Homeಸುದ್ದಿಗಳುಶ್ರೀ ಪಂಚಲಿಂಗೇಶ್ವರ ದೇವಾಲಯ ಕಾರ್ತಿಕೋತ್ಸವ

ಶ್ರೀ ಪಂಚಲಿಂಗೇಶ್ವರ ದೇವಾಲಯ ಕಾರ್ತಿಕೋತ್ಸವ

ಮುನವಳ್ಳಿ: ಪಟ್ಟಣದ ಸುಪ್ರಸಿದ್ದ ಐತಿಹಾಸಿಕ ದೇವಾಲಯ ಶ್ರೀ ಪಂಚಲಿಂಗೇಶ್ವರ ದೇವಾಲಯದಲ್ಲಿ ಸೋಮವಾರ ಸಂಜೆ ಕಾರ್ತಿಕೋತ್ಸವ ಸಡಗರದಿಂದ ಜರುಗಿತು.

ಈ ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ಮುನವಳ್ಳಿ ಸೋಮಶೇಖರಮಠದ ಪರಮಪೂಜ್ಯ ಶ್ರೀ.ಮ.ನಿ.ಪ್ರ.ಸ್ವ.ಮುರುಘೇಂದ್ರ ಮಹಾಸ್ವಾಮಿಗಳು ವಹಿಸಿದ್ದರು. ವಿಧಾನಸಭಾ ಉಪಸಭಾಪತಿ ಶಾಸಕ ಆನಂದ ಮಾಮನಿ,ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಪಂಚಪ್ಪ ಗೋಪಶೆಟ್ಟಿ,ಹಿರಿಯರಾದ ಚಂದ್ರಯ್ಯಸ್ವಾಮಿ ವಿರಕ್ತ ಮಠ,ಬಸವರಾಜ ದೇವಣಗಾವಿ, ಶ್ರೀ ಕಾಂತ ಮಿರಜಕರ,ರಮೇಶ ಗೋಮಾಡಿ,ತಿರಕಪ್ಪ ಕಾಶಪ್ಬಗೋಳ,ವಿನಾಯಕ ಪತ್ತಾರ,ಜಗದೀಶ ಕೌಜಗೇರಿ, ಅಶೋಕ ಬಡೆಮ್ಮಿ, ಗಂಗಾಧರ ಗೋರಾಬಾಳ ಸೇರಿದಂತೆ ಭಕ್ತರು ಗಣ್ಯರು,ಹಿರಿಯರು,ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಮೀತಿಯವರು ಸಕಲ ಸದ್ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಮಂಗಳಾರುತಿ ಪಲ್ಲಕ್ಕಿ ಸೇವೆ ಮೂಲಕ ಕಾರ್ತಿಕೋತ್ಸವ ಜರುಗಿತು.

ಈ ಸಂದರ್ಭದಲ್ಲಿ ಪಂಚಲಿಂಗೇಶ್ವರ ದೇವಾಲಯದ ಗರ್ಭಗುಡಿಯಲ್ಲಿ ದೀಪ ಬೆಳಗಿಸಿ ನಂತರ ದೀಪಮಾಲಿಕಾ ಸ್ಥಂಭದಲ್ಲಿ ದೀಪ ಪ್ರಜ್ವಲಿ ಮಾಡಿ ಕಾರ್ತಿಕೋತ್ಸವ ಕ್ಕೆ ಚಾಲನೆ ನೀಡಿದರು. ದೇವಾಲಯದ ಎಲ್ಲಾ ದೇವಾಲಯಗಳ ಸಮುಚ್ಛಯದಲ್ಲಿ ಇರಿಸಲಾಗಿರುವ ಪ್ರಣತೆಗಳಲ್ಲಿ ದೀಪವನ್ನು ಸೇರಿದ ಸಕಲ ಸದ್ಭಕ್ತರು ಬೆಳಗಿಸುವ ಮೂಲಕ ಕಾರ್ತಿಕೋತ್ಸವ ಜರುಗಿತು.

RELATED ARTICLES

Most Popular

error: Content is protected !!
Join WhatsApp Group