spot_img
spot_img

ಮೋದಿ ಪ್ರಧಾನಿಯಾಗಲು ಜಿಗಜಿಣಗಿ ಬೆಂಬಲಿಸಿ – ಸಂತೋಷ ಪಾಟೀಲ

Must Read

- Advertisement -

ಸಿಂದಗಿ; ಪ್ರಸ್ತುತ ವಿಜಯಪುರ ಲೋಕಸಭೆ ಚುನಾವಣೆಯಲ್ಲಿ ಲಂಬಾಣಿ ಜನಾಂಗವು ಯಾವುದೇ ಉಹಾಪೋಹಗಳಿಗೆ ಕಿವಿಗೊಡದೆ ನರೇಂದ್ರ ಮೋದೀಜಿ ಅವರನ್ನು ಪ್ರಧಾನಿಯನ್ನಾಗಿ ಮಾಡಲು ಬಾ.ಜ.ಪ ಅಭ್ಯರ್ಥಿ ರಮೇಶ ಜಿಗಜಿಣಗಿಯವರಿಗೆ ತಮ್ಮ ಸಂಪೂರ್ಣ ಬೆಂಬಲ ನೀಡಬೇಕು ಎಂದು ಭಾಜಪ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಸ್ತುತ ರಾಜ್ಯದ ಕಾಂಗ್ರೆಸ್ ಸರ್ಕಾರವು ಲಂಬಾಣಿ ಜನಾಂಗದ ಯಾವುದೆ ಮಂತ್ರಿಸ್ಥಾನ ನೀಡದೆ ಮತ್ತು ಲೋಕಸಭೆಯಲ್ಲಿ ಯಾವುದೇ ಲಂಬಾಣಿ ವ್ಯಕ್ತಿಗೆ ಟಿಕೆಟ ನೀಡದೆ ಲಂಬಾಣಿ ಜನಾಂಗಕ್ಕೆ ದ್ರೋಹ ಎಸಗಿದೆ. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಲೋಕಸಭೆಯಿಂದ ಡಾ.ಉಮೇಶ ಜಾಧವರಿಗೆ ಬಾ.ಜ.ಪ. ಟಿಕೆಟ್ ಕೊಡುವುದರ ಮೂಲಕ ಲಂಬಾಣಿ ಜನಾಂಗಕ್ಕೆ ಪ್ರಾತಿನಿಧ್ಯ ಕೊಟ್ಟಿದೆ. ಭಾರತದ ಇತಿಹಾಸದಲ್ಲಿ ಪ್ರದಾನಮಂತ್ರಿ ನರೇಂದ್ರ ಮೋದಿಜಿಯವರ ಸಾಧನೆ ಅಮೋಘವಾದದ್ದು. ಹಿಂದುಳಿದ ಬಡ ಜನರಿಗಾಗಿ ಅವರ ಸೇವೆ ಅಮೂಲ್ಯವಾಗಿದೆ. ವಿಶೇಷವಾಗಿ ಬಂಜಾರಾ ಸಮುದಾಯದ ಅಭಿವೃದ್ಧಿಗಾಗಿ ಭಾರತೀಯ ಜನತಾ ಪಕ್ಷವು ಬಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸುವುದರ ಮೂಲಕ ಸ್ಥಾಪಿಸುವುದರ ಮೂಲಕ ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ ಅವುಗಳ ಅಭಿವೃದ್ಧಿಗೆ ಪಣ ತೊಟ್ಟಿದೆ. ಲಂಬಾಣಿ ಜನಾಂಗದ ಸರ್ವೋತೋಮುಖ ಅಭಿವೃದ್ಧಿಗಾಗಿ ಶ್ರಮವಹಿಸಿ ಲಂಬಾಣಿ ಜನಾಂದವರಿಗೆ ಕೇಂದ್ರ ಮತ್ತು ರಾಜ್ಯದಲ್ಲಿ ಮಂತ್ರಿಸ್ಥಾನ ನೀಡಿದೆ. ವಿಜಯಪುರ ಲೋಕಸಭೆಯ ಚುನಾವಣೆಯಲ್ಲಿ ಜಿಲ್ಲಾ ಕಾಂಗ್ರೆಸ್ ನಾಯಕರು ಬಂಜಾರಾ ಸಮಾಜಕ್ಕೆ ತಪ್ಪು ಸಂದೇಶವನ್ನು ಬಿತ್ತರಿಸುತ್ತಿದ್ದು ಅದನ್ನು ಕಿವಿಗೊಡದೆ ತಮ್ಮ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿದ ಭಾರತೀಯ ಶ್ರಮಿಸಿದ ಭಾರತಿಯ ಜನತಾ ಪಕ್ಷದ ಜನತಾ ಪಕ್ಷದ ಅಭ್ಯರ್ಥಿಯನ್ನು ಲೋಕಸಭಾ ಚುನಾವಣೆಯಲ್ಲಿ ಬೆಂಬಲಿಸಬೇಕು ಎಂದು ವಿನಂತಿಸಿದರು.

- Advertisement -
- Advertisement -

Latest News

ಸಿಂದಗಿ ಅಧ್ಯಕ್ಷರಾಗಿ ಶಾಂತವೀರ, ಉಪಾಧ್ಯಕ್ಷರಾಗಿ ರಾಜಣ್ಣಿ ಆಯ್ಕೆ

ಸಿಂದಗಿ; ಪಟ್ಟಣದ ಪುರಸಭೆಯ ಅಧ್ಯಕ್ಷ, ಉಪಾದ್ಯಕ್ಷರ ಅವಧಿ ಮುಗಿದು ಹಲವು ವರ್ಷಗಳು ಕಳೆದಿತ್ತು ಅದು ಅ. ೨೮ ರಂದು ಚುನಾವಣೆ ಪ್ರಕ್ರಿಯೆ ಪ್ರಾರಂಭಿಸಿ ಸೆ.೯ ದಿನಾಂಕ...
- Advertisement -

More Articles Like This

- Advertisement -
close
error: Content is protected !!
Join WhatsApp Group