spot_img
spot_img

ವಿದ್ಯಾರ್ಥಿಗಳು ಕೌಶಲ್ಯದ ಜೊತೆ ಶಿಸ್ತು ಅಳವಡಿಸಿಕೊಳ್ಳಬೇಕು – ಎಂ ಕೆ ಇಂಗಳೆ

Must Read

- Advertisement -

ಸಿಂದಗಿ: ಕುಶಲಕರ್ಮಿಗಳನ್ನು ತಯಾರಿಸುವ ಕೈಗಾರಿಕಾ ಕೇಂದ್ರಗಳಾಗಿವೆ. ಒಳ್ಳೆಯ ಕೌಶಲ್ಯ ಪಡೆದು ಸಾಧನೆ ಮಾಡಿದರೆ ದೇಶ ಪ್ರಗತಿಗೆ ಸಹಕಾರಿಯಾಗುತ್ತದೆ ಎಂದು  ಕೆ.ಪಿ.ಟಿ.ಸಿ.ಎಲ್. ಎಇಇ, ಎಂ ಕೆ ಇಂಗಳೆ ಹೇಳಿದರು.

ತಾಲೂಕಿನ ಮೋರಟಗಿ ಗ್ರಾಮದ ಶ್ರೀ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರ ಖಾಸಗಿ ಕೈಗಾರಿಕಾ ಸಂಸ್ಥೆಯಲ್ಲಿ   2022 ನೇ ಸಾಲಿನಲ್ಲಿ ಐ.ಟಿ.ಐ. ತರಬೇತಿ ಪೂರ್ಣಗೊಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳ ಘಟಿಕೋತ್ಸವ ಸಮಾರಂಭ ಮತ್ತು ವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,  ವಿದ್ಯಾರ್ಥಿಗಳಿಗೆ ಕೌಶಲ್ಯದ ಜೊತೆಗೆ ಶಿಸ್ತನ್ನು ಅಳವಡಿಸಿಕೊಂಡರೆ ವಿದ್ಯಾರ್ಥಿಗಳ ಭವಿಷ್ಯವೂ ಕೂಡ ಉಜ್ವಲವಾಗುತ್ತದೆ ಎಂದರು.

ಕೈಗಾರಿಕಾ ಸಂಸ್ಥೆಯ ಪ್ರಾಚಾರ್ಯ ಎಂ.ಸಿ.ಸಿಂದಗಿ ಮಾತನಾಡಿ, ಸಾಧನೆಗೆ ಸಾವಿರ ದಾರಿಗಳು ಇವೆ ಉತ್ತಮ ದಾರಿಯಲ್ಲಿ ಸಾಗಿ ಮುಂದಿನ ದಿನಗಳಲ್ಲಿ ದೇಶ ಕಂಡ ಉತ್ತಮ ಪ್ರಜೆಯಾಗಿ ಹೊರಹೊಮ್ಮಿ ದುಡಿಯಬೇಕು, ದುಡಿಸಬೇಕು ಬಂದ ಸಂಪಾದನೆಯನ್ನು ಸದ್ಬಳಕೆ ಮಾಡಿಕೊಂಡು ಉಪಯೋಗಿಸಿದರೆ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳಲು ಸಾಧ್ಯವಾಗುತ್ತದೆ ಹಿಂದೆ ಈ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಹೊರ ದೇಶದಲ್ಲಿ ಎರಡರಿಂದ ಮೂರು ಲಕ್ಷ ಸಂಬಳ ತೆಗೆದುಕೊಳ್ಳುತ್ತಿದ್ದಾರೆ ತಾವು ಕೂಡಾ 2022 ನೇ ಸಾಲಿನಲ್ಲಿ ಉತ್ತಮ ಅಂಕಗಳನ್ನು ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದೀರಿ  ಎಂದು ಪ್ರಶಂಸೆ ವ್ಯಕ್ತಪಡಿಸಿದರು.

- Advertisement -

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿ ಕಾರ್ಯದರ್ಶಿ ನಿಂಗನಗೌಡ ಬಿರಾದಾರ ಮಾತನಾಡಿ, ಈ ಸಂಸ್ಥೆಯ ವಿದ್ಯಾರ್ಥಿಗಳು ಒಳ್ಳೆಯ ಕುಶಲ ಕರ್ಮಿಗಳಾಗಿ ಹೊರಹೊಮ್ಮಿ ಉಜ್ವಲ ಬಾಳು ಹೊಂದಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಅಮೋಗೆಣ್ಣ ಯಂಕಂಚಿ, ಗ್ರಾಪಂ ಮಾಜಿ ಅಧ್ಯಕ್ಷ ಬಸಲಿಂಗಪ್ಪಸಾಹು ಬೋನಾಳ, ಆರ್.ಕೆ. ಪತ್ತಾರ,  ಆಯ್.ಎಂ. ಗಣಾಚಾರಿ, ಜಿ.ಜಿ. ಕತ್ತಿ, ಹಾಗೂ ಸಂಸ್ಥೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ಮಂಗದಿಂ ಮಾನವನು ಜನಿಸಿಬಂದೆನ್ನುವರು ಈಗಿರುವ ಮಂಗದಿಂ ಜನಿಸನೇಕೆ ? ಮಂಗ ಮಾನಸದಿಂದ ಮನುಜ‌ ಮಾನಸವೆಂಬ ಸಿದ್ಧಾಂತ ಸರಿಯೇನೋ ! - ಎಮ್ಮೆತಮ್ಮ ಶಬ್ಧಾರ್ಥ ಮಂಗ = ಕೋತಿ. ಮಾನಸ = ಮನ. ಮನುಜ...
- Advertisement -

More Articles Like This

- Advertisement -
close
error: Content is protected !!
Join WhatsApp Group