spot_img
spot_img

ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ ನಮ್ಮ ನಡುವಿನ ಓರ್ವ ಸೃಜನಶೀಲ ಬರಹಗಾರ: ಆಶಾ ಫರೀಟ್

Must Read

- Advertisement -

ಧಾರವಾಡ: ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ ಅವರ ಬರವಣಿಗೆ ನಮ್ಮ ನಡುವಿರುವ ಎಲೆಮರೆಯ ಕಾಯಿಯಂತಿರುವ ಅನೇಕ ಪ್ರತಿಭೆಗಳನ್ನು ಪರಿಚಯಿಸುವ ಬಲ್ಲವರ ಬಳಗ  ಹಾಗೂ ಮರೆಯಲಾಗದ ಮಹನೀಯರ ಕುರಿತು ಹವಳದ ರಾಶಿ ಎಂಬ ಎರಡು  ಕೃತಿಗಳ ಮೂಲಕ ಏಣಗಿ ಬಾಳಪ್ಪ, ಹುಕ್ಕೇರಿ ಬಾಳಪ್ಪ, ಬಿದರಿ ಕುಮಾರ ಶಿವಯೋಗಿಗಳು, ಸಿದ್ದೇಶ್ವರ ಪೂಜ್ಯರಂತಹ ಮಹನೀಯರನ್ನು ತಮ್ಮ ಬರಹಗಳ ಮೂಲಕ ಪರಿಚಯಿಸುವ ಕಾರ್ಯವನ್ನು ಮಾಡಿರುವರು. ಇವರು ಸವದತ್ತಿ ತಾಲೂಕಿನ ಹೆಮ್ಮೆಯ ಶಿಕ್ಷಕ ಸಾಹಿತಿ.ನಮ್ಮ ನಡುವೆ ಇರುವ ಸೃಜನಶೀಲ ಬರಹಗಾರರು.ಬಿಡುವಿರದ ಚಟುವಟಿಕೆಗಳ ನಡುವೆಯೂ ಕ್ರಿಯಾತ್ಮಕ ಬರವಣಿಗೆ ಹವ್ಯಾಸದ ಮೂಲಕ ತಮ್ಮದೇ ಆದ ಸಾಹಿತ್ಯಲೋಕವನ್ನು ನಮಗೆ ನೀಡುತ್ತಿರುವ ನಮಗೆಲ್ಲ ಮಾರ್ಗದರ್ಶಕರು ಎಂದು ಯರಗಟ್ಟಿ ತಾಲೂಕಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿನಿಯರ ವಸತಿ ನಿಲಯದ ಮೇಲ್ವಿಚಾರಕಿ ಹಾಗೂ ಯರಗಟ್ಟಿ ತಾಲೂಕ ಅಖಿಲ ಕರ್ನಾಟಕ ಸಾಂಸ್ಕೃತಿಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಆಶಾ ಫರೀಟ ತಿಳಿಸಿದರು.

ಅವರು ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ.ದೇಶಪಾಂಡೆ ಸಭಾಂಗಣದಲ್ಲಿ ಜರುಗಿದ ಅಂತಾರಾಷ್ಟ್ರೀಯ  ಮಹಿಳಾ ದಿನಾಚರಣೆ, ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸುತ್ತಿರುವ ಮಹಿಳೆಯರಿಗೆ ವನಿತಾ ಪ್ರಶಸ್ತಿ, ಅತ್ಯುತ್ತಮ ಮಹಿಳಾ ಮಂಡಳಗಳಿಗೆ ಪ್ರಶಸ್ತಿ ಮತ್ತು ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ ಅವರ ಬಲ್ಲವರ ಬಳಗ ಮತ್ತು ಹವಳದ ರಾಶಿ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಕೃತಿಗಳ ಅನಾವರಣ ನೆರವೇರಿಸಿ ಮಾತನಾಡಿದರು.

- Advertisement -

“ಪ್ರತಿಯೊಂದು ಕಾಲಘಟ್ಟದಲ್ಲಿಯೂ ಮಹಿಳೆ ಅಬಲೆ ಅಲ್ಲ ಸಬಲೇ ಎಂಬುದನ್ನು ತನ್ನ ತನ್ನ ಕೆಲಸ ಕಾರ್ಯದ ಮೂಲಕ ಸಾಧಿಸಿ ತೋರಿಸಿದ್ದಾಳೆ ಎಂಥಾ ಕೆಲಸವನ್ನಾಗಲಿ ನಿರ್ವಹಿಸುವ ಶಕ್ತಿ ಆಕೆಯಲ್ಲಿದೆ ಯಾವುದೇ ಪಾಶ್ಚಾತ್ಯ ರಾಷ್ಟ್ರಗಳು ನೀಡದಂತಹ ದೈವಿಕ ಸ್ಥಾನವನ್ನು ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ನೀಡಿರುವುದು ಮಹಿಳೆಯ ಶಕ್ತಿ ಸಾಮರ್ಥ್ಯಕ್ಕೆ ಸಾಕ್ಷಿ ಎನಿಸಿದೆ. ಪ್ರಾಚೀನ ಕಾಲದ ಮಹಿಳೆಯರ ಕೊಡುಗೆ ಇತಿಹಾಸದ ಪುಟಗಳಲ್ಲಿ ಅಮರವಾಗಿವೆ ವೇದಗಳ ಕಾಲದಲ್ಲಿ ಇದ್ದಂತಹ ಲೋಪಮುದ್ರ ಮೈತ್ರಿಯಾ ಗಾರ್ಗಿ ಘೋಷ ಮುಂತಾದ ಮಹಿಳೆಯರು ತಮ್ಮ ವಿದ್ವತ್ಪೂರ್ಣ ಜ್ಞಾನದಿಂದ ಯಜ್ಞವಲ್ಕ ಅಂತಹ ಋಷಿ ಮುನಿವರ್ಯರೊಂದಿಗೆ ಚರ್ಚೆಯಲ್ಲಿ ಭಾಗವಹಿಸಿದ್ದು ಇತಿಹಾಸದ ಪುಟದಲ್ಲಿ ಮಹಿಳೆಯ ಜ್ಞಾನದ ವಿದ್ವತ್ತಿಗೆ ಸಾಕ್ಷಿ ಎನಿಸಿದೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ ಮುಂತಾದ ಮಹಿಳೆಯರು ತಮ್ಮ ಆಡಳಿತದ ಮೂಲಕ ಪ್ರತಿಯೊಬ್ಬ ಮಹಿಳೆಯರಿಗೂ ಮಾದರಿಯಾಗಿದ್ದಾರೆ ಸ್ವಾತಂತ್ರ ಹೋರಾಟದಲ್ಲಿ ಮಹಿಳೆಯ ಪಾತ್ರ ಅಗ್ರಗಣ್ಯವಾದುದು.  ಇಂದು ಸಾಮಾಜಿಕ ಸಂಕೋಲೆಗಳಿಂದ ಹೊರಬಂದು ಮಹಿಳೆ ಸ್ವಾವಲಂಬಿಯಾಗಿದ್ದಾಳೆ. ಆರ್ಥಿಕವಾಗಿ ಸ್ವಾತಂತ್ರ‍್ಯವನ್ನು ಪಡೆದಿರುತ್ತಾಳೆ ಸಮಾಜದ ಮುಖ್ಯವಾಹಿನಿಯಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಮೂಲಕ ಸುಭದ್ರ ಭಾರತದ ನಿರ್ಮಾಣದಲ್ಲಿ ತನ್ನ ಪಾತ್ರವನ್ನರಿತು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾಳೆ ಸಮಾನತೆ ಎಂದರೆ ಪೈಪೋಟಿಯಲ್ಲ ಒಬ್ಬರಿಗೊಬ್ಬರು ಪೂರಕವಾಗಿ ಸಹಕಾರ ಮನೋಭಾವದಿಂದ ಪುರುಷ ಮತ್ತು ಮಹಿಳೆಯರು ಮಹಿಳೆ ಒಟ್ಟಿಗೆ ಹೆಜ್ಜೆ ಇಡುವ ಮೂಲಕ  ಪುರುಷ ಮತ್ತು ಮಹಿಳೆಯರು ಒಟ್ಟಿಗೆ ಹೆಜ್ಜೆ ಇಡುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುವುದು ಪುರುಷ ಮತ್ತು ಮಹಿಳೆ ಒಂದೇ ನಾಣ್ಯದ ಎರಡು ಮುಖಗಳು” ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ಸಹಾಯಕ ಪ್ರಾಧ್ಯಾಪಕರು ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳೆಯರ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಶೈಲಜ ಮಾತನಾಡಿದರು.      

“ಸದೃಢ ಭಾರತ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಬಹುಮುಖ್ಯವಾಗಿದೆ ಎಂದು ಅದನ್ನು ಅರಿತು ದೇಶದ ಅಭಿವೃದ್ಧಿಯಲ್ಲಿ ಎಲ್ಲಾ ಮಹಿಳೆಯರು ಕಾರ್ಯಪ್ರವೃತ್ತರಾಗಬೇಕೆಂದು” ಅವರು ಕರೆ ನೀಡಿದರು.

“ಲಕ್ಕಮ್ಮನವರ ಗುರುಗಳು ನಮಗೆಲ್ಲ ಸ್ಪೂರ್ತಿ. ಎಲೆಮರೆಯ ರೀತಿಯ ಕಾರ್ಯವನ್ನು  ಮಾಡುತ್ತಿರುವವರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುತ್ತಿರುವವರು.ಇಂದು ಅಪ್ನಾದೇಶ ಸಂಘಟನೆಯ ಪದಾಧಿಕಾರಿಗಳ ಪದಗ್ರಹಣ ಜರುಗಿದೆ. ನನಗೆ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿರುವರು. ನನ್ನ ಪ್ರತಿಯೊಂದು ಕಾರ್ಯಗಳಿಗೆ ಸ್ಪೂರ್ತಿ ನನ್ನ ಪತಿ ಎಂದು ನಾನು ಹೆಮ್ಮೆಯಿಂದ ಹೇಳುವೆ. ಅಪ್ನಾದೇಶ ಸಂಘಟನೆ ವೈ.ಬಿ.ಕಡಕೋಳ ಅವರ ಅಧ್ಯಕ್ಷತೆಯಲ್ಲಿ ಲಕ್ಕಮ್ಮನವರ ಗುರುಗಳ ಮಾರ್ಗದರ್ಶನದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಚಟುವಟಿಕೆಗಳನ್ನು ಮಾಡಲು ಚೇತನ ಪೌಂಡೇಶನ್ ಮಾಡಲಗೇರಿಯವರ ಸಹಕಾರದೊಂದಿಗೆ ಅವಕಾಶ ದೊರಕಿದೆ. ಇದರ ಫಲಪ್ರದ ಚಟುವಟಿಕೆಗಳು ಮುಂಬರುವ ದಿನಗಳಲ್ಲಿ ಸಾಗುತ್ತವೆ ಎಂದು ಅಪ್ನಾದೇಶ ಪ್ರಧಾನ ಕಾರ್ಯದರ್ಶಿ ಬೆಂಗಳೂರಿನ ಡಾ.ವೀಣಾ ನುಡಿದರು.

- Advertisement -

ಕರ್ನಾಟಕ ರಾಜ್ಯ ಮಹಿಳಾ ನೌಕರರ ಸಂಘಟನೆಯ ರಾಜ್ಯ ಜಂಟಿ ಕಾರ್ಯದರ್ಶಿ ಡಾ.ಆಶಾಬೇಗಂ ಮಾತನಾಡಿ “ಮಹಿಳೆ ಅಬಲೆಯಲ್ಲ ಸಬಲೆ ಎಂಬುದಕ್ಕೆ ಹಲವು ನಿದರ್ಶನಗಳನ್ನು ನೀಡಿ, ಪುರುಷ ಸಮಾಜದಲ್ಲಿ ಅವರ ಪ್ರೋತ್ಸಾಹ ಸದಾ ಅವಶ್ಯಕ ಎಂಬುದನ್ನು ತಿಳಿಸಿದರು.

ವೈ.ಬಿ.ಕಡಕೋಳ ತಮ್ಮ ಎರಡು ಕೃತಿಗಳು ಮೂಡಿ ಬಂದ ಕುರಿತು ಮಾತನಾಡಿದರು.ಈ ಸಂದರ್ಭದಲ್ಲಿ ಬಲ್ಲವರ ಬಳಗ ಹಾಗೂ ಹವಳದ ರಾಶಿ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಭಾರತ ಜ್ಞಾನ ವಿಜ್ಞಾನ ಸಮಿತಿಯ ಎಂ.ಆರ್.ಕಬ್ಬೇರ, ತಲ್ಲೂರ, ಮಂಜುನಾಥ ಪವಾಡಿ ಮಾತನಾಡಿದರು.     

ಪ್ರಾಸ್ತಾವಿಕವಾಗಿ ಮಾತನಾಡಿದ ಚೇತನ ಫೌಂಡೇಶನ್ ಅಧ್ಯಕ್ಷರಾದ ಚಂದ್ರಶೇಖರ ಮಾಡಲಗೇರಿ ತಮ್ಮ ಸಂಸ್ಥೆಯಿಂದ ಕಳೆದ ಹತ್ತು ವರ್ಷಗಳಲ್ಲಿ ಸಾಹಿತ್ಯ ಕಲೆ ರಂಗಭೂಮಿ ಸಿನಿಮಾ ಕಿರುತೆರೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಮಾಡುತ್ತ ಬಂದಿದ್ದು ಇಂದು ತಮ್ಮ ಸಂಸ್ಥೆಯ ಎರಡನೂರ ಇಪ್ಪತ್ತನೆಯ ಕಾರ್ಯಕ್ರಮ ಜರುಗುತ್ತಿರುವುದನ್ನು ತಮ್ಮ ಎಲ್ಲ ಕಾರ್ಯಕ್ರಮಗಳ ರೂಪರೇಷೆಗಳನ್ನು ತಿಳಿಸುತ್ತ ನುಡಿದರು.

ಶಿಕ್ಷಕ ಸಂಘಟಕ ಎಲ್.ಐ.ಲಕ್ಕಮ್ಮನವರ ಮಾತನಾಡಿ, ಅಪ್ನಾದೇಶ ಸಂಘಟನೆ ಹತ್ತು ವರ್ಷಗಳ ಹಿಂದೆ ಅಂದಿನ ಐಎಎಸ್ ಅಧಿಕಾರಿ ಭರತಲಾಲ್ ಮೀನಾ ಅವರ ಮೂಲಕ ಧಾರವಾಡದಲ್ಲಿ ಹುಟ್ಟಿತು. ಇಂದು ಕರ್ನಾಟಕ ರಾಜ್ಯದಾದ್ಯಂತ ಈ ಸಂಘಟನೆ ಇವೆ. ಧಾರವಾಡ ಸಂಘಟನೆಯ ಪದಾಧಿಕಾರಿಗಳು ರಾಜ್ಯದ ವಿವಿಧ ಭಾಗದಲ್ಲಿ ಇರುವರು. ಅವರ ಮೂಲಕ ಮುಂದಿನ ದಿನಗಳಲ್ಲಿ ರಚನಾತ್ಮಕ ಕಾರ್ಯಗಳು ಜರಗುತ್ತವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶೋಭಾ ಗಾಣಿಗೇರ, ಸುಜಾತಾ ಗಾಂವಕರ, ಜಯಶ್ರೀ ಬೆರಗುಡ, ರತ್ನಾ ಹಾದಿಮನಿ, ರೇಣುಕಾ ಬಂದಮ ಇವರಿಗೆ ಅಂತಾರಾಷ್ಟ್ರೀಯ ವನಿತಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಧಾರವಾಡದ ಕುಮಾರೇಶ್ವರ ನಗರ ಮಿಹಿಳಾ ಮಂಡಳ, ಬೆಂಗಳೂರಿನ ಕರ್ನಾಟಕ ರಾಜ್ಯ ಮಹಿಳಾ ನೌಕರರ ಸಂಘ, ಉಪ್ಪಿನ ಬೆಟಗೇರಿಯ ಲವಣಗಿರಿ ಮಹಿಳಾ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘಗಳ ಪದಾಧಿಕಾರಿಗಳಿಗೆ ಉತ್ತಮ ಸಂಘಟನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಿವೃತ್ತ ಶಿಕ್ಷಕಿ ಪ್ರಮಿಳಾ ಜಕ್ಕನ್ನವರ ಸ್ವಾಗತಿಸಿದರು. ಆರ್.ಎಂ.ಕುರ್ಲಿ ನಿರೂಪಿಸಿದರು.ಚನಬಸು. ಲಗಮನ್ನವರ ವಂದಿಸಿದರು.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group