ಕಂಬವನ್ನಾಗಿ ಮಾಡಿಕೊಳ್ಳಿ ಜೀವನ ಸಾರ್ಥಕ ಮಾಡಿಕೊಳ್ಳಿ ಎಂದರು.

- Advertisement -

ವೇದಿಕೆಯಲ್ಲಿ ಅಥಣಿ ಮೋಟಗಿಮಠದ ಪ್ರಭು ಚನ್ನಬಸವ ಮಹಾ ಸ್ವಾಮೀಜಿ, ಪಿ.ವಾಯ್ ಹುಣಶ್ಯಾಳದ ನಿಜಗುಣ ದೇವರು, ನಾಗನೂರ ಗ್ರಾಮದ ಮಾತೋಶ್ರೀ ಕಾವ್ಯಾಶ್ರೀ ಅಮ್ಮನವರು, , ಶ್ರೀ ಮುರುಗೇಂದ್ರ ಸ್ವಾಮೀಜಿ ಶೂನ್ಯ ಸಂಪಾದನ ಮಠ ಗೋಕಾಕ, ಅರಭಾವಿ ಮಠದ ಶ್ರೀ ಗುರು ಬಸವಲಿಂಗ ಸ್ವಾಮೀಜಿ, ಶೇಗುಣಶಿಯ ಮಹಾಂತ  ಪ್ರಭು ಸ್ವಾಮೀಜಿ, ವಿರೂಪಾಕ್ಷ ದೇವರು , ಕಮೀಟಿ ಅಧ್ಯಕ್ಷ ಬಿ ಬಿ  ಹಂದಿಗುಂದ, ಭೀಮಪ್ಪ ಗಡಾದ ಹಾಗೂ ಅನೇಕರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಮೊದಲು ನೂತನ ಗೋಪುರದ ಕಳಸಾರೋಹಣ ಅತ್ಯಂತ ಸಂಭ್ರಮದಿಂದ ನಡೆಯಿತು. ನಂತರ ಶ್ರೀ ವೀರಭದ್ರೇಶ್ವರ ಸನ್ನಿಧಿಯಲ್ಲಿ ಭಕ್ತರು ಕಿಚ್ಚು ಹಾಯ್ದರು. ಪುರವಂತರು ಒಡಪುಗಳನ್ನು ಹೇಳಿ ವೀರಭದ್ರನ ಗುಣಗಾನ ಮಾಡಿದರು. ಜಾತ್ರೆಯ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು, ಪ್ರವಚನಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.

- Advertisement -
- Advertisement -

Latest News

ಮನ ಸೆಳೆದ ಶಾಂತಲಾ ಆರ್ಟ್ ಗ್ರೂಪ್ ಶೋ

ಕಲಾವಿದನು ಮೂಲತಃ ಸೌಂದರ್ಯ ಆರಾಧಕ ಹಾಗೂ ಸೌಂದರ್ಯವನ್ನು ಪ್ರೀತಿಸುವವನು. ಪ್ರಕೃತಿ ಸೌಂದರ್ಯಮಯ ಕಲೆ ಆನಂದಮಯ ಅನ್ನುವಂತೆ ಕಲಾವಿದನು ದೃಶ್ಯಗಳ ನಕಲನ್ನು ಮಾಡಲಾರ ಹಾಗೂ ತನ್ನೊಳಗಿನ ವಿಚಾರ...
- Advertisement -

More Articles Like This

- Advertisement -
close
error: Content is protected !!
Join WhatsApp Group