ಸಾಮಾಜಿಕ ಕಳಕಳಿಯ ಸಂತ ಕನಕದಾಸರು

0
670
ತಾಲೂಕಿನ ಬೋರಗಿ ಗ್ರಾಮದಲ್ಲಿ  ಕಾಲಜ್ಞಾನಿ ಕನಕದಾಸರ 534 ನೇ ಜಯಂತಿಯಲ್ಲಿ ಪೂಜೆ ಸಲ್ಲಿಸಲಾಯಿತು.

ಸಿಂದಗಿ: ಈ ಕಲುಷಿತ ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಜಾತಿ ವ್ಯವಸ್ಥೆಯ ವಿರುದ್ದ ದೇಶದೆಲ್ಲೆಡೆ ಸುತ್ತಿ ತಮ್ಮ ಕೀರ್ತನೆಗಳ ಮೂಲಕ ಸಮರ ಸಾರಿದ ಸಾಮಾಜಿಕ ಕಳಕಳಿವುಳ್ಳ ಸಂತರು ಕನಕದಾಸರು ಎಂದು ಆರಕ್ಷಕ ಮೌಲಾಲಿ ಆಲಗೂರ ಹೇಳಿದರು.

ತಾಲೂಕಿನ ಬೋರಗಿ ಗ್ರಾಮದಲ್ಲಿ  ಕಾಲಜ್ಞಾನಿ ಕನಕದಾಸರ 534 ನೇ ಜಯಂತಿಯ ಪ್ರಯುಕ್ತ ಭಾಗವಹಿಸಿ ಮಾತನಾಡಿ, 16 ನೇ ಶತಮಾನದಲ್ಲಿಯೇ ಕುಲ ಕುಲ ಎಂದು ಬಡಿದಾಡದಿರಿ ನಿಮ್ಮ ಕುಲದ ನೆಲೆಯ ಬಲ್ಲಿರಾ ಎಂದು ಕನಕದಾಸರು ಸಾರಿದ್ದಾರೆ. ಆದರೆ ನಾವು ಇಂದಿಗೂ ಕುಲದ ನೆಲೆಯಲ್ಲಿಯೇ ಜೀವಿಸುತ್ತಿರುವುದು ಅತ್ಯಂತ ನೋವಿನ ಸಂಗತಿ. ಜಾತಿಯ ವ್ಯವಸ್ಥೆ ಹಾಳಾಗಿದ್ದು ಅನಕ್ಷರಸ್ಥ ಜನರಿಂದ ಅಲ್ಲ, ಇಂದಿನ ಅತಿ ಪ್ರಜ್ಞಾವಂತ ಮತ್ತು ಬುದ್ಧಿಜೀವಿಗಳಿಂದ ಕಲುಷಿತಗೊಂಡು ಹಾಳಾಗುತ್ತಿದೆ. ಸಂತ ಕನಕದಾಸರ ತತ್ವ ಆದರ್ಶಗಳು ಬದುಕಿನುದ್ದಕ್ಕೂ ಅಳವಡಿಕೊಂಡು ಸಾಗಿದರೆ ಮಾತ್ರ ಚೆನ್ನಾಗಿ ಬದುಕಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಅಬಕಾರಿ ಇಲಾಖೆಯ ಮಹಾಂತೇಶ ಮೂಲಿಮನಿ, ಯುವ ಮುಖಂಡ ವಿಶ್ವನಾಥ ಕೋಟಾರಗಸ್ತಿ, ಉದ್ಯಮಿ ಎಮ್ ಆರ್.ಕೋಳಾರಿ ವೈದ್ಯ ಸದಾನಂದ ನಾಲವಾರ, ಚಿದಾನಂದ ಹರಿಜನ, ಸಂಗಮೇಶ ಹೊಸಮನಿ, ಚಂದಾಸಾಬ ಆಲಗೂರ, ಲಾಳೇಪಟೇಲ್ ದೊಡಮನಿ, ಭಾಗೇಶ ಕೋಳೂರ, ಕಲ್ಲಾಲಿಂಗ ಕೊಟಾರಗಸ್ತಿ ಸೇರಿದಂತೆ ಕನಕದಾಸರ ಭಕ್ತರು ಮತ್ತು ಅಭಿಮಾನಿಗಳು ಭಾಗವಹಿಸಿದ್ದರು.