Homeಸುದ್ದಿಗಳುಆಡಳಿತದಲ್ಲಿ ಅಧಿಕಾರಿಗಳ ಪಾತ್ರ ಬಹಳ ಮಹತ್ವವಿದೆ

ಆಡಳಿತದಲ್ಲಿ ಅಧಿಕಾರಿಗಳ ಪಾತ್ರ ಬಹಳ ಮಹತ್ವವಿದೆ

ಧಾರವಾಡ: ಆಡಳಿತದಲ್ಲಿ ಅಧಿಕಾರಿಗಳ ಪಾತ್ರ ಬಹಳ ಮಹತ್ವವನ್ನು ಪಡೆದಿದೆ ಎಂದು ಬೆಳಗಾವಿಯ ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಶ್ರೀನಿವಾಸ ಶಾಸ್ತ್ರೀ ಅಭಿಪ್ರಾಯಪಟ್ಟರು.

ಅವರು ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ ಪುರಾತತ್ತ್ವ ಇಲಾಖೆಯ ಧಾರವಾಡ ವಲಯದ ನಿರ್ದೇಶಕರಾಗಿ  ಬಡ್ತಿ ಹೊಂದಿದ ಡಾ.ವಿ.ಎಸ್.ಬಡಿಗೇರ ಮತ್ತು ಸಹಾಯಕ ಪುರಾತತ್ವ ಅಧಿಕ್ಷಕ ಡಾ.ದೇವರಾಜ್ ಸನ್ಮಾನಿಸಿ‌ ಮಾತಾನಾಡಿದರು.

ಧಾರವಾಡ ವಲಯದ ಪುರಾತತ್ವ ಹಲವಾರು ರೀತಿಯ ಸೃಜನಾತ್ಮಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ಬಡ್ತಿ ಹೊಂದಿದ ಅಧಿಕಾರಿಗಳ ಜವಾಬ್ದಾರಿ ಬಹಳ ಇದೆ ಎಂದರು‌.

ಈ ಸಂದರ್ಭದಲ್ಲಿ  ಧಾರವಾಡ ಪುರಾತತ್ವ ಇಲಾಖಾ ವಲಯದ ಸಿಬ್ಬಂದಿ, ಇತರ ಇಲಾಖೆಯ ಸಿಬ್ಬಂದಿ ಇದ್ದರು.

RELATED ARTICLES

Most Popular

error: Content is protected !!
Join WhatsApp Group