ಆಲಮೇಲ ಪ.ಪಂ ಚುನಾವಣೆಗೆ ಸಜ್ಜು; ಕಾಂಗ್ರೆಸ್ ಬಿಜೆಪಿ ನೇರ ಹಣಾಹಣಿ

Must Read

ಸಿಂದಗಿ: ನೂತನ ತಾಲೂಕು ಆಲಮೇಲ ಗ್ರಾಮ ಪಂಚಾಯಿತಿಯು ಪಟ್ಟಣ ಪಂಚಾಯಿತಿ ಮೇಲ್ದರ್ಜೆಗೇರಿ 2016 ಏಪ್ರೀಲ್ 24 ರಂದು ಮೊದಲ ಚುನಾವಣೆ ನಡೆದಿತ್ತು ಪ್ರಥಮ ಅವಧಿಗೆ ಪ,ಪಂನಲ್ಲಿ ಒಟ್ಟು 19 ಜನ ಸದಸ್ಯರ ಸಂಖ್ಯಾಬಲ ಹೊಂದಿ ಅದರಲ್ಲಿ ಬಿಜೆಪಿ 10, ಕಾಂಗ್ರೆಸ್ 7 ಹಾಗೂ ಪಕ್ಷೇತರ 2 ಸ್ಥಾನಗಳಲ್ಲಿ ಜಯ ಗಳಿಸಿ ಬಿಜೆಪಿ ಅಧಿಕಾರ ನಡೆಸಿತ್ತು. ಒಟ್ಟು 14116 ಜನ ಮತದಾರರು 19 ಜನರ ಆಯ್ಕೆ ಮಾಡಲಿದ್ದಾರೆ ಮತ್ತು ಕಳೆದ ಉಪ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ್ದರಿಂದ ಮತದಾರರ ಪ್ರಭುಗಳು ಹೆಚ್ಚು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಾರೋ ಅಥವಾ ಕಾಂಗ್ರೆಸ್ 7ರಿಂದ ಹೆಚ್ಚಿನ ಅಭ್ಯರ್ಥಿಗಳು ಗೆದ್ದು ಗದ್ದುಗೆ ಹಿಡಿಯುತ್ತಾರೋ ಎಂಬುದು ಮತದಾರರ ಪ್ರಭುಗಳ ಕೈಯಲ್ಲಿದೆ.

ಕಳೆದ ಚುನಾವಣೆಯಲ್ಲಿ ಜೆಡಿಎಸ್ ಶಾಸಕರಿದ್ದರೂ ಸಹ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಅಷ್ಟೊಂದು ನೇರವಾದ ಪೈಪೋಟಿ ಇರಲಿಲ್ಲ ಆದರೆ ಈಗ ಬಿಜೆಪಿ ಸರಕಾರ ಹಾಗೂ ಬಿಜೆಪಿ ಶಾಸಕರಿರುವುದರಿಂದ ಬಿಜೆಪಿ 17 ಹಾಗೂ ಕಾಂಗ್ರೆಸ್ 17 ಜನರಿಗೆ ಟಿಕೇಟ್ ನೀಡಿದ್ದು ಎರಡು ಕಡೆ ತುರುಸಿನ ಚುನಾವಣೆ ಎದುರಾಗುವ ಸಂಭವ ಎದ್ದು ಕಾಣುತ್ತಿದೆ ಅಲ್ಲದೆ ಎರಡು ವಾರ್ಡುಗಳಲ್ಲಿ ಬಿಜೆಪಿ ಅಭ್ಯರ್ಥಿ ಕಣಕ್ಕಿಳಿಸಿಲ್ಲ ಅಲ್ಲಿ ಪಕ್ಷೇತರ ಅಭ್ಯರ್ಥಿಗಳ ಒಲವು ಹೆಚ್ಚಿದೆ ಹಾಗಾಗಿ ಈ ಬಾರಿ 17 ಕಡೆ ಎರಡು ಪಕ್ಷದಿಂದ ನೇರವಾದ ಸ್ಪರ್ಧೆ ಏರ್ಪಟ್ಟಂತಾಗಿದೆ.

ಈ ಬಾರಿ ಒಟ್ಟು 59 ಜನ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದು ಇದರಲ್ಲಿ 19 ಜನರು ಆಯ್ಕೆಯಾಗಬೇಕು, ಮತದಾರರು 7128 ಪುರುಷರು, 6984 ಮಹಿಳೆಯರು 2 ಇತರೆ ಸೇರಿದಂತೆ 14116 ಜನರು ಮತದಾರು ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ, 19 ವಾರ್ಡಗಳಿಗೆ ಒಟ್ಟು 20 ಬೂತಗಳನ್ನು ಮಾಡಲಾಗಿದ್ದು ಪ್ರತಿ ಬೂತನಲ್ಲಿ 4 ಜನ ಚುನಾವಣಾ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಅಗತ್ಯಕ್ಕೆ ತಕ್ಕಂತೆ ಪೋಲಿಸ್ ನಿಯೋಜನೆ ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎರಡು ದಿನದಿಂದ ಸಿಂದಗಿ ಶಾಸಕ ರಮೇಶ ಭೂಸನೂರ ಹಾಗೂ ಕಾಂಗ್ರೆಸ್ ಮುಖಂಡ ಅಶೊಕ ಮನಗೂಳಿ ಆಲಮೇಲ ಪಟ್ಟಣದಲ್ಲಿಯೇ ಬೀಡು ಬಿಟ್ಟಿದ್ದು ತಮ್ಮ ಅಭ್ಯರ್ಥಿಗಳ ಗೆಲುವಿಗೆ ವಿವಿಧ ತಂತ್ರಗಳನ್ನು ಹಣೆಯುತ್ತಿದ್ದಾರೆ ಆದರೆ ಮತದಾರ ಪ್ರಭು ಮಾತ್ರ ಯಾರಿಗೆ ಒಲಿಯುತ್ತಾನೆ ಎಂಬುದನ್ನು ಕಾದು ನೋಡಬೇಕು.


ವರದಿ: ಪಂಡಿತ್ ಯಂಪೂರೆ, ಸಿಂದಗಿ

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group