ಶಿಕ್ಷಕರು ಜನರನ್ನು ಉತ್ತಮರನ್ನಾಗಿ ಮಾಡುತ್ತಾರೆ – ಡಾ. ಸಿ ಕೆ ಕಟ್ಟಿ

0
435

ಸಿಂದಗಿ: ಒಬ್ಬ ಶಿಕ್ಷಕನು ಕತ್ತಿಗಿಂತ ಲೇಖನಿಯ ಮಹತ್ವವನ್ನು ನಮಗೆ ಕಲಿಸುತ್ತಾನೆ. ಅವರು ಜನರ ಜೀವನಮಟ್ಟವನ್ನು ಉನ್ನತೀಕರಿಸುವ ಮೂಲಕ ಸಮಾಜದಲ್ಲಿ ಹೆಚ್ಚು ಗೌರವಾನ್ವಿತರಾಗಿದ್ದಾರೆ. ಅವರು ಜನರಿಗೆ ಶಿಕ್ಷಣ ನೀಡುವ ಮತ್ತು ಅವರನ್ನು ಉತ್ತಮ ಮಾನವರನ್ನಾಗಿ ಮಾಡುತ್ತಾರೆ ಎಂದು ಸಾಹಿತಿ ಡಾ.ಸಿ. ಕೆ. ಕಟ್ಟಿ ಹೇಳಿದರು.

ಪಟ್ಟಣದ ಶ್ರೀ ಸಂಗಮೇಶ್ವರ ಕಾಲೇಜ್ ಆಫ್  ಫಾರ್ಮಸಿ ಹಾಗೂ ಕಾವ್ಯ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಮತ್ತು  ಫೇರ್ವೆಲ್ ಪಾರ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,  ಗುರು ಬ್ರಹ್ಮ, ಗುರು ವಿಷ್ಣು, ಗುರು ಮಹೇಶ್ವರ, ಒಬ್ಬ ಶಿಕ್ಷಕ ವಿದ್ಯಾರ್ಥಿಗಳನ್ನು ರೂಪಿಸುವ ಆರೈಕೆ ಮಾಡುವ ಹಾಗೂ ಕಾಪಾಡುವ ಪಾತ್ರ ಬಹಳ ಮುಖ್ಯವಾದದ್ದು. ಒಂದು ವರ್ಷದ ಫಲ ಬೇಕಾದರೆ ಬೆಳೆಗಳನ್ನು ಬೆಳೆಯಬೇಕು ಹತ್ತು ವರ್ಷದ ಫಲ ಬೇಕೆಂದರೆ ಗಿಡಗಳನ್ನು ನೆಡಬೇಕು ನೂರು ವರ್ಷದ ಫಲ ಬೇಕೆಂದರೆ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಬೀಜ ಬಿತ್ತಬೇಕು. ಶಿಕ್ಷಕರು ನಮಗೆ ದೇವರ ವಿಶೇಷ ಆಶೀರ್ವಾದ. ಅವರು ಉತ್ತಮ ರಾಷ್ಟ್ರವನ್ನು ನಿರ್ಮಿಸುವವರು ಮತ್ತು ಜಗತ್ತನ್ನು ಉತ್ತಮ ಸ್ಥಳವಾಗಿಸುವವರು. ಎಂದು ತಿಳಿಸಿದರು,

ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ್  ನಾಗರಬೆಟ್ಟ ಮಾತನಾಡಿ, ಮಕ್ಕಳ ಭವಿಷ್ಯ ಹಾಗೂ ದೇಶದ ಒಳ್ಳೆಯ ಪ್ರಜೆಗಳ ನಿರ್ಮಾಣದ ಕೆಲಸ ಶಿಕ್ಷಕರದ್ದು ಅವರಿಗೆ ಶಿಕ್ಷಣದ ಜೊತೆಗೆ ನೈತಿಕತೆಯ ಮೌಲ್ಯಗಳನ್ನು ನೀಡಿ ಸಮಾಜದ ಉತ್ತಮ ಪ್ರಜೆಗಳನ್ನಾಗಿ ನಿರ್ಮಿಸುವ ಕೆಲಸದಲ್ಲಿ ಶಿಕ್ಷಕರ ಪಾತ್ರ ಪ್ರಮುಖ ಪಾತ್ರವಾಗಿದೆ ಎಂದರು.

ಮಹಿಳಾ ಸಾಹಿತಿ ಶಕುಂತಲಾ ಹಿರೇಮಠ ಮಾತನಾಡಿ, ಆಧುನಿಕ ಯುಗದಲ್ಲಿ ಶಿಕ್ಷಕರು ಮಕ್ಕಳಲ್ಲಿ ನೈತಿಕತೆ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಮಕ್ಕಳಲ್ಲಿ ನೈತಿಕ ಭಾವನೆ ಬೆಳೆಸಬೇಕೆಂದು ಹೇಳಿದರು. 

ನಿವೃತ್ತ ಪೊಲೀಸ್  ಸಬ್ ಇನ್ಸ್ಪೆಕ್ಟರ್ ಎಂ.ಎಂ. ಹಂಗರಗಿ ಮಾತನಾಡಿ, ದೇಶದ ಭಾವಿ ಪ್ರಜೆಗಳ ಒಳ್ಳೆಯ ಸಮಾಜದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಕಾಂಚನಾ ನಾಗರಬೆಟ್ಟ, ಪ್ರಾಂಶುಪಾಲ ಸಂದೀಪ್ ಚಾಂದಕವಟೆ, ರಾಜಕುಮಾರ್ ಕಾಂಬಳೆ, ಮಹಾಂತೇಶ್ ಕಮಲಾಪುರ್, ಸಂತೋಷ ಚವ್ಹಾಣ, ಬಸವರಾಜ್ ಪಾಟೀಲ್, ಹಾಗೂ ಹಿರಿಯಪ್ರಾಥಮಿಕ ಶಾಲೆಯ ಮಕ್ಕಳು ಕಾಲೇಜಿನ ವಿದ್ಯಾರ್ಥಿಗಳು ಮುಂತಾದವರು ಪಾಲ್ಗೊಂಡಿದ್ದರು.

ಕುಮಾರಿ ಐಶ್ವರ್ಯ ಹಾಗೂ ವರ್ಷ ನಿರೂಪಿಸಿದರು.