- Advertisement -
ಕಿತ್ತೂರ– ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಎಮ್.ಕೆ. ಹುಬ್ಬಳ್ಳಿ ಶ್ರೀ ಕಲ್ಮೇಶ್ವರ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಂಕರ ಕಳಸಣ್ಣವರ ಪ್ರೌಢವಿಭಾಗದಲ್ಲಿ ಉತ್ತಮ ಶಿಕ್ಷಕ ಹಾಗೂ ಎಮ್.ಕೆ ಹುಬ್ಬಳ್ಳಿ ಮಾದರಿ ಗಂಡು ಮಕ್ಕಳ ಶಾಲೆಯ ಸಹಶಿಕ್ಷಕರಾದ ಸಿದ್ದಯ್ಯ ಹಿರೇಮಠರವರಿಗೆ ಸ್ಕೌಟ್ ಆಂಡ್ ಗೈಡ್ಸ್ ನಿಂದ ಕೊಡಲ್ಪಡುವ ‘ಸೇವಾರತ್ನ’ ಜಿಲ್ಲಾ ಪ್ರಶಸ್ತಿ ಇನ್ನೂ ದೇವರಶಿಗೀಹಳ್ಳಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ವೀರಪ್ಪ ಮಜ್ಜಗಿಯವರಿಗೆ ಪ್ರಾಥಮಿಕ ವಿಭಾಗದಲ್ಲಿ ಕೊಡಲ್ಪಡುವ ಜಿಲ್ಲಾ ಉತ್ತಮ ಪ್ರಶಸ್ತಿ ಲಭಿಸಿದೆ .ಎಮ್.ಕೆ ಹುಬ್ಬಳ್ಳಿಯ ಎಲ್ಲ ಶಾಲೆಯ ಮುಖ್ಯೋಪಾಧ್ಯಾಯರು,ಸಹಶಿಕ್ಷಕರು ಸಂಘದ ಪದಾಧಿಕಾರಿಗಳು ವಿದ್ಯಾರ್ಥಿಗಳು ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ.