Homeಸುದ್ದಿಗಳುಹಾಡೇ ಹಗಲು ಯುವಕನ ಭೀಕರ ಕೊಲೆ

ಹಾಡೇ ಹಗಲು ಯುವಕನ ಭೀಕರ ಕೊಲೆ

ಬೀದರ – ಹುಡುಗಿ ಪ್ರೀತಿಸುವ ವಿಚಾರಕ್ಕೆ ಹುಡುಗಿಯ ಅಣ್ಣನು ಯುವಕನಿಗೆ ಚಾಕುವಿನಿಂದ ಇರಿದು ಭೀಕರ ಹತ್ಯೆ ಮಾಡಿದ ಘಟನೆ ಬೀದರ್ ನಗರದ ಸಿಂಗಾರ್ ಬಾಗ್ ನಲ್ಲಿ ನಡೆದಿದೆ.

20 ವರ್ಷದ ಅಮೀರ್ ಖಾನ್ ಎಂಬ ಯುವಕನನ್ನು ಹುಡುಗಿಯ ಅಣ್ಣ ಜೀಷಾನ್ ಚಾಕುವಿನ ಇರಿದು ಕೊಲೆ ಮಾಡಿದ್ದಾನೆ. ಚಾಕುವಿನಿಂದ ಇರಿದು ಯುವಕನನ್ನು ಕೊಲೆ ಮಾಡುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದ್ದು ಸಿಸಿಟಿವಿ ವಿಡಿಯೋ ಟೈಮ್ಸ್ ಆಫ್ ಕರ್ನಾಟಕಕ್ಕೆ ಲಭ್ಯವಾಗಿದೆ.

ಈಗಾಗಲೇ ಹುಡುಗಿಯ ಮದುವೆಯಾಗಿದ್ದರೂ ಪ್ರೀತಿ ಮಾಡುವಂತೆ ಈ ಯುವಕ ಪದೇ ಪದೇ ಪೀಡಿಸುತ್ತಿದ್ದ ಇದರಿಂದ ರೋಸಿ ಹೋದ ಹುಡುಗಿಯ ಅಣ್ಣ ಜೀಷಾನ್ ಚಾಕುವಿಂದ ಯುವಕನ ಶರೀರದ ಮೇಲೆ ಹಲವು ಬಾರಿ ಇರಿದು ಕೊಲೆ ಮಾಡಿದ್ದಾನೆ.

ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕೊಲೆ ಮಾಡಿದ ಆರೋಪಿಗಾಗಿ ಬಲೆ ಬೀಸಿದ್ದಾರೆ.


ವರದಿ: ನಂದಕುಮಾರ ಕರಂಜೆ, ಬೀದರ

RELATED ARTICLES

Most Popular

error: Content is protected !!
Join WhatsApp Group