ಬಿಳಿ ಕೂದಲಿಗೆ ಟೆನ್ಷನ್? ಈ ನ್ಯಾಚುರಲ್‌ ಹೇರ್ ಪ್ಯಾಕ್‌ಗಳಿಂದ ಕ್ಷಣಾರ್ಧದಲ್ಲೇ ಕಪ್ಪು ಕೂದಲು ಪಡೆಯಿರಿ!

Must Read

ಇಂದಿನ ಯುವಕ ಹಾಗೂ ಯುವತಿಯರನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆ ಎಂದರೆ ಬಿಳಿ ಕೂದಲು. ಹದಿಹರೆಯದಲ್ಲೇ ಬಿಳಿ ಕೂದಲು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹಲವರು ಕಷ್ಟಪಡುತ್ತಿದ್ದಾರೆ. ಆದರೆ ಚಿಂತೆ ಬೇಡ! ಬಿಳಿ ಕೂದಲನ್ನು ಕಪ್ಪಾಗಿಸಲು ಹಲವು ನೈಸರ್ಗಿಕ ಮಾರ್ಗಗಳಿವೆ.

ರಾಸಾಯನಿಕ ಉತ್ಪನ್ನಗಳಿಗೆ ಗುಡ್‌ಬೈ!

ಕೂದಲಿಗೆ ಅನೇಕ ರಾಸಾಯನಿಕ ಉತ್ಪನ್ನಗಳನ್ನು ಬಳಸುವುದರಿಂದ ಕೂದಲಿನ ಬೆಳವಣಿಗೆ ಕುಂಠಿತಗೊಳ್ಳಬಹುದು. ಹಾಗಾಗಿ, ಈ ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರಗಳನ್ನು ಕಂಡುಕೊಳ್ಳುವುದು ಉತ್ತಮ.

ಬಿಳಿ ಕೂದಲಿಗೆ ಪರಿಣಾಮಕಾರಿ ನೈಸರ್ಗಿಕ ಪರಿಹಾರಗಳು:

  • ಬ್ಲ್ಯಾಕ್ ಟೀ ಹೇರ್ ಮಾಸ್ಕ್: ಸ್ನಾನದ ನಂತರ ಬ್ಲ್ಯಾಕ್ ಟೀ ನೀರನ್ನು ಕೂದಲಿಗೆ ಹಾಕಿಕೊಳ್ಳುವುದರಿಂದ ಬಿಳಿ ಕೂದಲು ಮತ್ತೆ ಕಪ್ಪು ಬಣ್ಣಕ್ಕೆ ತಿರುಗುತ್ತವೆ.
  • ಹೆನ್ನಾ ಮತ್ತು ಮೊಟ್ಟೆಯ ಹೇರ್ ಪ್ಯಾಕ್: ಹೆನ್ನಾ ಹಾಗೂ ಮೊಟ್ಟೆಯ ಹೇರ್‌ ಮಾಸ್ಕ್‌ ನಿಮ್ಮ ಕೂದಲಿಗೆ ನೈಸರ್ಗಿಕ ಹೊಳಪನ್ನು ನೀಡುವುದಲ್ಲದೇ ಕೂದಲಿನ ಎಲ್ಲ ಸಮಸ್ಯೆಗಳಿಗೂ ಮುಕ್ತಿ ನೀಡುತ್ತದೆ.
  • ಈರುಳ್ಳಿ ಮತ್ತು ನಿಂಬೆ ರಸ ಹೇರ್ ಪ್ಯಾಕ್: ಈರುಳ್ಳಿ ಹಾಗೂ ನಿಂಬೆ ರಸವನ್ನು ಮಿಶ್ರಣ ಮಾಡಿ ಕೂದಲಿಗೆ ಹಚ್ಚುವುದರಿಂದ ಕೂದಲಿನ ಬೆಳವಣಿಗೆ ಸುಧಾರಿಸುತ್ತದೆ.
  • ಆಲೂಗಡ್ಡೆ ಮಾಸ್ಕ್: ಆಲುಗಡ್ಡೆಯನ್ನು ಕುದಿಸಿದ ನೀರನ್ನು ತಲೆಗೆ ಹಚ್ಚಿಕೊಂಡು ಸ್ವಲ್ಪ ಸಮಯದ ನಂತರ ತೊಳೆಯಿರಿ. ಇದರಿಂದ ಕೂದಲಿನ ಸಾಕಷ್ಟು ಸಮಸ್ಯೆಗಳು ದೂರವಾಗುತ್ತವೆ.

ಇನ್ನಷ್ಟು ಟಿಪ್ಸ್:

  • ಪೌಷ್ಟಿಕ ಆಹಾರ ಸೇವಿಸಿ.
  • ಒತ್ತಡವನ್ನು ಕಡಿಮೆ ಮಾಡಿ.
  • ಸಾಕಷ್ಟು ನೀರು ಕುಡಿಯಿರಿ.
  • ನಿಯಮಿತವಾಗಿ ವ್ಯಾಯಾಮ ಮಾಡಿ.

ಈ ಸಲಹೆಗಳನ್ನು ಪಾಲಿಸುವುದರಿಂದ ನಿಮ್ಮ ಕೂದಲು ಮತ್ತೆ ಕಪ್ಪು, ಚೆಲುವಾಗುವುದರಲ್ಲಿ ಯಾವುದೇ ಸಂಶಯವಿಲ್ಲ!

ಹೆಚ್ಚಿನ ಮಾಹಿತಿಗಾಗಿ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

Latest News

ಕವನ : ಬೆಳಕಿನ ದೀಪಾವಳಿ

ಬೆಳಕಿನ ದೀಪಾವಳಿ ಬೆಳಕು ಸರಿದು ನೇಸರನ ಅಸ್ತದೊಡನೆ ಜಗಕೆ ಜಗಮಗಿಸುವ ದೀಪಗಳ ದರ್ಶನ ಬಾನಂಚಿನಲಿ ಶಬ್ದಗಳ ನಡುವೆ ಬೆಳಕಿನ ಚಿತ್ತಾರ ಮೂಡಿಸುವ ಹಬ್ಬ ಬೆಳಕಿನ ದೀಪಾವಳಿತಮವ ಕಳೆದು ಜ್ಯೋತಿ ಬೆಳಗುವ ನಾಡಿನಪವಿತ್ರ ಹಬ್ಬ ತಳಿರು ತೋರಣ ಕಟ್ಟಿ ಮನೆಯನು ಸಿಂಗರಿಸಿ ಹಬ್ಬದಡುಗೆಯ ಸವಿಯುಣ್ಣುವ ಮನದ ಖುಷಿಯ...

More Articles Like This

error: Content is protected !!
Join WhatsApp Group