ಸರ್ವಧರ್ಮದ ಕೊಂಡಿ ಕಳಚಿದಂತಾಗಿದೆ – ಕೂಚಬಾಳ

Must Read

ಸಿಂದಗಿ: ಪದ್ಮಶ್ರೀ ಪುರಷ್ಕೃತರು ಹಾಗೂ ಸರ್ವಧರ್ಮ ಸಮನ್ವಯದ ಪ್ರವಚನಕಾರ ಮುಧೋಳ ತಾಲ್ಲೂಕು ಮಹಾಲಿಂಗಪುರದ ಇಬ್ರಾಹಿಮ್ ಸುತಾರ ಅವರು ಶನಿವಾರ ಮುಂಜಾನೆ ತೀವ್ರ ಸ್ವರೂಪದ ಹೃದಯಾಘಾತದಿಂದ ನಿಧನರಾಗಿರುವದು ಸರ್ವಧರ್ಮದ ಕೊಂಡಿ ಕಳಚಿದಂತಾಗಿದೆ ಎಂದು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷ ರಾಜಶೇಖರ ಕೂಚಬಾಳ ಹೇಳಿದರು.

ತಾಲೂಕಿನ ಬಂದಾಳ ಗ್ರಾಮದ ಶ್ರೀ ಬಸವೇಶ್ವರ ಸರ್ಕಲ ಹತ್ತಿರದಲ್ಲಿ ಗ್ರಾಮಸ್ಥರು ಹಮ್ಮಿಕೊಂಡ ಪದ್ಮಶ್ರೀ ಪುರಸ್ಕೃತರು, ಸರ್ವಧರ್ಮ ಸಮನ್ವಯದ ಪ್ರವಚನಕಾರ ಇಬ್ರಾಹಿಮ್ ಸುತಾರ ಅವರ ಭಾವಪೂರ್ಣ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿ, ಕೆಲ ವರ್ಷಗಳ ಹಿಂದೆ ಬಂದಾಳ ಗ್ರಾಮದಲ್ಲಿ ಬನ್ನಿ ಮಂಟಪದಲ್ಲಿ ಇಬ್ರಾಹಿಮ್ ಸುತಾರ ಸಾಹೇಬರು ಬಂದು ಪ್ರವಚನ ಮಾಡಿ ಸಾಮರಸ್ಯ ಮೂಡಿಸಿ ಜನಮನಗಳಿಸಿದ್ದರು ಎಂದರು.

ಶಿಕ್ಷಕ ಸಾಹಿತಿ ಬಸವರಾಜ ಅಗಸರ ಮಾತನಾಡಿ ಪದ್ಮಶ್ರೀ ಪುರಸ್ಕೃತರು, ಸರ್ವಧರ್ಮ ಸಮನ್ವಯದ ಪ್ರವಚನಕಾರ ಮುಧೋಳ ತಾಲ್ಲೂಕು ಮಹಾಲಿಂಗಪುರದ ಇಬ್ರಾಹಿಮ್ ಸುತಾರ ಅವರಿಗೆ 2018ರ ಪದ್ಮಶ್ರೀ ಪ್ರಶಸ್ತಿಯನ್ನು ಹಾಗೂ ಭಾವೈಕ್ಯ ಜನಪದ ಸಂಗೀತ ಮೇಳ ವನ್ನು ಸ್ಥಾಪಿಸಿದರು. ಕಳೆದ 44 ವರ್ಷಗಳಿಂದ ನಾಡಿನಾದ್ಯಂತ ಸಾಹಿತ್ಯ ವಾಚನ, ಪ್ರವಚನ, ಭಜನೆ ಮತ್ತು ಸಮಾಜ ಸೇವೆಯ ಮುಖಾಂತರ ಸರ್ವಮಹಾತ್ಮರ ಸಾಹಿತ್ಯವನ್ನು ಬಳಸಿ ಭಾವೈಕ್ಯತೆ ಸಂದೇಶವನ್ನು ಬೀರುತ್ತ ಬಂದಿರುತ್ತಾರೆ. ಪ್ರತಿವರ್ಷ ನೂರಾರು ಕಾರ್ಯ ಕ್ರಮಗಳನ್ನು ನೀಡುತ್ತ, ಹಿಂದು-ಮುಸ್ಲಿಂ ರಲ್ಲಿ ಭಾವೈಕ್ಯತೆ ಬೆಸೆಯುವ ಪವಿತ್ರ ಕಾಯಕದಲ್ಲಿ ತೊಡಗಿಸಿಕೊಂಡಿದರು ಅವರ ಪ್ರವಚನ ನಾಡಿನ ಮಂದಿರಗಳಲ್ಲಿ ಧ್ವನಿವರ್ಧಕ ಮುಖಾಂತರ ಅವರ ಪ್ರವಚನ ಆಲಿಸುತ್ತಾರೆ ಅವರ ಅಗಲಿಕೆ ಕನ್ನಡ ನಾಡಿಗೆ ನಷ್ಟವಾಗಿದೆ ಎಂದು ನುಡಿನಮನ ಸಲ್ಲಿಸಿದರು.

ಕಸಾಪ ಗೌರವ ಕಾರ್ಯದರ್ಶಿ ಖಾದರ ವಾಲಿಕಾರ. ಶಿವು ಬಡಾನೂರ. ಎನ್ ಎಂ ಚಪ್ಪರಬಂದ. ಮುಖ್ಯಗುರು ಎನ್ ಕೆ ಚೌಧರಿ. ಚಂದ್ರಶೇಖರ ಬುಯ್ಯಾರ, ರೈತ ಸಂಘದ ಅಧ್ಯಕ್ಷ ಚಂದ್ರಗೌಡ ಪಾಟೀಲ. ಶಾಂತು ರಾಣಗೋಳ. ಕುಡ್ಲಪ್ಪ ಹೆರಕಲ್ಲ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group