spot_img
spot_img

ಜಾನಪದದ ಸೊಗಡನ್ನು ಮೈಗೂಡಿಕೊಂಡ ಕವಿ ದ.ರಾ.ಬೇಂದ್ರೆ- ಶಿವಾನಂದ ಚಂಡಕೆ

Must Read

spot_img
- Advertisement -

ಮೂಡಲಗಿ: “ಬಡತನದಲ್ಲಿ ಹುಟ್ಟಿ ಬಡತನದಲ್ಲಿ ಬೆಳೆದು ಜೀವನ ಪ್ರೀತಿಯಿಂದ ಬದುಕಿನ ಸವಾಲುಗಳನ್ನು ಎದುರಿಸಿ ನಗುನಗುತಾ ಬಾಳಿ ನಾಡಿಗೆ ಬಹುದೊಡ್ಡ ಸಾಹಿತ್ಯ ಸೇವೆ ಮಾಡಿದ ವರಕವಿ, ಶಬ್ದ ಗಾರುಡಿಗನೆಂದರೆ ಅದು ದ.ರಾ.ಬೇಂದ್ರೆಯವರು” ಎಂದು ಕನ್ನಡ ಪ್ರಾಧ್ಯಾಪಕ ಶಿವಾನಂದ ಚಂಡಕೆ ತಿಳಿಸಿದರು.

ಸ್ಥಳೀಯ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಆಯ್.ಕ್ಯೂ.ಎ.ಸಿ. ಅಡಿಯಲ್ಲಿ ಕನ್ನಡ ವಿಭಾಗದ ವತಿಯಿಂದ ಹಮ್ಮಿಕೊಂಡ ಭುವನದ ಭಾಗ್ಯ ಎಂದೇ ಖ್ಯಾತರಾದ ವರಕವಿ ದ.ರಾ. ಬೇಂದ್ರೆಯವರ   127 ನೇ ಜನ್ಮದಿನಾಚರಣೆ ಪ್ರಯುಕ್ತ ಹಮ್ಮಿಕೊಂಡ ಬೇಂದ್ರೆ ಕಾವ್ಯದಲ್ಲಿ ಗೇಯತೆ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, “ಬೇಂದ್ರೆಯವರು ನವಯುಗದ ಪ್ರಖ್ಯಾತ ಕವಿಗಳು. ಮದುವೆಯಾದ ಹೊಸತರಲ್ಲಿ ಹುಟ್ಟಿದ  ಮೂರು ಮಕ್ಕಳು ಅಸುನೀಗಿದಾಗ ಅದರ ದುಃಖವನ್ನು ಸಾಹಿತ್ಯದ ಮೂಲಕ ಹೊರಹಾಕಿ ಶಮನಗೊಳಿಸಿಕೊಂಡ ಭಾವುಕ ಕವಿ. ಜಾನಪದದ ಸೊಗಡನ್ನು ಮೈಗೂಡಿಕೊಂಡ ಅವರ ಸಾಹಿತ್ಯದಲ್ಲಿ ಶಬ್ದಗಳ ಚಮತ್ಕಾರವಿದೆ. ಅವರ ಜೀವನ ನಮಗೆಲ್ಲಾ ಮಾದರಿ ಬದುಕಿನ ನೂರಾರು ಸಮಸ್ಯೆಗಳನ್ನು ದಿಟ್ಟತನದಿಂದ ಎದುರಿಸಿ ನಸುನಗುತ ಬಂದೇವ ತುಸುನಗುತ ತೆರಳೋಣ ಯಾಕಾರ ಕೆರಳೋಣ ಎಂಬ ಅವರ ನುಡಿಯನ್ನು ನಾವೆಲ್ಲಾ ಅನುಸರಿಸೋಣ” ಎಂದು ಕರೆ ನೀಡಿದರು.    

ಪ್ರಾಂಶುಪಾಲರಾದ ಶಾನೂರಕುಮಾರ ಗಾಣಿಗೇರ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, “ಬೇಂದ್ರೆಯವರು ಜನಮಾನಸದಲ್ಲಿ ನೆಲೆನಿಲ್ಲುವ ಕವಿಯಾಗಿದ್ದಾರೆ .ಅವರ ಭಾವಗೀತೆಗಳನ್ನು ಕೇಳುತ್ತಿದ್ದರೆ ಜಗವನ್ನೇ ಮರೆಯುತ್ತೇವೆ” ಎಂದರು.      

- Advertisement -

ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದ  ಬಿ.ಸಿ.ಹೆಬ್ಬಾಳ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಆಯ್.ಕ್ಯೂ.ಎ.ಸಿ. ಸಂಯೋಜಕರಾದ ಚೇತನ್ ರಾಜ್, ಕನ್ನಡ ಅಧ್ಯಾಪಕರುಗಳಾದ  ಶಿವಕುಮಾರ, ಮಹಾದೇವ ಪೋತರಾಜ, ಎಚ್.ಎಂ.ಮಡಿವಾಳರ  ಎನ್.ಬಿ.ಸಂಗ್ರೇಜಕೊಪ್ಪ  ಮುಂತಾದವರು ಭಾಗವಹಿಸಿದ್ದರು.

ಶ್ವೇತಾ ಪಾಟೀಲ ಪ್ರಾರ್ಥಿಸಿದರು. ಉಸ್ಮಾನಸಾಬ ಮದಭಾಂವಿ ಸ್ವಾಗತಿಸಿದರು. ಅಕ್ಷತಾ ಹಳ್ಳೂರ ನಿರೂಪಿಸಿದರು. ಸೋಮಲಿಂಗ ಖಾನಪ್ಪಗೋಳ ವಂದಿಸಿದರು.

- Advertisement -
- Advertisement -

Latest News

ರಾಜ್ಯದ ರಸ್ತೆ ಕಾಮಗಾರಿಗಳು ಸೆ.2024 ರೊಳಗೆ ಪೂರ್ಣ ; ಮೇಲ್ಮನೆಗೆ ಗಡಕರಿ ಉತ್ತರ

ಮೂಡಲಗಿ: ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ ಯೋಜನೆಯಡಿ ಕರ್ನಾಟಕ ರಾಜ್ಯದಲ್ಲಿ 663 ಕೋಟಿ ರೂ.ಗಳ ವೆಚ್ಚದಲ್ಲಿ ಸುಮಾರು 241 ಕಿ.ಮೀ ಉದ್ದದ 36 ರಾಜ್ಯ...
- Advertisement -

More Articles Like This

- Advertisement -
close
error: Content is protected !!
Join WhatsApp Group