spot_img
spot_img

ಸರ್ವಜ್ಞ ವಚನ ಸಾರ ; ಮತ್ತಿಷ್ಟು ಒಗಟಿನ‌ ಒಳಮರ್ಮ

Must Read

- Advertisement -

 

ಹಲವು ಮಕ್ಕಳ ತಂದೆ ತಲೆಯಲ್ಲಿ ಜುಟ್ಟವಗೆ
ಸಲೆಗಳಿಗೆ ಜಾವವರಿವವನ ಹೆಂಡತಿಗೆ
ಮೊಲೆಯಿಲ್ಲ ನೋಡ ಸರ್ವಜ್ಞ

ಮೇಲುನೋಟಕ್ಕೆ ಬಹಳ ಮರಿಗಳ ತಂದೆ,ತಲೆ ಮೇಲೆ ಜುಟ್ಟು,
ಹೊತ್ತು ಗಳಿಗೆ ತಿಳಿದ ಮತ್ತು ಇವನ ಹೆಂಡತಿಗೆ‌ ಮೊಲೆಯಿಲ್ಲ‌ ಎಂದರೆ ಹುಂಜ ಎಂದು ಒಗಟಿನರ್ಥ. ಆದರೆ
ಇದರ ಗೂಢಾರ್ಥವೆ ಬೇರೆಯಿದೆ. ಹಲವು ಶಿಷ್ಯರಿಗೆ ತಂದೆಯಾಗಿ ತಲೆಯಲ್ಲಿ ಜುಟ್ಟುಬಿಟ್ಟ ಬ್ರಹ್ಮಜ್ಞಾನಿ. ಈತನು
ತ್ರಿಕಾಲ ಜ್ಞಾನಿಯಾಗಿ ಎಲ್ಲರಲ್ಲಿ ಜ್ಞಾನ ಜಾಗೃತಿ ಮಾಡುತ್ತಾನೆ.
ಈತನ ಹೆಂಡತಿಗೆ ಮೊಲೆಯಿಲ್ಲ ಎಂದರೆ ಈತ ಪರಮಾತ್ಮ
ಸ್ವರೂಪಿಯಾಗಿರುವುದರಿಂದ‌ ಲಿಂಗ ಸತಿಯಾದ‌ ಜೀವಾತ್ಮಕ್ಕೆ
ಮೋಹ‌ ಎನ್ನುವ ಮೊಲೆಯಿಲ್ಲ ಎಂದರ್ಥ.

- Advertisement -

ಕೋಡಗವು ಕುದುರೆಯಲಿ ನೋಡ ನೋಡುತ ಹುಟ್ಟಿ
ಕಾಡಾನೆಗೆರಡು ಗರಿಮೂಡಿ ಗಗನದಿರಿ-
ದಾಡುವುದ ಕಂಡೆ ಸರ್ವಜ್ಞ

ಇದು‌ ಮೇಲುನೋಟಕ್ಕೆ ಗಗನದಲ್ಲಿ ಕೋತಿಯಂತೆ, ಕುದುರೆಯಂತೆ, ಕಾಡಾನಗಳೆರಡು ಜಗಳಾಡಿ ದಂತದಂತೆ ಕೋಲ್ಮಿಂಚು ತೋರುವ ಮೋಡ ಎಂದು ಒಗಟಿನರ್ಥ. ಆದರೆ
ಅರ್ಥವೇ ಬೇರೆ ಇದೆ. ಚೇಷ್ಟೆಮಾಡುವ ಕೋತಿಯಂತೆ ಮತ್ತು
ವೇಗವಾಗಿ ಚಲಿಸುವ ಕುದುರೆಯಂತೆ ಎರಡಾಗಿ
ಒಂದಕ್ಕೊಂದು ಇರಿದಾಡಿದಂತೆ ಕಾಣಿಸುತ್ತದೆ ಎಂದು ಮನಸಿನ ಬಗ್ಗೆ ಸರ್ವಜ್ಞನ‌ ವಚನದ ಮರ್ಮ .

ಹತ್ತು ಸಾಸಿರ ಕಣ್ಣು ಕತ್ತಿನ ಕಿರಿಬಾಲ
ತುತ್ತನೆ ಹಿಡಿದು ತರುತಿಹುದು ಕವಿಗಳಿದ-
ರರ್ಥವನು ಪೇಳಿ ಸರ್ವಜ್ಞ

- Advertisement -

ಇದು ಮೇಲ್ನೋಟಕ್ಕೆ ಹಲವು‌ ಕಣ್ಣಿದ್ದು(ತೂತು) ಮತ್ತೆ ತಲೆಯಲ್ಲಿ‌ ಜುಟ್ಟಿದ್ದು ಇದು ಹಲವು‌ ಹುಳುಗಳನ್ನು ತುತ್ತು‌ ಮಾಡಿ‌ ತಿನ್ನುತ್ತದೆ ಎಂದರೆ ಮೀನಿನ ಬಲೆ ಎಂದರ್ಥವಾಗುತ್ತದೆ. ಆದರೆ ಬ್ರಹ್ಮಜ್ಞಾನಿಯ ತಲೆಯ ಒಳಗೆ ಸಹಸ್ರಾರ ಅರಳಿದ್ದು ಮೇಲೆ ಕೂದಲಿನ ಜುಟ್ಟಿರುತ್ತದೆ. ಅಲ್ಲದೆ ತಲೆಯೆಂಬ ಹುತ್ತದಲ್ಲಿ ಅಡಗಿರುವ ನೂರಾರು ದುರ್ಗುಣಗಳನ್ನು ತಿಂದು ತೇಗುತ್ತದೆ ಎಂದರೆ ಬ್ರಹ್ಮಜ್ಞಾನಿಯಾದ ಬ್ರಾಹ್ಮಣ ಎಂದರ್ಥ.
ಬ್ರಾಹ್ಮಣ ಜಾತಿವಾಚಕವಲ್ಲ. ಪರಬ್ರಹ್ಮವನ್ನು ತಿಳಿದಾತ.

ಎನ್.ಶರಣಪ್ಪ‌ ಮೆಟ್ರಿ ಗಂಗಾವತಿ 9449030990

- Advertisement -
- Advertisement -

Latest News

ಹಿರಿಯರು ಕುಟುಂಬದ ಬಲವಾದ ಅಡಿಪಾಯ — ಸಿದ್ದಲಿಂಗ ಕಿಣಗಿ

    ಸಿಂದಗಿ - ಅಜ್ಜಿಯರು ಕುಟುಂಬದ ದೊಡ್ಡ ಸಂಪತ್ತು, ಪ್ರೀತಿಯ ಪರಂಪರೆಯ ಸ್ಥಾಪಕರು, ಶ್ರೇಷ್ಠ ಕಥೆಗಾರರು ಮತ್ತು ಸಂಪ್ರದಾಯದ ಪಾಲಕರು. ಅಜ್ಜ-ಅಜ್ಜಿಯರು ಕುಟುಂಬದ ಬಲವಾದ...
- Advertisement -

More Articles Like This

- Advertisement -
close
error: Content is protected !!
Join WhatsApp Group