ಕ್ರೀಡೆ ಮನುಷ್ಯನ ಜೀವನ ಹಾಗೂ ದೈಹಿಕ,ಮಾನಸಿಕ ಸಂಪೂರ್ಣ ಬೆಳವಣಿಗೆಗೆ ಅತ್ಯವಶ್ಯಕ – ಯಶವಂತಕುಮಾರ್

Must Read

ಸಿಂದೋಗಿಃ ಕ್ರೀಡೆ ಮನುಷ್ಯನ ಜೀವನ ಹಾಗೂ ದೈಹಿಕ,ಮಾನಸಿಕ ಸಂಪೂರ್ಣ ಬೆಳವಣಿಗೆಗೆ ಅತ್ಯವಶ್ಯಕ ದೀರ್ಘಕಾಲದ ಆರೋಗ್ಯ ಭಾಗ್ಯಕ್ಕೆ ಹಾಗೂ ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಪ್ರಧಾನವಾಗಿದೆ. ದೇಹವು ಶಕ್ತಿಯುತವಾಗಿರಲು, ಮೆದುಳಿನ ಬೆಳವಣಿಗೆಗೆ ಕ್ರೀಡೆ ಪ್ರಯೋಜನಕಾರಿ.

ಇಂದು ನಮ್ಮ ದೇಶ ವಿವಿಧ ಕ್ರೀಡೆಗಳಲ್ಲಿ ತನ್ನದೇ ಆದ ಸಾಧನೆ ಮಾಡುತ್ತಿದೆ. ಕ್ರಿಕೆಟ್ ಪುಟ್ಬಾಲ್ ಅಂಧರ ಕ್ರಿಕೆಟ್ ಹೀಗೆ ಹಲವು ಕ್ರೀಡೆಗಳಲ್ಲಿ ಸಾಧನೆ ಮಾಡುತ್ತಿರುವ ಕ್ರೀಡಾಪಟುಗಳ ಆಟದ ವೈಖರಿ ಗಮನಿಸಿ.ಸಿಂದೋಗಿ ಪ್ರೌಢಶಾಲಾ ಆವರಣದಲ್ಲಿ ವಿವಿಧ ಕ್ರೀಡೆಗಳ ಆವರಣ ನಿರ್ಮಾಣ ಬಹಳ ಅಚ್ಚುಕಟ್ಟಾಗಿ ನಿರ್ಮಾಣ ಗೊಂಡಿದೆ. ಇದರ ಸದುಪಯೋಗ ವಿದ್ಯಾರ್ಥಿಗಳು ಪಡೆದು ತಾವೂ ಕೂಡ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಸಾಧನೆ ಮಾಡಿರಿ ”ಎಂದು ಸವದತ್ತಿ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾ ಅಧಿಕಾರಿಗಳಾದ ಯಶವಂತಕುಮಾರ್ ಅಭಿಪ್ರಾಯ ಪಟ್ಟರು.

ಅವರು ಸವದತ್ತಿ ತಾಲೂಕಿನ ಸಿಂದೋಗಿ ಗ್ರಾಮದ ಸರಕಾರಿ ಪ್ರೌಢಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾದ ೨೦೨೨=೨೩ ನೇ ಸಆಲಿನ ಸವದತ್ತಿ ತಾಲೂಕ ಮಟ್ಟದ ಗ್ರಾಮೀಣ ಕ್ರೀಡಾಕೂಟ  ಉದ್ಘಾಟನೆ ಹಾಗೂ ನರೇಗಾ ಯೋಜನೆಯ ಕಾಮಗಾರಿಗಳ ಪರಿಶೀಲನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ನೀತಿನ್ ಶಕ್ತಿ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಾಯವ್ವ ಟೋಪೋಜಿ, ಉಪಾಧ್ಯಕ್ಷರಾದ ಬಸವರಾಜ ಮಾಯಪ್ಪನವರ. ಸದಸ್ಯರಾದ ದುರ್ಗಪ್ಪ ಟೋಪೋಜಿ, ಮರೆಪ್ಪ ಮುಶೆನ್ನವರ, ಫಕೀರಪ್ಪ ಮಾದರ, ನಿಂಗಪ್ಪ ಟೋಪೋಜಿ, ಕಲ್ಲಪ್ಪ ಕುರುಬಗಟ್ಟಿ, ರುದ್ರವ್ವ ಮಾದರ, ಈಶ್ವರ ಯಕ್ಕೇರಿ, ಮಲ್ಲಿಕಾರ್ಜುನ ದಸ್ತಿ, ಸಿದ್ದವ್ವ ಟೋಪೋಜಿ, ಚನ್ನವ್ವ ಗೋಕಾವಿ, ಹೂವಪ್ಪ ತಳವಾರ, ಶಕುಂತಲಾ ಬಂಡಿವಡ್ಡರ, ಗುಡುಮಾ ಶೆರೆಗಾರ, ದೈಹಿಕ ಪರಿವೀಕ್ಷಕರಾದ ಎಂ.ಆರ್.ಮಾರಾ.ಪಿ.ಡಿ.ಓ ರಮೇಶ ಬೆಡಸೂರ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ವಿವಿಧ ಕ್ರೀಡೆಗಳು ಜರುಗಿದವು. ವಿಶೇಷವಾಗಿ ಶಿಂದೋಗಿ ಗ್ರಾಮ ಮಹಿಳಾ ಸ್ವಸಹಾಯ ಸಂಘದ ಸದಸ್ಯರುಗಳು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಬಹುಮಾನ ಪಡೆದರು. ಎನ್.ಆರ್.ಜಿ. ಯೋಜನೆಯಡಿಯಲ್ಲಿ ನೆಲಹಾಸು.ಕುಡಿಯುವ ನೀರಿನ ವ್ಯವಸ್ಥೆ.ಸ್ಮಶಾನದಲ್ಲಿ ತೆಗೆದುಕೊಂಡು ಕಾಮಗಾರಿ ವೀಕ್ಷಣೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ತಾಲೂಕ ಪಂಚಾಯತಿ ಆರ್ಯನಿರ್ವಹಣಾ ಅಧಿಕಾರಿಗಳಾದ ಯಶವಂತಕುಮಾರ ಪರಿಶೀಲಿಸಿದರು.ಶಿಕ್ಷಕ ದೇವರಡ್ಡಿ ನಿರೂಪಿಸಿದರು. ದೈಹಿಕ ಶಿಕ್ಷಕ ಬಿ.ಎಚ್.ಖೊಂದುನಾಯ್ಕ ಪ್ರತಿಜ್ಞಾವಿಧಿ ಭೋಧಿಸಿದರು.ಶಿಕ್ಷಕ ನೆಲಗುಡ್ಡ ವಂದಿಸಿದರು.

Latest News

ಕವಿಗೋಷ್ಠಿಗೆ ಆಹ್ವಾನ

ಮೂಡಲಗಿ - ಫೆ.೧ ರಂದು ರವಿವಾರ ಮುಂಜಾನೆ ೧೦ ಘಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು ,ಮೂಡಲಗಿ ಹಾಗೂ ಎಮ್ ಐ ಕೆ ಪಿ ಯು ಕಾಲೇಜು,...

More Articles Like This

error: Content is protected !!
Join WhatsApp Group