spot_img
spot_img

ಮಂತ್ರಗಳಿಂದ ಒತ್ತಡ ನಿರ್ವಹಣೆ ಕಾರ್ಯಕ್ರಮ

Must Read

ಬೆಳಗಾವಿ – ಸರಕಾರಿ ಪ್ರಥಮ ದರ್ಜೆ ಕಾಲೇಜು ಖಾನಾಪೂರದ ನಿರ್ವಹಣಾ ಶಾಸ್ತ್ರ ವಿಭಾಗ ಹಾಗೂ ಉದ್ಯೋಗ ಕೋಶ ವಿಭಾಗದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾದ  ಶಿಕ್ಷಕಾಭಿವೃದ್ಧಿ ಕಾರ್ಯಕ್ರಮದ (FDP) ಅಂಗವಾಗಿ ಮಂತ್ರಗಳಿಂದ ಒತ್ತಡ ನಿರ್ವಹಣೆ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಡಿ. ಎಮ್. ಜವಳಕರ ಇವರ ಅಧ್ಯಕ್ಷತೆಯಲ್ಲಿ ನಡೆದ  ಕಾರ್ಯಕ್ರಮಕ್ಕೆ ಜ್ಞಾನ ವಿಭೂಷಣ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಸಾಹಿತಿ ಹಾಗೂ ಸಂಶೋಧಕರು ಆದ ಪ್ರೊ. ಚಂದ್ರಶೇಖರ ಹಿರೇಮಠ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಹಿಂದೂ ಸಂಸ್ಕೃತಿಯಲ್ಲಿಯ ಮಂತ್ರಗಳಿಂದ ಒತ್ತಡವನ್ನು ಹೇಗೆ ನಿವಾರಿಸಬಹುದು ಎಂದು ಪ್ರಾಯೋಗಿಕವಾಗಿ ಹೇಳಿಕೊಟ್ಟರು, ಮಂತ್ರಗಳಿಂದ ಮನಸ್ಸಿನಲ್ಲಿ, ದೇಹದಲ್ಲಿ ಹಾಗೂ ನಾವು ವಾಸಿಸುವ ಪರಿಸರದಲ್ಲಿ ಧನಾತ್ಮಕ ಶಕ್ತಿಯನ್ನು ಗಳಿಸಬಹುದು ಎಂದು ಅವರು ತಿಳಿಸಿದರು.

ದೇವರು, ದೈವತ್ವ, ವೇದದ ಇತಿಹಾಸ ಮತ್ತು ವೇದದಲ್ಲಿನ ವಿಜ್ಞಾನದ ಬಗ್ಗೆ ತಿಳಿಸಿಕೊಟ್ಟರು. ಇತಿಹಾಸ ವಿಭಾಗದ ಮುಖ್ಯಸ್ಥರು ಆದ ಡಾ. ಸಿ. ಬಿ. ತಾಬೋಜಿ, ನಿರ್ವಹಣಾ ಶಾಸ್ತ್ರದ ಮುಖ್ಯಸ್ಥೆಯರು ಆದ ಡಾ. ಸೋನಲ ರೇವಣಕರ, ಉದ್ಯೋಗ ಕೋಶ ವಿಭಾಗದ ಮುಖ್ಯಸ್ಥೆಯರು ಆದ ಡಾ. ವಿದ್ಯಾ ಜೀರಿಗೆ ಹಾಗೂ ರಾಜ್ಯಶಾಸ್ತ್ರದ ಮುಖ್ಯಸ್ಥೆ ಪ್ರೊ. ರಿಝ್ವಾನಾ ಗಡಕರಿ ಇವರು ಭಾಗವಹಿಸಿದ್ದರು.

ಅದೆ ರೀತಿ ಮಹಾವಿದ್ಯಾಲಯದ ಎಲ್ಲ ಅಧ್ಯಾಪಕರು ಹಾಗೂ ಆಸಕ್ತ ವಿದ್ಯಾರ್ಥಿಗಳು ಭಾಗವಹಿಸಿದ್ದರು, ಡಾ. ಸೋನಲ ರೇವಣಕರ ಸ್ವಾಗತಿಸಿ ನಿರೂಪಿಸಿದರು, ಡಾ. ವಿದ್ಯಾ ಜೀರಿಗೆ ವಂದಿಸಿದರು, ವಿದ್ಯಾರ್ಥಿನಿ ಸ್ನೇಹಾ ಮಿಟಗಾರ ತಾಂತ್ರಿಕ ಸಹಾಯ ಒದಗಿಸಿದರು.

- Advertisement -
- Advertisement -

Latest News

ರಿಯಾಯಿತಿ ದರದಲ್ಲಿ ಸಂತಾನ ಪ್ರಾಪ್ತಿ ಚಿಕಿತ್ಸೆ

ಬೆಳಗಾವಿ: ಮಕ್ಕಳಿಲ್ಲದ ಬಡ ದಂಪತಿಗಳಿಗೆ ರಿಯಾಯಿತಿ ದರದಲ್ಲಿ ಸಂತಾನ ಪ್ರಾಪ್ತಿ ಚಿಕಿತ್ಸೆ ಕೊಡಿಸಲು ಕೊಲ್ಲಾಪುರದ ಸಿದ್ಧಗಿರಿ ಮಠದ ದತ್ತಿ ಆಸ್ಪತ್ರೆಯಲ್ಲಿ ಐವಿಎಫ್ ಕೇಂದ್ರ ಸ್ಥಾಪಿಸಲಾಗಿದೆ ಎಂದು ಮುಜರಾಯಿ,...
- Advertisement -

More Articles Like This

- Advertisement -
close
error: Content is protected !!