spot_img
spot_img

ಮಾನವೀಯತೆ ಮೌಲ್ಯ ಶ್ರೇಷ್ಠವಾದದ್ದು – ಭೂಸನೂರ

Must Read

- Advertisement -

ಸಿಂದಗಿ – ಬದುಕೆಂಬ ಪಯಣದಲಿ ಧರ್ಮಕಾರ್ಯ ಮಾಡುವ ಮಾನವೀಯತೆ ಮೌಲ್ಯ ಶ್ರೇಷ್ಠ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.

ಮೋರಟಗಿ ಶ್ರೀ ವೀರಭಧ್ರೇಶ್ವರ ಜಾತ್ರಾ ಅಂಗವಾಗಿ ಹಮ್ಮಿಕೊಂಡ ತಿಂಥಣಿ ಮೌನೇಶ್ವರ ಮಹಾ ಪುರಾಣ ಕಾರ್ಯಕ್ರಮದ ಘನ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪುರಾಣ ಪುಣ್ಯ ಕತೆ ಹಿರಿಯರು ಕಿರಿಯರಿಗೆ ಕೊಡುವ ಬಳುವಳಿ ನಮ್ಮ ಹಿರಿಯರು ಹಾಕಿದ ಸಂಪ್ರದಾಯ ದೇವರು ಭಯ ಭಕ್ತಿ ನಮ್ಮ ಭವ್ಯ ಭಾರತಕ್ಕೆ ಹೆಸರನ್ನು ತರುವಂಥ ಕೆಲಸ ಹಿರಿಯರು ಮುಂದುವರೆಸಿ ಕೊಂಡು ಕಿರಿಯರಿಗೆ ಮಾರ್ಗ ದರ್ಶನ ಮಾಡುತ್ತಿರುವುದು ಅತೀವ ಸಂತೋಷ. ಶರಣ ಬದುಕು ನಮಗೆ ಆದರ್ಶವಾಗಲು ಅವರ ಬದುಕಿನ ಪಯಣ ದಾರಿ ದೀಪವಾಗಲು ಇಂಥಾ ಕಾರ್ಯಕ್ರಮಗಳು ಅವಶ್ಯ ಎಂದರು.

ಹಿಂದಿನ ಅಧಿಕಾರದಲ್ಲಿ ಮೋರಟಗಿ ಶ್ರೀವೀರಭಧ್ರೇಶ್ವರ ದೇವಸ್ಥಾನದ ನವೀಕರಣಕ್ಕೆ ಸ್ಪಂದಿಸಿದ್ದೆ ಈಗ ಭವ್ಯ ದೇಗುಲವಾಗಿ ಪುಣ್ಯಮಯ ಕಾರ್ಯಕ್ರಮ ಜರುಗುತ್ತಿರುವುದು ಆನಂದ ತರುತ್ತದೆ ಹತ್ತು ದಿನಗಳ ಹಿಂದೆ ಶ್ರೀಸಿದ್ಧರಾಮೇಶ್ವರ ಜಾತ್ರಾ ವೇದಿಕೆಯಲ್ಲಿ ಇರುವಾಗ ಅಲ್ಲಿ ನಾನು ಯಾವುದೆ ಆಶ್ವಾಸನೆ ನೀಡಿಲ್ಲ ಆದರೆ ನನ್ನ ಮನದಲ್ಲಿ ಸಿದ್ಧರಾಮನ ದೇವಸ್ಥಾನಕ್ಕೆ ಸ್ಪಂದಿಸುವ ಸಂಕಲ್ಪ ಮಾಡಿರುವೆ ಮುಂಬರುವ ದಿನಗಳಲ್ಲಿ ಗ್ರಾಮದ ರಸ್ತೆಗಳು ದೇವಸ್ಥಾನಗಳು ಮೂಲ ಸೌಲಭ್ಯದ ಕೊರತೆ ನೀಗಿಸಲು ಮತ ಹಾಕಿದ ಮತದಾರ ಪ್ರಭುಗಳನ್ನು ಮರೆಯದೆ ನನ್ನ ಆತ್ಮ ಸಾಕ್ಷಿಯಾಗಿ ನನ್ನ ಅಧಿಕಾರ ಸಂಪೂರ್ಣ ಅಭಿವೃದ್ಧಿಯತ್ತ ಕೊಂಡು ಒಯ್ಯುವ ದೃಢ ಸಂಕಲ್ಪ ಅಧೀಕಾರದ ಅವಧಿಯಲ್ಲಿ ಹಂತ ಹಂತವಾಗಿ ಕೆಲಸ ಮಾಡುವ ಮೂಲಕ ನಿಮ್ಮ ಪ್ರೀತಿ ವಿಶ್ವಾಸ ಉಳಿಸಿಕೊಳ್ಳುವೆ ಎಂದು ಹೇಳಿದರು.

- Advertisement -

ಶಿವಾನಂದ ಸ್ವಾಮೀಜಿ ದಾಸೋಹ ಮಠ ಸೋನ್ನದ ಪೂಜ್ಯರು ಸಾನ್ನಿಧ್ಯ ವಹಿಸಿದ್ದರು. ಸಿಂದಗಿ ಬಿಜೆಪಿ ಮಂಡಲ ಅಧ್ಯಕ್ಷ ಈರಣ್ಣ ರಾವೂರ, ನಿಂಗನಗೌಡ ಪಾಟೀಲ, ಗುರುಪಾದಪ್ಪ ನೇಲ್ಲಗಿ,ರೇವಣಸಿದ್ದ ಮಸಳಿ, ಪ್ರಕಾಶ ಅಡಗಲ್ಲ, ಡಾ||ರಾಜಶೇಖರ ಪತ್ತಾರ, ಡಾ|| ಆರ್.ಬಿ.ಕುಲಕರ್ಣಿ, ವಿದ್ಯಾಧರ ಮಳಗಿ, ಶ್ರೀಶೈಲ ಅಣಬಸ್ಟಿ, ಶರಣು ಕೊಳಕೂರ ಇತರರು ಇದ್ದರು.

- Advertisement -
- Advertisement -

Latest News

‘Silent killer’ ಎಂದು ಕರೆಯಲ್ಪಡುವ ಒಂದು ಹಾವುಂಟು !

ಈ ಹಾವನ್ನು ಈ ರೀತಿ ಕರೆಯಲು ಹಲವು ಕಾರಣಗಳುಂಟು. ಈ ಹಾವು ರಾತ್ರಿ ವೇಳೆಯಲ್ಲಿಯೇ ಹೆಚ್ಚು ಓಡಾಟ ಮಾಡುವುದು (ನಿಶಾಚರಿ). ಮತ್ತೆ ಈ ಹಾವು ಮನುಷ್ಯರಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group