spot_img
spot_img

ಶ್ರೀ ಚಂದ್ರಮ್ಮತಾಯಿ ಮತ್ತು ಶ್ರೀ ಸದಾಶಿವ ಮುತ್ಯಾರ ಜಾತ್ರೆ

Must Read

- Advertisement -

ಮೂಡಲಗಿ: ತಾಲೂಕಿನ ಪುಲಗಡ್ಡಿ ಗ್ರಾಮದಲ್ಲಿ ಆದಿಶಕ್ತಿ ಮಹಾಲಕ್ಷ್ಮೀ ಶ್ರೀ ಚಂದ್ರಮ್ಮತಾಯಿ ಹಾಗೂ ಶ್ರೀ ಸದಾಶಿವ ಮುತ್ಯಾ ರವರ ಪ್ರಥಮ ಮಹಾರಥೋತ್ಸವ ಹಾಗೂ ಶೆಟ್ಟೆಮ್ಮಾದೇವಿ ಜಾತ್ರಾ ಮಹೋತ್ಸವ ಮಾ.24 ರಿಂದ 28 ರವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಹಾಗೂ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ  ಐದು ದಿನಗಳಕಾಲ ಸಡಗರ ಸಂಭ್ರಮದಿಂದ ಜರುಗಲಿದೆ ಎಂದು ಸಾಹಿತಿ ಜಯಾನಂದ ಮಾದರ ಹೇಳಿದರು.

ಅವರು ಗುರುವಾರದಂದು ಮೂಡಲಗಿ ಪತ್ರಿಕಾ ಕಛೇರಿಯಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,  ಮಾ.24 ರಂದು ಸಂಜೆ 7 ಗಂಟೆಗೆ ಜರುಗುವ ಜಾತ್ರೆಯ ಉದ್ಘಾಟನೆ ಹಾಗೂ ರಾಜ್ಯ ಪ್ರಶಸ್ತಿ ಸಮಾರಂಭದ ಸಾನ್ನಿಧ್ಯವನ್ನು ಸುಣಧೋಳಿಯ ಶ್ರೀ ಶಿವಾನಂದ ಶ್ರೀಗಳು ವಹಿಸಿಸುವರು, ನವಲಗುಂದದ ಶ್ರೀ ಗೋಪಾಲರಡ್ಡಿ ಶಾಸ್ತ್ರಿಗಳು, ಹುಣಶ್ಯಾಳ ಪಿ.ಜಿಯ ಶ್ರೀ ನಿಜಗುಣ ದೇವರು ನೇತೃತ್ವ ವಹಿಸುವರು.

ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷತೆ ವಹಿಸುವರು.

- Advertisement -

ಇದೇ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರಿಗೆ ದಾನಚಿಂತಾಮಣಿ ಪ್ರಶಸ್ತಿ ಮತ್ತು ಸಿನಿಮಾ ಹಾಗೂ ಧಾರಾವಾಹಿ ಹಿರಿಯ ಕಲಾವಿದೆ ಮಾಲತಿಶ್ರೀ ಮೈಸೂರು ಅವರಿಗೆ ರಂಗಭೂಮಿ ಕಲಾರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಮಾ.25ರಂದು ಜರುಗುವ ಹಿರಿಯ ನಾಗರಿಕ ಸನ್ಮಾನ, ವೇದಾಂತ ಸಮಾರಂಭ ಕಾರ್ಯಕ್ರಮದ ಸಾನ್ನಿಧ್ಯವನ್ನು ಮಮದಾಪೂರ ಶ್ರೀ ಮೌನ ಮಲ್ಲಿಕಾರ್ಜುನ ಸ್ವಾಮಿಗಳು ಹಾಗೂ ತಳಕಟನಾಳದ ಶ್ರೀ ಆತ್ಮಾನಂದ ಸ್ವಾಮಿಗಳು ವಹಿಸಿಸುವವರು, ವಡೇರಹಟ್ಟಿಯ ಶ್ರೀ ನಾರಾಯಣ ಶರಣರು ಮತ್ತು ಶ್ರೀ ಕಲ್ಮೇಶ್ವರ ಸ್ವಾಮಿಗಳ ನೇತೃತ್ವ ವಹಿಸುವರು.

ಮಾ.26ರಂದು ಮುಂಜಾನೆ 10ಕ್ಕೆ   ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರ ಮತ್ತು ಶ್ರೀ ಸಿದ್ಧಾರೂಢ ಮಹಿಳಾ ಕಲಾ ಸಂಘ ಜೋಕಾನಟ್ಟಿ ಆಶ್ರಯದಲ್ಲಿ ಜರಗುವ ಜಾನಪದ ಕಲಾ ಮಹೋತ್ಸವ ಸಾನ್ನಿಧ್ಯವನ್ನು ಹಲಗನಿ-ಸವದಿಯ ಶ್ರೀ ಸಂಗಮನಾಥ ಸ್ವಾಮೀಜಿ, ಬೀರನಹೊಳಿಯ ಶ್ರೀ ಚಿದಾನಂದ ಶ್ರೀಗಳು, ಕಪರಟ್ಟಿಯ ಶ್ರೀ ಬಸವರಾಜ ಹಿರೇಮಠ ವಹಿಸುವರು, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಉದ್ಘಾಟಿಸುವರು, ನ್ಯಾಯವಾದಿ ಮಹಾಂತೇಶ ಪಾಟೀಲ ಅಧ್ಯಕ್ಷತೆ ವಹಿಸುವರು, ಬೆಳುವಲ ನಾಡಿನ ಜಾನಪದ ಕೃಷಿ ಹಾಗೂ ಕಲಾ ಸಂಸ್ಕೃತಿ ಕುರಿತು ಪ್ರಕಾಶ ಕೋಟಿನತೋಟ, ಡಾ.ಅರುಣ ಸವತಿಕಾಯಿ, ವಿದ್ಯಾ ರಡ್ಡಿ ಅವರು ಉಪನ್ಯಾಸ ನೀಡುವರು. ಜಾನಪದ ಸಾಂಸ್ಕೃತಿಕ ಕಲಾ ಉತ್ಸವದ ಕಲಾ ಪ್ರದರ್ಶನಕ್ಕೆ ಕೆ.ಎಮ್.ಎಫ್.ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಚಾಲನೆ ನೀಡುವರು. ಅಂದು ಪುಲಗಡ್ಡಿ ಗ್ರಾಮದ ಹಿರಿಯರಿಗೆ ಮತ್ತಿತರರಿಗೆ ಸತ್ಕಾರ ಸಮಾರಂಭ ಜರುಗಲಿದೆ. 

- Advertisement -

ಮಾ.27ರಂದು ಸಂಜೆ 7ಗಂಟೆಗೆ ಶ್ರೀ ಶೆಟ್ಟೆಮ್ಮದೇವಿ ಹಾಗೂ ಗ್ರಾಮದ ದೇವರುಗಳ ಉಡಿ ತುಂಬುವುದು ಹಾಗೂ ನೈವೇದ್ಯ ಸಮರ್ಪಣೆ ಜರುಗುವುದು. 

ಮಾ.28ರಂದು ಸಂಜೆ 4 ಗಂಟೆಗೆ ಆದಿಶಕ್ತಿ ಮಹಾಲಕ್ಷ್ಮೀ ಶ್ರೀ ಚಂದ್ರಮ್ಮತಾಯಿ ಹಾಗೂ ಶ್ರೀ ಸದಾಶಿವ ಮುತ್ಯಾರವರ ಪ್ರಥಮ ಮಹಾರಥೋತ್ಸವ ಜರುಗುವುದು. ಸಂಜೆ 7ಕ್ಕೆ ವೇದಾಂತ ಸಮಾವೇಶ ಹಾಗೂ ಸನ್ಮಾನ ಸಮಾರಂಭ ವಿವಿಧ ಪೂಜ್ಯ ಸಾನ್ನಿಧ್ಯದಲ್ಲಿ ಜರುಗಲಿದೆ ಎಂದು ಜಯಾನಂದ ಮಾದರ ತಿಳಿಸಿದರು. 

ಈ ಸಂದರ್ಭದಲ್ಲಿ ಯಮನಪ್ಪ ಹಿರೇಮನಿ,  ಶ್ರೀಮಂತ ಹಿರೇಮನಿ,  ಯಮನಪ್ಪ ಮಾದರ, ಸಚಿನ ಸಣ್ಣಕ್ಕಿ, ಲಕ್ಷ್ಮಣ ಮೇತ್ರಿ, ದುರ್ಗಪ್ಪ ಸಣ್ಣಕ್ಕಿ ಉಪಸ್ಥಿತರಿದ್ದರು.

- Advertisement -
- Advertisement -

Latest News

ಮನುಷ್ಯನಿಗೆ ಹಣ, ಆಸ್ತಿ ಬೇಕಾಗಿಲ್ಲ, ಬದುಕುವ ಛಲ ಇರಬೇಕು – ಬಸವರಾಜ ಮಡಿವಾಳ

ಮೂಡಲಗಿ: ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ಮಡಿವಾಳ ಸಮಾಜ ಬಾಂಧವರಿಂದ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ...
- Advertisement -

More Articles Like This

- Advertisement -
close
error: Content is protected !!
Join WhatsApp Group