spot_img
spot_img

ಮಾಧ್ಯಮದ ವರದಿಗೆ ಬೆಲೆ ಕೊಡದ ತಾಲೂಕು, ಜಿಲ್ಲಾಡಳಿತ

Must Read

- Advertisement -

ಅವರಾದಿ ಪಂಚಾಯಿತಿಯ ಅವ್ಯವಹಾರ ಸರಿಹೋಗುವುದೆಂದು ? 

ಮೂಡಲಗಿ: ಮೂಡಲಗಿ ತಾಲೂಕಿನ ಅವರಾದಿ ಗ್ರಾಮ ಪಂಚಾಯಿತಿಯಲ್ಲಿ ಹೆಜ್ಜೆ ಹೆಜ್ಜೆಗೂ ಅವ್ಯವಹಾರಗಳು ನಡೆದಿವೆ ಈ ಬಗ್ಗೆ ಮೇಲಿಂದ ಮೇಲೆ ಪತ್ರಿಕೆಗಳಲ್ಲಿ ವರದಿ ಬರೆದು ನೇರವಾಗಿ ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಜಿ ಪಂ ಸಿಇಓ ಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಇಡೀ ವ್ಯವಸ್ಥೆ ಎಷ್ಟೊಂದು ಭ್ರಷ್ಟವಾಗಿದೆ ಎಂಬುದು ತಿಳಿಯುತ್ತದೆ ಎಂದು ವರದಿಗಾರ ಕುಶಪ್ಪ ಗಗ್ಗರಿ ವಿಷಾದ ವ್ಯಕ್ತಪಡಿಸಿದ್ದಾರೆ.

Times of ಕರ್ನಾಟಕ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಅವರಾದಿ ಗ್ರಾಮ ಪಂಚಾಯಿತಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ೨೦೧೯ ರಲ್ಲಿ ಮಹಾಪೂರಕ್ಕೆ ಬಲಿಯಾದವರಿಗೆ ಮನೆ ಕೊಡುವಾಗ ಹಣ ಇದ್ದವರಿಗೆ ಕೊಟ್ಟಿದ್ದಾರೆ. ಮನೆ ಕಳೆದುಕೊಂಡವರು ಬೀದಿಗೆ ಬಂದಿದ್ದಾರೆ. ಇದರಲ್ಲಿ ಪಂಚಾಯಿತಿ ಪಿಡಿಓ ಸಂಜೀವ ನಂದಗಾಂವ ಈತನ ಕೈವಾಡ ಇದೆಯೆಂಬುದಾಗಿ ನೇರವಾಗಿ ಆರೋಪ ಮಾಡಿದ್ದರೂ ಬೆಳಗಾವಿ ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತಿಲ್ಲ ಎಂದರು.

- Advertisement -

ಅವರಾದಿ ಗ್ರಾಮ ಪಂಚಾಯಿಯು ಇದ್ದೂ ಇಲ್ಲದಂತಿದ್ದು, ಗ್ರಾಮದ ಅಭಿವೃದ್ಧಿ ಗೆ ಬರುವ ಎನ್ ಆರ್ ಇ ಜಿಎ ಯೋಜನೆ, ನರೇಗಾ ಯೋಜನೆ, ಹೆಣ್ಮಕ್ಕಳಿಗೆ ಹೊಲಿಗೆ ತರಬೇತಿ, ಕಂಪ್ಯೂಟರ್ ತರಬೇತಿಯಂಥ ಯಾವುದೇ ಯೋಜನೆಗಳನ್ನು ಜಾರಿಯಲ್ಲಿ ತರುತ್ತಿಲ್ಲ. ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಹೇಳಿದಾಗ ಮಾತ್ರ ಜಾರಿಯಲ್ಲಿ ತರುತ್ತಾರೆ. ಇಂಥ ಪಂಚಾಯಿತಿ ಗ್ರಾಮಕ್ಕೆ ಯಾಕೆ ಬೇಕು ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಅವರಾದಿ ಗ್ರಾಮ ಪಂಚಾಯಿತಿಯ ಪಿಡಿಓ ಹಾಗೂ ಸದಸ್ಯ ಗಣದ ಕರ್ಮಕಾಂಡಗಳ ಬಗ್ಗೆ ಕುಶಪ್ಪ ಗುಗ್ಗರಿಯವರು ಕರುನಾಡ ಕಲಿ ಎಂಬ ಪತ್ರಿಕೆಯಲ್ಲಿ ಬರೆದಿದ್ದಾರೆ, ಯೂಟ್ಯೂಬ್ ನಲ್ಲಿ ಹಂಚಿಕೊಂಡಿದ್ದಾರೆ, ನೇರವಾಗಿ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಓ ಅವರಿಗೆ ದೂರು ಸಲ್ಲಿಸಿದ್ದಾರೆ ಆದರೂ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರಾಗಲಿ, ಸಿಇಓ ರಾಹುಲ್ ಶಿಂಧೆಯವರಾಗಲಿ ಅವರಾದಿ ಗ್ರಾ ಪಂ ಪಿಡಿಓ ಸಂಜೀವ ನಂದಗಾಂವ ಮೇಲೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕನಿಷ್ಠ ಪಕ್ಷ ವಿಚಾರಣೆಯನ್ನು ಕೂಡ ಹಮ್ಮಿಕೊಂಡಿಲ್ಲ. ಆದರೂ ತಮ್ಮ ಹೋರಾಟದಿಂದ ತಾವು ಹಿಂದೆ ಸರಿಯುವುದಿಲ್ಲ. ಇದೇ ರೀತಿ ಅವರಾದಿ ಗ್ರಾಮಸ್ಥರಿಗೆ ನ್ಯಾಯ ಸಿಗುವವರೆಗೂ ತಾವು ಅವರಾದಿ ಕರ್ಮಕಾಂಡಗಳ ಬಗ್ಗೆ ಪತ್ರಿಕೆಯಲ್ಲಿ ಬರೆಯುತ್ತಲೇ ಇರುವುದಾಗಿ ಹೇಳಿಕೊಂಡಿದ್ದಾರೆ.

- Advertisement -

ಒಂದು ಗ್ರಾಮದ ಅಭಿವೃದ್ಧಿ ಗಾಗಿ ಬಂದ ಅನುದಾನವನ್ನು ಭ್ರಷ್ಟ ಅಧಿಕಾರಿಗಳು ನುಂಗಿಹಾಕಿದರೆ ಜನರ ಕಲ್ಯಾಣ ಹೇಗೆ ಆಗಬೇಕು ? ಸರ್ಕಾರಗಳು ಜನರ ಅಭಿವೃದ್ಧಿ ಗಾಗಿ ಕೋಟ್ಯಂತರ ಪ್ರಮಾಣದಲ್ಲಿ ಹಣ ಬಿಡುಗಡೆ ಮಾಡುತ್ತವೆ. ಆದರೆ ಸ್ಥಳೀಯ ಪಂಚಾಯಿತಿಯ ಭ್ರಷ್ಟ ಅಧಿಕಾರಿಗಳು ಅದನ್ನೆಲ್ಲ ನುಂಗಿ ಹಾಕಿದರೆ ಗ್ರಾಮದ ಅಭಿವೃದ್ಧಿ ಹೇಗೆ ಸಾಧ್ಯ ಎಂಬುದು ಒಂದು ಪ್ರಶ್ನೆ.

ಇಂಥದರ ಬಗ್ಗೆ ಯಾರಾದರೂ ದೂರು ಸಲ್ಲಿಸಿದಾಗ ಶಾಸಕರು, ಜಿಲ್ಲಾಡಳಿತ ತನಿಖೆ ಕೈಗೊಂಡು ಜನರಿಗೆ ನ್ಯಾಯ ಸಲ್ಲಿಸಬೇಕು. ಆದರೆ ಅವರಾದಿ ಪಂಚಾಯಿತಿಯ ವಿಷಯದಲ್ಲಿ ಶಾಸಕರೂ ಕೂಡ ಮೌನ, ಜಿಲ್ಲಾಡಳಿತ ಕೂಡ ನಿಷ್ಕ್ರಿಯವಾಗಿದೆಯೆಂಬುದಾಗಿ ವರದಿಗಾರ ಕುಶಪ್ಪ ಆರೋಪಿಸಿದ್ದಾರೆ. ತಮ್ಮ ಹೋರಾಟ ಹೀಗೆಯೇ ಮುಂದುವರೆಸುವುದಾಗಿಯೂ ಅವರು ಹೇಳಿದ್ದಾರೆ. ಅವರ ಈ ಎಚ್ಚರಿಕೆ ಜಿಲ್ಲಾಡಳಿತವನ್ನು ಬಡಿದೆಚ್ಚರಿಸುವುದೇ ಎಂಬುದನ್ನು ಕಾದು ನೋಡಬೇಕು.


ಉಮೇಶ ಬೆಳಕೂಡ, ಮೂಡಲಗಿ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group