spot_img
spot_img

ಉಪ್ಪಾರ ಸಮಾಜಕ್ಕೆ ಅವಮಾನ ಮಾಡಿದ ಚಾನಲ್ ಕ್ಷಮೆ ಕೇಳಬೇಕು

Must Read

ಮೂಡಲಗಿ: ಜ.28ರಂದು ಘಟಪ್ರಭಾದ ನಂ1 ಯೂಟ್ಯೂಬ್ ಚಾನಲ್ ಒಂದರಲ್ಲಿ ರಾಜಕೀಯ ಸುದ್ದಿ ಬಿತ್ತರ ಮಾಡುವ ಸಂದರ್ಭದಲ್ಲಿ ಭಗೀರಥ ಉಪ್ಪಾರ ಸಮಾಜಕ್ಕೆ ಅವಮಾನ ಮಾಡಿದ್ದು ಇಡೀ ಉಪ್ಪಾರ ಸಮಾಜದ ಜನರಿಗೆ ನೋವು ಉಂಟಾಗಿದೆ. ಕೂಡಲೇ ಆ ಯೂಟ್ಯೂಬ್ ಚಾನಲ್ ಮಾಲೀಕ ಉಪ್ಪಾರ ಸಮಾಜದ ಜನರಿಗೆ ಕ್ಷಮೆಯಾಚಿಸಬೇಕು ಎಂದು ಉಪ್ಪಾರ ಸಮಾಜದ ಮುಖಂಡ ಮಲ್ಲಿಕಾರ್ಜುನ ಚೌಕಾಸಿ ಆಗ್ರಹಿಸಿದರು.

ಮಂಗಳವಾರದಂದು ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟಪ್ರಭದ ನಂ1 ಯೂಟ್ಯೂಬ್ ಚಾನಲ್ ಮಾಲೀಕ ಸೈಯದ್ ಮೇಲೆ ಕ್ರಮಕೈಗೊಳ್ಳಲು ವಾರ್ತಾ ಇಲಾಖೆಗೂ ಕೂಡಾ ಉಪ್ಪಾರ ಸಮಾಜದ ವತಿಯಿಂದ ಮನವಿ ಸಲ್ಲಿಸಲಾಗುವುದು. ಪೊಲೀಸ ಇಲಾಖೆಗೆ ದೂರು ನೀಡಲಾಗುವುದು. ಆ ಯೂಟ್ಯೂಬ್ ಚಾನಲ್ ಸೈಯದ ಅವರಿಗೆ ಪೋನ್ ಕರೆ ಮಾಡಿದಾಗ ಸಾಹುಕಾರರು ಹೇಳಿದ್ದಾರೆ ಅದಕ್ಕೆ ವಿಷಾದ ವ್ಯಕ್ತಪಡಿಸುತ್ತಿದ್ದೇನೆ ಎನ್ನುವ ಮಾತುಗಳನ್ನಾಡಿದ್ದಾರೆ. ಆದರೆ ಆ ಸಾಹುಕಾರರು ಯಾರು ಎಂದು ಹೇಳಬೇಕು ಎಂದು ಹೇಳಿದರು.

ಸುದ್ದಿ ವಿಸ್ತರಣೆ ಮಾಡುವ ಸಂದರ್ಭದಲ್ಲಿ ಅತಿರಥ, ಮಹಾರಥ, ಭಗೀರಥ ಬಂದರೂ ಇಡೀ ಬೆಳಗಾವಿ ಜಿಲ್ಲೆಯಲ್ಲೇ ಜಾರಕಿಹೊಳಿ ಕುಟುಂಬವನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಒಂದು ವೇಳೆ ಜಾರಕಿಹೊಳಿ ಕುಟುಂಬದ ಸದಸ್ಯರು ಗೆಲ್ಲವೂ ಸಾಧಿಸಿದರೇ ಗಂಗೆಯನ್ನು ಧರಗೆ ಇಳಿಸಿದ ನಮ್ಮ ಸಮಾಜದ ಭಗೀರಥರು ಮಾಡಿರುವ ಸಾಧನೆಯೂ ಸುಳ್ಳು ಎಂಬತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚೆಗೆ ರಾಜಕೀಯ ನಾಯಕರು ಹಾಗೂ ಇಂತಹ ಕೆಲವು ಯೂಟ್ಯೂಬ್ ಚಾನಲ್ ಮಾಲೀಕರು ಅನೇಕ ಮಹಾತ್ಮರ ಹಾಗೂ ಸಮಾಜದ ಗುರುಗಳನ್ನು ಅವಮಾನಿಸುವಂಥ ಘಟನೆಗಳು ಇನ್ನು ಮುಂದೆ ಜರುಗಬಾರದು ಹಾಗೂ ಮೂಡಲಗಿ ತಾಲೂಕಿನ ಉಪ್ಪಾರ ಸಮಾಜದ ಬಾಂಧವರು ಈಗಾಲೇ ಗೋಕಾಕ ತಾಲೂಕಿನ ನಲ್ಲಾನಟ್ಟಿ ಗ್ರಾಮದಲ್ಲಿ ಘಟಪ್ರಭಾದ ನಂ1ಯೂಟ್ಯೂಬ್ ಚಾನಲ್ ವಿರುದ್ದ ಹೋರಾಟ ಮಾಡಲಾಗಿದ್ದು, ಕೂಡಲೇ ಉಪ್ಪಾರ ಸಮಾಜದ ಶ್ರೀಗಳ ಮುಂದೆ ಕ್ಷಮೆ ಕೇಳದಿದ್ದರೇ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಉಪ್ಪಾರ ಸಮಾಜದ ಮುಖಂಡರಾದ ಅಡಿವೆಪ್ಪ ಬಿಲಕುಂದಿ, ಗುರುನಾಥ ಗಂಗನ್ನವರ, ಹಣಮಂತ ಕಂಕಣವಾಡಿ ಇದ್ದರು.

- Advertisement -
- Advertisement -

Latest News

ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದಗೆ ೭೬.೦೭ ಲಕ್ಷ ರೂ ಲಾಭ

ಮೂಡಲಗಿ: ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ೨೦೨೩ರ ಮಾರ್ಚ ಅಂತ್ಯಕ್ಕೆ ರೂ.೭೬.೦೭ ಲಕ್ಷ ಲಾಭವನ್ನು ಗಳಿಸಿ ಪ್ರಗತಿಯಲ್ಲಿ  ಸಾಗುತ್ತಿದೆ ಎಂದು ಸಹಕಾರಿಯ ಅಧ್ಯಕ್ಷೆ...
- Advertisement -

More Articles Like This

- Advertisement -
close
error: Content is protected !!