spot_img
spot_img

ಗೋವಾ ಪೊಲೀಸರ ಕಿರುಕುಳ ; ಮೂವರ ಆತ್ಮಹತ್ಯೆ ತಳವಾರ ಸಮಾಜದಿಂದ ಪ್ರತಿಭಟನೆ

Must Read

- Advertisement -

ಸಿಂದಗಿ; ಗೋವಾ ರಾಜ್ಯದ ಪೊಲೀಸರ ಕಿರುಕುಳದಿಂದ ಮುದ್ದೇಬಿಹಾಳ ತಾಲೂಕಿನ ಸುಲ್ತಾನಪುರದ ಹುಲಗೇಪ್ಪ ಅಂಬಿಗೇರ, ಪತ್ನಿ ದೇವಮ್ಮ ಹಾಗೂ ಆತನ ಸಹೋದರ ಗಂಗಪ್ಪ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ತಮ್ಮ ಸಾವಿಗೆ ಗೋವಾದ ಪೊಲೀಸರ ಕಿರುಕುಳ ಕಾರಣವೆಂದು ಡೆತ್ ನೋಟನಲ್ಲಿ ಬರೆದಿಟ್ಟಿದ್ದಾರೆ ಈ ಘಟನೆಯನ್ನು ಜಿಲ್ಲಾ ವಿಜಯಪುರ ತಳವಾರ ಪರಿವಾರ ಹಿತರಕ್ಷಣಾ ಸಮಿತಿಯಿಂದ ತಹಶೀಲ್ದಾರ ಕಛೇರಿಯ ಮುಂದೆ ಪ್ರತಿಭಟನೆ ನಡೆಸಿದರು.

ನಂತರ ತಹಶೀಲ್ದಾರ ಗ್ರೇಡ್ 2 ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

ತಳವಾರ ಸಮುದಾಯದ ಯುವ ಘಟಕದ ರಾಜ್ಯಾಧ್ಯಕ್ಷ ಶಿವಾಜಿ ಮೇಟಗಾರ ಮಾತನಾಡಿ, ಗೋವಾ ರಾಜ್ಯದಲ್ಲಿ ಕರ್ನಾಟಕ ಜನರಿಂದಲೇ ಸಾರ್ವಭೌಮ ಆದರಿಂದ ಅಲ್ಲಿನ ಎಲ್ಲ ಬದುಕು ಸಾಗಿಸಲು ಅನುಕೂಲವಾಗಿದೆ ಅಲ್ಲದೆ ಕೂಲಿ ಕೆಲಸ ಅರಸಿ ಹೋದ ಮುದ್ದೇಬಿಹಾಳ ತಾಲೂಕಿನ ಸುಲ್ತಾನಪುರದ ಹುಲಗೇಪ್ಪ ಅಂಬಿಗೇರ, ಪತ್ನಿ ದೇವಮ್ಮ ಹಾಗೂ ಆತನ ಸಹೋದರ ಗಂಗಪ್ಪ ಅವರು ತಮ್ಮ ಸಾವಿಗೆ ಗೋವಾದ ಪೊಲೀಸರ ಕಿರುಕುಳ ಕಾರಣವೆಂದು ಡೆತ್ ನೋಟನಲ್ಲಿ ಬರೆದಿಟ್ಟು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಇದನ್ನು ತಳವರ ಸಮೂದಾಯ ಉಗ್ರವಾಗಿ ಖಂಡಿಸುತ್ತೇವೆ ಆ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ರೂ 25 ಲಕ್ಷ ಪರಿಹಾರ ಒದಗಿಸಿಕೊಡಬೇಕು. ಅಲ್ಲದೆ ಆ ಕುಟುಂಬಕ್ಕೆ ವಿಶೇಷ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

- Advertisement -

ಬಿಎಸ್‍ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ದಸ್ತಗೀರ ಮುಲ್ಲಾ ಮಾತನಾಡಿ, ಕೂಲಿ ಕೆಲಸ ಮಾಡಿಕೊಂಡಿದ್ದ ಬಡಕುಟುಂಬದ ಸಾವಿಗೆ ಗೋವಾ ಪೊಲೀಸರು ಕಾರಣರಾಗಿದ್ದಾರೆ. ನಿಜವಾದ ಕಳ್ಳರನ್ನು ಹಿಡಿಯುವ ಬದಲು ದುಡಿಯಲು ಹೋದ ಕುಟುಂಬಕ್ಕೆ ಕಿರುಕುಳ ನೀಡಿದ್ದಾರೆ. ಅವರ ಸಾವಿಗೆ ನ್ಯಾಯ ಸಿಗಬೇಕು ಈ ಘಟನೆಯ ವಿರುದ್ದದ ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳು ಕೂಲಂಕುಶವಾಗಿ ಪರಿಶೀಲಿಸಿ ತಪ್ಪಿತಸ್ಥ ಪೊಲೀಸರನ್ನು ಶಿಕ್ಷೆಗೆ ಗುರಿಪಡಿಸಬೇಕು ಅಲ್ಲದೆ ಆ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಡಾ.ರಾಜಶೇಖರ ನರಗೋಧಿ,ಸಿಂದಗಿ ತಾಲ್ಲೂಕಿನ ತಳವಾರ ಸಮಾಜದ ಯುವ ಅಧ್ಯಕ್ಷರಾದ ಮಡಿವಾಳ.ನಾಯ್ಕೋಡಿ,ವಿಜಯಪುರ ಜಿಲ್ಲಾ ತಳವಾರ ಪರಿವಾರ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಅಲೋಕ ರೋಡಗಿ, ಭಾಗಣ್ಣ ಕೆಂಭಾವಿ, ರಾವುತ ಕನ್ನೊಳ್ಳಿ, ಪ್ರಶಾಂತ ಕದ್ದರಕಿ, ದಾವುಲ ಬಳಗಾನೂರ,ಭರತ ಜೇರಟಗಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ವರದಿ: ಪಂಡಿತ್ ಯಂಪೂರೆ, ಸಿಂದಗಿ

- Advertisement -

.

- Advertisement -
- Advertisement -

Latest News

ಉಚಿತ ಕಣ್ಣು ತಪಾಸನೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರ

ಸಿಂದಗಿ; ಪೂಜ್ಯ ಶ್ರೀ ಚೆನ್ನವೀರಸ್ವಾಮೀಜಿ ಪ್ರತಿಷ್ಠಾನ, ಸಿಂದಗಿ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ವಿಜಯಪುರ ಹಾಗೂ ಅನುಗ್ರಹ ವಿಜನ್ ಫೌಂಡೇಶನ್ ಟ್ರಸ್ಟ್, ವಿಜಯಪುರ, ಜಿ.ಪಿ. ಪೋರವಾಲ...
- Advertisement -

More Articles Like This

- Advertisement -
close
error: Content is protected !!
Join WhatsApp Group