ಗ್ರಾಮೀಣ ಭಾಗದ ಯುವ ಕ್ರೀಡಾ ಪ್ರತಿಭೆ ಸೂರ್ಯಕಾಂತ ಮೆಣಸಿನಕಾಯಿ; ಸಾಧನೆಯ ಸಾಧಕನಿಗೊಂದು ಸಲಾಂ

Must Read

ಕುಡಿಯುವ ನೀರು ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ರುದ್ರೇಶ ಘಾಳೆ

ಬೆಳಗಾವಿ - ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಡೆಸಿದ ಮುಷ್ಕರದಿಂದಾಗಿ ಬೆಳಗಾವಿ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗಿದ್ದು ವಿಷಾದನೀಯವಾಗಿದೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿ...

ಹೆಣ್ಣು ಮಕ್ಕಳು ಪೌಷ್ಠಿಕ ಆಹಾರ ಸೇವನೆ ಮಾಡಬೇಕು – ಡಾ.ನಯನಾ ಭಸ್ಮೇ

ಸವದತ್ತಿ - “ಹೆಣ್ಣು ಮಕ್ಕಳು ಮಾನಸಿಕವಾಗಿ ಹಾಗೂ ದೈಹಿಕವಾಗಿಯೂ ಸದೃಢವಾಗಿರಬೇಕು ಅವರು ಹದಿ ಹರೆಯದ ವಯಸ್ಸಿಗೆ ಬಂದಾಗ ಅವರಲ್ಲಿ ನೈಸರ್ಗಿಕವಾದ ಬದಲಾವಣೆಗಳು ಆಗುತ್ತವೆ ಅಂತಹ ಸಂದರ್ಭದಲ್ಲಿಯೂ...

ಪ್ರೊ.ಅಲಕಾ ಕುರಣೆ ಯವರಿಗೆ ‘ ಶಿಕ್ಷಕ ಶ್ರೀ ‘ ರಾಜ್ಯ ಮಟ್ಟದ ಪ್ರಶಸ್ತಿ

ಬೆಳಗಾವಿ: ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ, ಧಾರವಾಡ ಬೆಂಗಳೂರು ಘಟಕದಿಂದ ನೀಡಲಾಗುವ ರಾಜ್ಯ ಮಟ್ಟದ ಶಿಕ್ಷಕ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಳಗಾವಿಯ...

ಮೂಡಲಗಿ – ಇತ್ತೀಚೆಗೆ ನಡೆದ ಜಪಾನ್ ಒಲಿಂಪಿಕ್ ಕ್ರೀಡಾಕೂಟದ ಕ್ರೀಡಾ ಪಟುಗಳನ್ನು ಕರೆಯಿಸಿ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಪ್ರೋತ್ಸಾಹಿಸಿದ ಫಲವಾಗಿ ಇವತ್ತು ಪ್ಯಾರಾ ಒಲಿಂಪಿಕ್ಸ್ ಕೂಟದಲ್ಲಿ ಪದಕಗಳ ಸುರಿಮಳೆ ಯಾಗುತ್ತಿದೆ. ಆದ್ದರಿಂದ ಸಾಧನೆಯ ಸಾಧಕರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸ್ಥಳೀಯ ಕರುನಾಡು ಪೊಲೀಸ್ ಹಾಗೂ ಸೈನಿಕರ ತರಬೇತಿ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಸವಿತಾ ತುಕ್ಕನ್ನವರ ಹೇಳಿದರು.

ಸಾಧನೆಯ ಸಾಧಕನ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಗ್ರಾಮೀಣ ಭಾಗದ ಯುವಕರಿಗೆ ಶಿಕ್ಷಣ ಹಾಗೂ ಮಾರ್ಗದರ್ಶನದ ಕೊರತೆ ಇದ್ದರೂ ಕೂಡಾ ಅವರು ಮಾಡುವ ಸಾಧನೆಗಳು ಅಪಾರ ಅಂಥ ಸಾಧಕರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಿಸಿದರೆ ಇನ್ನಷ್ಟು ಪ್ರತಿಭೆಗಳು ಹೊರ ಬರಲು ಪೂರಕವಾಗಿರುತ್ತದೆ ಎಂದರು.

- Advertisement -

ಸೂರ್ಯಕಾಂತ ಮೆಣಸಿನಕಾಯಿ 2019/20 ಸಾಲಿನ ಸಿವಿಲ್ ಪೋಲಿಸ್ ಇಲಾಖೆಗೆ ಆಯ್ಕೆ ಚಿಕ್ಕಮಗಳೂರು ಕಡೂರು ಪೋಲಿಸ್ ತರಬೇತಿ ಶಾಲೆಯಲ್ಲಿ ಸುಮಾರು 500 ತರಬೇತಿದಾರರ ಜೊತೆ ತರಬೇತಿ ಹೊಂದಿ ಸರ್ವ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಒಳಾಂಗಣ ವಿಭಾಗದಲ್ಲಿ ಪ್ರಥಮ ಸ್ಥಾನ, ಹೊರಾಂಗಣ ವಿಭಾಗದಲ್ಲಿ ದ್ವಿತೀಯ ಸ್ಥಾನ ಹೀಗೆ ಹಲವು ಕ್ಷೇತ್ರಗಳಲ್ಲಿ ಪ್ರಥಮ ಸ್ಥಾನ ಪಡೆಯುವುದರ ಮೂಲಕ ರಾಜ್ಯದ ಗೃಹ ಸಚಿವರ ಹಾಗೂ ರಾಜ್ಯ ಪೋಲಿಸ್ ಇಲಾಖೆಗೆ ಪ್ರೀತಿ ಪಾತ್ರರಾಗಿದ್ದಾರೆ. ತಾನು ಮಾಡಿದ ಈ ಸಾಧನೆ ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕು ಅದರಲ್ಲೂ ತನ್ನ ಸ್ವಗ್ರಾಮದ ಜನತೆಗೆ ಹೆಮ್ಮೆಯ ವಿಷಯ ಎಂದರೆ ತಪ್ಪಾಗಲಾರದು ಇವರ ಸಾಧನೆ ಅಪಾರ.

ಸಾಧಕನ ಬಾಲ್ಯ ಜೀವನ

ಕಡು ಬಡತನದ ಕುಟುಂಬದಲ್ಲಿ ತಂದೆ ಬಸವರಾಜ ತಾಯಿ ಸೇವಂತಿ ಇವರ ಹಿರಿಯ ಮಗನಾಗಿ ಜನಿಸಿ ತನ್ನ ಬಾಲ್ಯದ ಜೀವನವನ್ನು ತನ್ನ ಮೂಡಲಗಿ ತಾಲೂಕಿನ ಶಿವಾಪೂರ (ಹ) ಗ್ರಾಮದಲ್ಲಿ ಕಳೆದು ತನ್ನ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ಮಾಧ್ಯಮಿಕ ಶಿಕ್ಷಣವನ್ನು ಸಂಕೇಶ್ವರದಲ್ಲಿ ಮುಂದುವರೆಸಿ ಕಡುಬಡತನದ ಪರಿಸ್ಥಿತಿಯಿಂದಾಗಿ ತನ್ನ ಮುಂದಿನ ವ್ಯಾಸಂಗವನ್ನು ಮೊಟಕು ಗೊಳಿಸುವ ಮೂಲಕ ಹೊಟೇಲಿನ ಕೂಲಿ ಕೆಲಸ ಮಾಡಿಕೊಂಡು ಸುಮಾರು ಮೂರು ವರ್ಷಗಳ ನಂತರ ಮತ್ತೆ ಓದಿ ಏನಾದರೂ ಸಾಧನೆ ಮಾಡಬೇಕು ಎಂಬ ಛಲದಿಂದ ಸ್ಥಳೀಯ ಮೂಡಲಗಿ ಆರ್ ಡಿ ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಪಡೆದು ಓದಲು ಪ್ರಾರಂಭಿಸಿದಾಗ ಅವರ ವ್ಯಾಸಂಗದ ಆಸಕ್ತಿ ಎಲ್ಲ ಶಿಕ್ಷಕರ ಪ್ರೀತಿಗೆ ಪಾತ್ರರಾಗುತ್ತಾರೆ. ಪರಿಣಾಮ ಪಿ ಯು ಸಿ ವಿಭಾಗದಲ್ಲಿ ಶೇಕಡಾ 90 ರಷ್ಟು ಅಂಕ ಗಳಿಸಿ ಕಾಲೇಜಿಗೆ ದ್ವಿತೀಯ ಸ್ಥಾನ ಹಾಗೂ ಉನ್ನತ ವ್ಯಾಸಂಗದಲ್ಲಿ ಶೇಕಡಾ 88 ಅಂಕ ಗಳಿಸುವುದರ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನ ಪಡೆದು ಉತ್ತೀರ್ಣರಾದರು, ಮುಂದಿನ ಜೀವನ ಏನು ಎಂಬ ಚಿಂತೆಯಲ್ಲಿ ಇದ್ದ ಸಂದರ್ಭದಲ್ಲಿ ಕಾಲೇಜಿನ ಶಿಕ್ಷಕರಾದ ಶಿವಾನಂದ ಸತ್ತೀಗೆರಿ , ಸಂಗಮೇಶ ಕುಂಬಾರ ಹಾಗೂ ಕರುನಾಡು ಸೈನಿಕ ತರಬೇತಿ ಕೇಂದ್ರ ಮೂಡಲಗಿಯ ಮಾಜಿ ಸೈನಿಕ, ಮಾಜಿ ಸಂಚಾಲಕರ ಮಾರ್ಗದರ್ಶನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಗಾಗಿ ಧಾರವಾಡಕ್ಕೆ ತೆರಳಿ ಕೆಲವೇ ದಿನಗಳಲ್ಲಿ ತಾನು ಕಂಡ ಕನಸುಗಳನ್ನು ನನಸಾಗಿಸಿಕೊಳ್ಳುವುದರ ಮೂಲಕ ರಾಜ್ಯ ಪೋಲಿಸ್ ಇಲಾಖೆಗೆ ಆಯ್ಕೆಯಾಗಿ ಸಾಧನೆಯ ಸಾಧಕನಾಗಿ ಹೊರಹೊಮ್ಮಿದ್ದಾರೆ, ಸೂರ್ಯಕಾಂತ ಮೆಣಸಿನಕಾಯಿ ಅವರಿಗೆ ಸ್ಥಳೀಯ ಕರುನಾಡು ಪೋಲಿಸ್ ಹಾಗೂ ಸೈನಿಕ ತರಬೇತಿ ಕೇಂದ್ರದಲ್ಲಿ ಸತ್ಕರಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಶಿಕ್ಷಕರು ಮತ್ತು ಪ್ರಶಿಕ್ಷಣಾರ್ಥಿಗಳು ಹಾಗೂ ಮಾಧ್ಯಮ ಮಿತ್ರರು, ಹಿತೈಷಿಗಳು ಉಪಸ್ಥಿತರಿದ್ದರು*

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕುಡಿಯುವ ನೀರು ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ರುದ್ರೇಶ ಘಾಳೆ

ಬೆಳಗಾವಿ - ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಡೆಸಿದ ಮುಷ್ಕರದಿಂದಾಗಿ ಬೆಳಗಾವಿ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗಿದ್ದು ವಿಷಾದನೀಯವಾಗಿದೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿ...
- Advertisement -

More Articles Like This

- Advertisement -
close
error: Content is protected !!