spot_img
spot_img

ಕಲ್ಪವೃಕ್ಷ ಕ್ಷೇತ್ರದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ೩೫೩ನೇ ರಾಯರ ಆರಾಧನಾ ಮಹೋತ್ಸವ

Must Read

- Advertisement -

ಮೈಸೂರಿನ ನಿರ್ಮಾಣ್ ನಗರ, ಎಂ.ಬಿ.ಹಳ್ಳಿ ರಸ್ತೆ, ಜಂತಗಳ್ಳಿ ಗ್ರಾಮದಲ್ಲಿರುವ ಕಲ್ಪವೃಕ್ಷ ಕ್ಷೇತ್ರ- ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ೩೫೩ನೇ ಆರಾಧನಾ ಮಹೋತ್ಸವವನ್ನು ಏರ್ಪಡಿಸಲಾಗಿದೆ.

ದಿನಾಂಕ:೧೯-೦೮-೨೦೨೪ ರಂದು ಸೋಮವಾರ ಸಂಜೆ:೪:೦೦ ಗಂಟೆಗೆ ಪ್ರಾರ್ಥನೋತ್ಸವ, ಸ್ವಸ್ತಿವಾಚನ, ಮಹಾಮಂಗಳಾರತಿ, ಸಂಜೆ: ೬ ರಿಂದ ೮ ವರೆಗೆ ವಿದ್ವಾನ್ ಶ್ರೀನಿಧಿ ಆಚಾರ್ಯ ರವರಿಂದ ದಾಸ ನಮನ.

ದಿನಾಂಕ:೨೦-೦೮-೨೦೨೪ ರ ಮಂಗಳವಾರ ಪೂರ್ವಾರಾಧನೆ ಅಂಗವಾಗಿ ಬೆಳಿಗ್ಗೆ ೭ ಕ್ಕೆ ಪಂಚಾಮೃತ ಅಭಿಷೇಕ, ಬೆಳಿಗ್ಗೆ ೮ ಗಂಟೆಗೆ ಪೂರ್ಣಪ್ರಜ್ಞ ಹರಿವಾಯುಸ್ತುತಿ ಪಾರಾಯಣ ಸೇವಾಸಮಿತಿ ಇವರಿಂದ ಪಾರಾಯಣ, ೧೦ ಗಂಟೆಗೆ ಹರೇ ಶ್ರೀನಿವಾಸ ಭಜನಾ ಮಂಡಳಿವತಿಯಿಂದ ಭಜನೆ, ೧೧ ಗಂಟೆಗೆ ಮಹಾನೈವೇದ್ಯ, ಮಹಾಮಂಗಳಾರತಿ, ಸಂಜೆ ೬ ಕ್ಕೆ ಪಲ್ಲಕ್ಕಿ ಉತ್ಸವ, ಸಂಜೆ ೬:೩೦ ರಿಂದ ೮:೦೦ ಗಂಟೆಯವರೆಗೆ ಕುಮಾರಿ ಶ್ರೀಲಲಿತಾ ಉಳಿಯಾರ್ ರವರಿಂದ ಹರಿಕಥೆ.

- Advertisement -

ದಿನಾಂಕ:೨೧-೦೮-೨೦೨೪ ರ ಬುಧವಾರ ರಾಯರ ಮಧ್ಯಾರಾಧನೆ, ಬೆಳಿಗ್ಗೆ ೭ ಗಂಟೆಗೆ ಸಹಸ್ರಪಂಚಾಮೃತ ಅಭಿಷೇಕ, ೧೦ ಗಂಟೆಗೆ ಭಜನೆ, ೧೧ ಗಂಟೆಗೆ ಮಹಾನೈವೇದ್ಯ, ಸಂಜೆ ೬ ಗಂಟೆಗೆ ಗಜವಾಹನೋತ್ಸವ, ವಿದ್ವಾನ್ ಆರ್.ಪಿ.ಕೌಶಿಕ್ ಮತ್ತು ತಂಡದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಸುಮದ್ವ ಭಜನಾ ಮಂಡಳಿರವರಿಂದ ಭಜನೆ.

ದಿನಾಂಕ:೨೨-೦೮-೨೦೨೪ ರ ಗುರುವಾರ ಉತ್ತರಾರಾಧನೆ, ಬೆಳಿಗ್ಗೆ ೭ ಗಂಟೆಗೆ ಪಂಚಾಮೃತ ಅಭಿಷೇಕ, ೯ ಗಂಟೆಗೆ ವೇದಘೋಷ, ಭಜನೆ, ಪಾರಾಯಣ ಹಾಗೂ ಮಂಗಳವಾದ್ಯಗಳೊಂದಿಗೆ ನಿರ್ಮಾಣ್ ಲೇಔಟ್‌ನ ರಾಜಬೀದಿಯಲ್ಲಿ ಮಹಾರಥೋತ್ಸವ, ಶ್ರೀ ಜ್ಞಾನಪ್ರಸೂನಾಂಬ ಭಜನಾಮಂಡಳಿ ರವರಿಂದ ಭಜನೆ, ವಿದ್ವಾನ್ ಕೊರ್ಳಳ್ಳಿ ಶ್ರೀನಿವಾಸಚಾರ್ಯ ಮತ್ತು ತಂಡದವರಿಂದ ಸಂಜೆ ೬ ರಿಂದ ೮ ರವರೆಗೆ ವೀಣಾವಾದನ.
ದಿನಾಂಕ:೨೩.೦೮.೨೦೨೪ ರ ಶುಕ್ರವಾರ ಶ್ರೀ ಸುಜ್ಞಾನೇಂದ್ರತೀರ್ಥರ ಆರಾಧನೆ ಪ್ರಯುಕ್ತ ಬೆಳಿಗ್ಗೆ ೭ ಗಂಟೆಗೆ ಪಂಚಾಮೃತ ಅಭಿಷೇಕ, ೯ ಗಂಟೆಗೆ ಪ್ರವಚನ, ೧೧ ಗಂಟೆಗೆ ಮಹಾನೈವೇದ್ಯ, ಮಹಾಮಂಗಳಾರತಿ ಏರ್ಪಡಿಸಲಾಗಿದೆ ಎಂಬುದಾಗಿ ಮೈಸೂರಿನ ಕಲ್ಪವೃಕ್ಷ ಕ್ಷೇತ್ರ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪ್ರಕಟಣೆ ತಿಳಿಸಿದೆ

- Advertisement -
- Advertisement -

Latest News

ಬೆಳಗಾವಿ – ಮನಗೂರು ವಿಶೇಷ ರೈಲು ಅ.16 ರಿಂದ

ಬೆಳಗಾವಿ: ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಂತೆ ಬೆಳಗಾವಿ- ಮನಗೂರು ವಿಶೇಷ ಎಕ್ಸ್ಪ್ರೆಸ್ ರೈಲಿನ ಸಂಚಾರವು ಅ-16 ರಿಂದ ಪ್ರಾರಂಭವಾಗಲಿದೆ ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group