spot_img
spot_img

ನಗರೋತ್ಥಾನದಡಿ ರಸ್ತೆ ಕಾಮಗಾರಿಗೆ ಚಾಲನೆ

Must Read

spot_img
- Advertisement -

ಸಿಂದಗಿ: ಪಟ್ಟಣದ ವಿದ್ಯಾನಗರ 4ನೇ ಕ್ರಾಸ್‍ನಲ್ಲಿ ಡಾ. ಪ್ರಭು ಬಿರಾದಾರ ಅವರ ಮನೆಯಿಂದ ಬಜಂತ್ರಿ ಲೇಔಟ್‍ವರೆಗೆ ನಗರೋತ್ಥಾನ ಹಂತ 4ರ ಪ್ಯಾಕೇಜ್ 1 ಮತ್ತು 2ರ ರೂ. 35 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ರಮೇಶ ಭೂಸನೂರ ಹಾಗೂ ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಅವರು ಪೂಜೆ ನೆರವೇರಿಸಿದರು.

ಶಾಸಕ ರಮೇಶ ಭೂಸನೂರ ಮಾತನಾಡಿ,  ನಗರೋತ್ಥಾನ ಯೋಜನೆಯಡಿ ಈ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದು ಮುಂದಿನ ಹಂತದಲ್ಲಿ ಸುಮಾರು ರು 1ಕೋಟಿ ವೆಚ್ಚದಲ್ಲಿ ಕೈಗಾರಿಕಾ ವಲಯದ ಮಧ್ಯ ಭಾಗದಿಂದ ಬೈಪಾಸ್ ರಸ್ತೆಯ ವರೆಗೆ ರಸ್ತೆ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದ್ದು ತೀವ್ರಗತಿಯಲ್ಲಿ ಅನುದಾನ ತಂದು ಕಾಮಗಾರಿ ಪೂರ್ಣಗೊಳಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಮಾತನಾಡಿ, ನಗರೋತ್ಥಾನ ಯೋಜನೆಯಡಿ  ರೂ. 35 ಲಕ್ಷಗಳಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಮಂಜೂರಾತಿ ದೊರೆತಿದ್ದು ಇಲ್ಲಿನ ಬಸು ಅಂಬಲಗಿ ಅವರು ವಿಜಯಪುರ ರಸ್ತೆಯಿಂದ ಕಲಕೇರಿ ರಸ್ತೆಯವರೆಗೆ ರಸ್ತೆ ಪೂರ್ಣಗೊಳಿಸುವಂತೆ ಮನವಿ ಮಾಡಿಕೊಂಡಿದ್ದು ಶಾಸಕರ ಅನುದಾನದಲ್ಲಿ ಅಥವಾ ಪುರಸಭೆ ಅನುದಾನ ದಲ್ಲಿ ಅನುದಾನ ವಿನಿಯೋಗಿಸಿ ಕಾಮಗಾರಿ ಪೂರ್ಣಗೊಳಿಸುವದಾಗಿ ಭರವಸೆ ನೀಡಿದರು.

- Advertisement -

ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಹಾಸೀಂ ಆಳಂದ, ಸದಸ್ಯರಾದ ಪ್ರತಿಭಾ ಕಲ್ಲೂರ, ರಾಜಣ್ಣಿ ನಾರಾಯಣಕರ, ಆಶ್ರಯ ಕಮಿಟಿ ಸದಸ್ಯ ಕಾಜು ಬಂಕಲಗಿ, ರಾಕೇಶ ಕಂಟಿಗೊಂಡ ಸೇರಿದಂತೆ ಶ್ರೀಶೈಲಗೌಡನ ಬಿರಾದಾರ ಮಾಗಣಗೇರಿ, ಕಾಂಗ್ರೆಸ್ ಮುಖಂಡ ಗೊಲ್ಲಾಳಪ್ಪಗೌಡ ಪಾಟೀಲ ಮಾಗಣಗೇರಿ, ಬಿ.ಎಚ್.ಬಿರಾದಾರ, ಶರಣಪ್ಪ ಸುಲ್ಪಿ, ತಿರುಪತಿ ಬಂಡಿವಡ್ಡರ, ಐ.ಎಂ.ನದಾಫ್, ಮಹಿಬೂಬ ಹಸರಗುಂಡಗಿ, ಸಿದ್ರಾಮ ಪೂಜಾರಿ, ಬಸು ಅಂಬಲಗಿ, ಮಲ್ಲೇಶ ಕೆರೂರ, ಪ್ರಶಾಂತ ನಂದಿಕೋಲ, ಪುರಸಭೆ ಜೆಇ ಎ.ಜೆ.ನಾಟೀಕಾರ, ಶಿವು ಬಡಿಗೇರ ಸೇರಿದಂತೆ ಹಲವರು ಇದ್ದರು.

ಡಿಎಸ್‍ಎಸ್ ಉತ್ತರ ವಲಯದ ಸಂಚಾಲಕ ಅಶೋಕ ಸುಲ್ಫಿ ಸ್ವಾಗತಿಸಿ ನಿರೂಪಿಸಿದರು.

- Advertisement -
- Advertisement -

Latest News

ಕವನ : ಜೀವನ ಸತ್ಯ

 ಜೀವನ ಸತ್ಯ ಬೇವಿನ ಬೀಜವನ್ನು ನೆಟ್ಟರೆ ಬೇವು ಮಾತ್ರ ಬೆಳೆಯುತ್ತದೆ, ಸುಳ್ಳಿನ ನೆರಳಿನಲ್ಲಿ ಸತ್ಯ ಬೆಳೆಯುವುದಿಲ್ಲ. ಎಳ್ಳು ಬಿತ್ತಿದರೆ ಸಾಸಿವೆ ಬೆಳೆಯುವುದಿಲ್ಲ, ಕರ್ಮವೇ ಫಲ ಎಂದು ಜಗತ್ತು ಅರಿಯುವುದಿಲ್ಲ. ಕಲ್ಲಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group