spot_img
spot_img

ಸ್ವಾಮಿ ವಿವೇಕಾನಂದರ ಬೆಳಗಾವಿ ಭೇಟಿಯ ಸ್ಮಾರಕ ಭವನ

Must Read

spot_img
- Advertisement -

ಬೆಳಗಾವಿ- ಭಾರತದ ಶೂರ ಸನ್ಯಾಸಿ ಸ್ವಾಮಿ ವಿವೇಕಾನಂದ ಅವರು ಸನ್ ೧೮೯೨ ರಲ್ಲಿ ಕರ್ನಾಟಕದ ಬೆಳಗಾವಿಗೆ ಭೇಟಿ ಕೊಟ್ಟು ಅಕ್ಟೋಬರ್ ೧೬ ರಿಂದ ೨೭ ರ ವರೆಗೆ ನಗರದ ಸದಾಶಿವ ಭಾತೆ ಹಾಗೂ ಹರಿಪಾದ ಮಿತ್ರರ ಮನೆಗೆ ಭೇಟಿ ಕೊಟ್ಟ ಸ್ಮಾರಕ ಭವನಕ್ಕೆ ಭೇಟಿ ಕೊಡಲಾಯಿತು.

ಸುಮಾರು ೧೪೦ ವರ್ಷಗಳಷ್ಟು ಹಳೆಯದಾದ ಈ ಮನೆಗೆ ವಿವೇಕಾನಂದರು ಭೇಟಿ ನೀಡಿದ ಸ್ಮರಣಾರ್ಥ ಅವರ ನೆನಪುಗಳನ್ನು ಇಲ್ಲಿ ಕಟ್ಟಿಕೊಡಲಾಗಿದೆ ಅಲ್ಲದೆ ಆಧ್ಯಾತ್ಮಿಕ ಜೀವಿಯಾಗಿದ್ದ ವಿವೇಕಾನಂದರ ತತ್ವಗಳನ್ನು ಅನೇಕ ಅದ್ಭುತ ಪೇಂಟಿಂಗ್ಸ್ ಗಳಲ್ಲಿ ಪ್ರಕಟಪಡಿಸಲಾಗಿದೆ. ಈ ಸ್ಮಾರಕ ಭವನಕ್ಕೆ ಭೇಟಿ ಕೊಟ್ಟವರಿಗೆ ಶ್ರೀಕಾಂತ ಕುಲಕರ್ಣಿ ಯವರು ಮಾಹಿತಿ ನೀಡುತ್ತಾರೆ.

- Advertisement -

ಬೆಳಗಾವಿ ನಗರದ ಗಣಾಚಾರಿ ಗಲ್ಲಿಯಲ್ಲಿರುವ ಸ್ವಾಮಿ ವಿವೇಕಾನಂದರ ಸ್ಮಾರಕ ಭವನ ಶಾಂತ ಪರಿಸರದಲ್ಲಿದೆ. ಇಲ್ಲಿ ಒಂದು ಹಳೆಯ ಬಾವಿಯಿದ್ದು ವಿವೇಕಾನಂದರು ಇಲ್ಲಿಂದ ನೀರು ಸೇದಿ ಸ್ನಾನ ಮಾಡುತ್ತಿದ್ದರಂತೆ. ಈಗಲೂ ಈ ಬಾವಿಯ ಸಿಹಿ ನೀರನ್ನು ಕುಡಿಯಲು ಬಳಸಲಾಗುತ್ತದೆ.
ಸ್ವಾಮಿ ವಿವೇಕಾನಂದರು ಬೆಳಗಾವಿಗೆ ೧೨ ದಿನಗಳ ಭೇಟಿ ನೀಡಿದ್ದರು. ಮೊದಲ ಮೂರು ದಿನಗಳು ಅಂದಿನ ಪ್ರಸಿದ್ಧ ವಕೀಲರಾಗಿದ್ದ ಸದಾಶಿವ ಬಾಲಕೃಷ್ಣ ಭಾತೆಯವರ ಮನೆಯಲ್ಲಿ ಅತಿಥಿಯಾಗಿದ್ದರು. ನಂತರ ೯ ದಿನಗಳು ಅಂದಿನ ಉಪ ವಿಭಾಗೀಯ ಅರಣ್ಯ ಅಧಿಕಾರಿಯಾಗಿದ್ದ ಹರಿಪ್ರಸಾದ ಮಿತ್ರ ಅವರ ಮನೆಯಲ್ಲಿ ತಂಗಿದ್ದರು.

೧೯೮೬ ರಲ್ಲಿ ಈ ಎರಡು ಮನೆಗಳ ಪೈಕಿ ಒಂದನ್ನು ೨೦೦೬ ರಲ್ಲಿ ಆಶ್ರಮ ಮಾಡಲು ರಾಮಕೃಷ್ಣ ಮಿಷನ್ ಅವರಿಗೆ ನೀಡಲಾಯಿತು ೨೦೧೪ ರಲ್ಲಿ ಇನ್ನೊಂದು ಮನೆಯನ್ನು ಮಿಷನ್ ಪಡೆದುಕೊಂಡಿತು.೨೦೧೯ ರಲ್ಲಿ ಈ ಆಶ್ರಮವನ್ನು ಸ್ವಾಮಿ ವಿವೇಕಾನಂದ ಸ್ಮಾರಕ ಭವನವನ್ನಾಗಿ ಪರಿವರ್ತಿಸಲಾಗಿದೆ ಈ ಸ್ಮಾರಕ ಭವನದಲ್ಲಿ ಸ್ವಾಮೀಜಿಯವರು ಉಳಿದುಕೊಂಡಿದ್ದ ಕೋಣೆ ಪಕ್ಕದಲ್ಲಿ ಆಳೆತ್ತರದ ಕನ್ನಡಿಯಿದೆ. ಅವರ ವಾಕಿಂಗ್ ಸ್ಟಿಕ್ ಇದೆ. ಸ್ವಾಮೀಜಿಯವರ ಉಪದೇಶಗಳ ಪೇಂಟಿಂಗ್ಸ್ ಗಳು, ಡಿಜಿಟಲ್ ಗ್ಯಾಲರಿ, ಅವರ ಕುರಿತಾದ ಪುಸ್ತಕಗಳು ಇಲ್ಲಿ ಲಭ್ಯವಿದೆ. ಇದೇ ಆಶ್ರಮದಲ್ಲಿ ವಿದ್ಯಾರ್ಥಿಗಳಿಗಾಗಿ ಉಪನ್ಯಾಸವೂ ನಡೆಯುತ್ತದೆ.
ಭಾತೆಯವರ ಈ ಹಳೆಯ ಕಟ್ಟಡವನ್ನು ನವೀಕರಿಸಿ ಸುಂದರವಾಗಿ ನಿರ್ಮಿಸಲಾಗಿದೆ. ನಗರದ ಮಧ್ಯೆ ಇದ್ದರೂ ಶಾಂತ ಪರಿಸರದಲ್ಲಿದೆ. ಇಲ್ಲಿ ಕಾರ್ಯ ನಿರ್ವಹಿಸುವ ಮೋಹನ ಗುರವ ಅವರು ಎಲ್ಲ ರೀತಿಯ ಮಾಹಿತಿ ನೀಡಿದರು.

ಎಲ್ಲರೂ ಒಮ್ಮೆ ಭೇಟಿಕೊಡಬೇಕಾದ ಸುಂದರ ತಾಣವಿದು.

- Advertisement -

ಉಮೇಶ ಬೆಳಕೂಡ, ಮೂಡಲಗಿ

- Advertisement -
- Advertisement -

Latest News

ಎಸ್ ಎಂ ಕೃಷ್ಣ ನಿಧನಕ್ಕೆ ಕಡಾಡಿ ಸಂತಾಪ

ಮೂಡಲಗಿ:ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ಸಚಿವರು, ರಾಜ್ಯಪಾಲರೂ ಸೇರಿದಂತೆ ಅನೇಕ ಉನ್ನತ ಹುದ್ದೆಗಳಲ್ಲಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ ರಾಜ್ಯಕ್ಕೆ ಹಾಗೂ ದೇಶಕ್ಕೆ ತಮ್ಮದೇ ಆದ ಅಪಾರ...
- Advertisement -

More Articles Like This

- Advertisement -
close
error: Content is protected !!
Join WhatsApp Group