ಮಂಗಳೂರು -ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಹಮ್ಮಿಕೊಂಡ ಅಂತಾರಾಜ್ಯ ಮಟ್ಟದ 5 ನೇ ಸಮ್ಮೇಳನವು ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದಲ್ಲಿ ವಿಜೃಂಭಣೆಯಿಂದ ಜೂನ್ 29ರಂದು ಸಿರಿಬಾಗಿಲು ಸಭಾಂಗಣದಲ್ಲಿ ನಡೆಯಿತು.
ರಾಧಾಕೃಷ್ಣ ಉಳಿಯತ್ತಡ್ಕರಿಂದ ದೀಪ ಪ್ರಜ್ವಲನೆಯಿಂದ ಚಾಲನೆ ಗೊಂಡು ವಿ ಬಿ ಕುಲಮರ್ವ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ವಿದ್ವಾನ್ ರಘುಪತಿ ಭಟ್, ಆಕಾಶ ವಾಣಿ ನಿವೃತ್ತ ಎನ್ ವಿ ರಮೇಶ್ ಗದಗಿನ ವೀರನ ಗೌಡ ಗಣಪತಿ ಭಟ್ಟ ವರ್ಗಸರ ಅವರ ಉಪನ್ಯಾಸ ಗಳೂ ಡಾ ವಸಂತ ನಾಯಕ ಅವರ ಆಶಯ ಭಾಷಣ ಹಾಗೂ ಜಿಲ್ಲಾಧ್ಯಕ್ಷ ವೆಂಕಟ್ ಭಟ್ ಅವರ ಭಾಷಣಗಳು ಕ್ರಮವಾಗಿ ನಡೆದವು.
ಸಂಚಾಲಕರು ಕೃಷ್ಣಮೂರ್ತಿ ಕುಲಕರ್ಣಿ ಹಾಗೂ ಪ್ರಾಯೋಜಕ ರಾಮಕೃಷ್ಣ ಮಯ್ಯ ಅಭಿಪ್ರಾಯ ವ್ಯಕ್ತ ಪಡಿಸಿದರು
ಅನಂತರ ಮಂಗಳೂರಿನ ಕಣಚೂರು ಆಸ್ಪತ್ರೆಯ ವೈದ್ಯಕೀಯ ಮುಖ್ಯಸ್ಥ ಹಾಗೂ ಮಂಗಳಾ ಆಸ್ಪತ್ರೆಗಳ ಕ್ಷಾರತಜ್ಞ ಡಾ ಸುರೇಶ ನೆಗಳಗುಳಿ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಅವರು ಮಾತನಾಡುತ್ತಾ ಕವಿಭಾವ ಬಹಳ ಚುಟುಕು ಆದರೂ ಅದು ಕಾವ್ಯವಾಗುವುದು ಹಲವು ತೆರನಾಗಿ ಹಾಗಾಗಿಯೇ ಚುಟುಕು ತನಗ ಮುಕ್ತಕ ಟಂಕ ಮುಂತಾದ ಪ್ರಕಾರ ಉಗಮವಾಗಿರ ಬಹುದು ಎನ್ನುತ್ತಾ ಒಂದೇ ವಿಷಯದಲ್ಲಿ ಹಲವು ಪ್ರಕಾರದ ಸ್ವರಚಿತ ಮಾದರಿ ಓದಿದರು.
ಡಾ ಗೋವಿಂದ ಭಟ್ ಕೊಳಚಪ್ಪೆ ಆಶಯ ಭಾಷಣ ಮಾಡಿದರು.
ಪ್ರೇಮ ಬಿರಾದಾರ,ಲಕ್ಶ್ಮೀ ವಿ ಭಟ್, ಪ್ರಮೀಳಾ ಚುಳ್ಳಿಕ್ಕಾನ ಚಿತ್ರಕಲಾ ದೇವರಾಜ, ದರ್ಶಿನಿ ಚಿರಾಲ್, ಶಶಿಕಲಾ ಟೀಚರ್ ಕುಂಬ್ಳೆ ಮುಂತಾದವರು ಕವನ ವಾಚನ ಮಾಡಿದರು.
ಚುಟುಕು ಸಾಹಿತ್ಯ ಪುಸ್ತಕ ಬಿಡುಗಡೆ, ಕುಲಮರ್ವ ಅವರಿಗೆ ಚುಟುಕು ಚಿನ್ಮಯಿ ಪ್ರಶಸ್ತಿ ಹಾಗೂ ಬಾಲಪ್ರತಿಭೆ ಹುಬ್ಬಳ್ಳಿಯ ಅವನೀಷ ನೀಲಗುಂದ ಅವರನ್ನು ಸನ್ಮಾನಿಸಲಾಯಿತು.ಇದೇ ವೇಳೆ ಸುರೇಶ ನೆಗಳಗುಳಿ ಹಾಗೂ ಕೊಳ್ಚಪ್ಪೆ ಗೋವಿಂದ ಭಟ್ಟರನ್ನು ಗೌರವಿಸಲಾಯಿತು.
ವಿದ್ಯಾ ರೇಖಾ ಸುದೇಶ್ ಪ್ರೇಮಾ ಬಿರಾದಾರ್ ಹಾಗೂ ಡಾ ಗಂಗಯ್ಯ ಕುಲಕರ್ಣಿ ಕ್ರಮವಾಗಿ ನಿರೂಪಣೆ ಗೈದರು. ಜಯಲಕ್ಹ್ಮೀ ಅರುಗೋಳ್ ಸ್ವಾಗತಿಸಿದರು
ಡಾ ವಾಣಿಶ್ರೀ ಸಾರಥ್ಯದ ಗಡಿನಾಡು ಕನ್ನಡ ಸಾಂಸ್ಕೃತಿಕ ಸಂಸ್ಥೆಯ ಮನೋರಂಜನಾ ಕಾರ್ಯಕ್ರಮ ಹಾಗೂ ಕಲ್ಲೂರಾಯ ನೇತೃತ್ವದ ಯಕ್ಷಗಾನ ತಾಳಮದ್ದಳೆ ನಡೆದವು
ಸುರೇಶ ನೆಗಳಗುಳಿ
ಸುಹಾಸ
ಬಜಾಲ್ ಪಕ್ಕಲಡ್ಕ ಮಂಗಳೂರು 575009
9448216674