spot_img
spot_img

ಶಿಕ್ಷಕರು ಮಕ್ಕಳಲ್ಲಿ ಕನಸು ಬಿತ್ತಬೇಕು – ಸಂಸದೆ ಮಂಗಳಾ ಅಂಗಡಿ

Must Read

- Advertisement -

ಗೋಕಾಕ: ಮಕ್ಕಳ ಸರ್ವಾಂಗೀಣ ವಿಕಾಸ ಮಾಡುವಲ್ಲಿ ಶಿಕ್ಷಕರು ಪ್ರಮುಖ ಪಾತ್ರವನ್ನು ವಹಿಸಬೇಕೆಂದು ಬೆಳಗಾವಿ ಲೋಕಸಭಾ ಸಂಸದೆ ಶ್ರೀಮತಿ ಮಂಗಳಾ ಸುರೇಶ ಅಂಗಡಿ ಅವರು ಸಲಹೆ ನೀಡಿದರು.

ಇತ್ತೀಚೆಗೆ ನಗರದ ಎನ್‍ಇಎಸ್‍ಡಬ್ಲೂ ಸೊಸಾಯಿಟಿಯ ನೇತಾಜಿ ಹಿಪ್ಪೋಕ್ಯಾಂಪಸ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವರು, ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಕನಸುಗಳನ್ನು ಬಿತ್ತುವುದರ ಜೊತೆಗೆ ಅವುಗಳನ್ನು ಅರಳಿಸುವ ಕಾರ್ಯವನ್ನು ಮಾಡಬೇಕೆಂದು ತಿಳಿಸಿದರು.

ಇಂದಿನ ವಿದ್ಯಾರ್ಥಿಗಳು ಮುಂದಿನ ನಮ್ಮ ದೇಶದ ಅಮೂಲ್ಯವಾದ ಆಸ್ತಿಗಳು ಅವರ ಭವಿಷ್ಯವನ್ನು ರೂಪಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ವಿದ್ಯಾರ್ಥಿಗಳ ಮನೆಯಲ್ಲಿ ಕಲಿಕಾ ವಾತಾವರಣವನ್ನು ನಿರ್ಮಿಸುವುದು ಪ್ರತಿಯೊಬ್ಬ ಪಾಲಕರ ಆದ್ಯ ಕರ್ತವ್ಯವಾಗಿದೆ. ಮಕ್ಕಳ ಬಗ್ಗೆ ಪಾಲಕರು ವಿಶೇಷವಾದ ಗಮನ ಹರಿಸಬೇಕೆಂದು ತಿಳಿಸಿದರು.

- Advertisement -

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಎನ್.ಬಿ.ಜರತಾರಕರ ವಹಿಸಿದ್ದರು.

ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಚಿದಾನಂದ ದೇಮಶೆಟ್ಟಿ, ಕಾರ್ಯದರ್ಶಿ ವಿ.ಬಿ.ಧೂಳಾಯಿ, ಸಹಕಾರ್ಯದರ್ಶಿ ಎಸ್.ಕೆ.ಮಠದ, ನಿರ್ದೇಶಕರಾದ ಜಿ.ವಿ.ಝಂವರ, ವಿ.ವಿ.ಜರತಾರಕರ, ಬಿ.ವಿ.ಕಲ್ಲೋಳಿ, ವಾಯ್.ಕೆ.ಬಾಗಾಯಿ, ಎಸ್.ಜಿ.ತಾಂವಶಿ, ಶ್ರೀಮತಿ ಆರ್.ಎಸ್.ವಡೇರ, ಎಸ್.ಎನ್.ಮಗೆನ್ನವರ, ವಿ.ಜೆ.ಝಂವರ, ಹಿಪ್ಪೋಕ್ಯಾಂಪಸ್ ಸಂಸ್ಥೆಯ ಮಹೇಂದ್ರ, ಅನುರಾಧಾ ವಿನಯ್ ಇದ್ದರು.

ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಾಯ್.ಎನ್.ನನದಿಕರ ವಾರ್ಷಿಕ ವರದಿಯನ್ನು ವಾಚಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. 

- Advertisement -
- Advertisement -

Latest News

ಕನ್ನಡಕ್ಕಾಗಿ ಇನ್ನೂ ಹೋರಾಡಬೇಕಾಗಿರುವುದು ವಿಷಾದನೀಯ – ಚಂದ್ರಶೇಖರ ಅಕ್ಕಿ

ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಸಂದರ್ಶನ ಮೂಡಲಗಿ - ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನವು ಇದೇ ದಿ. ೨೩ , ೨೪...
- Advertisement -

More Articles Like This

- Advertisement -
close
error: Content is protected !!
Join WhatsApp Group