spot_img
spot_img

ಈ ಕಾಂಗ್ರೆಸ್ಸನ್ನ ಬ್ಯಾನ್ ಮಾಡಬೇಕಿದೆ

Must Read

- Advertisement -
  • Fair and Lovely: UPA
  • Glow and Lovely: I.n.d.i.alliance

ಈ ಚಿತ್ರದ ಮೂಲಕ ನಾನು ನಿಮಗೆ ಏನು ಹೇಳ ಹೊರಟಿರುವೆ ಗೊತ್ತಾ? ಕೊನೆಯವರೆಗೆ ಓದಿ.

ಹಿಂದೂಸ್ಥಾನ ಲಿವರ್ ಲಿಮಿಟೆಡ್ ಕಂಪನಿ ಈ ಹಿಂದೆ ಮಹಿಳೆಯರಿಗಾಗಿ “ಫೇರ್ ಆಂಡ್ ಲವ್ಲಿ” ಹಾಗೆ ಪುರುಷರಿಗಾಗಿ “ಫೇರ್ ಆಂಡ್ ಹ್ಯಾಂಡಸಮ್” ಕ್ರೀಮಗಳನ್ನ ಮಾರುಕಟ್ಟೆಯಲ್ಲಿ ತಂದಿತ್ತು.

ಫೇರ್‌ ಆ್ಯಂಡ್‌ ಲವ್ಲಿ ಸೇರಿದಂತೆ ಕೆಲವು ಉತ್ಪನ್ನಗಳು ಚರ್ಮದ ಬಣ್ಣ ಕಪ್ಪಿನಿಂದ ಬಿಳಿ ಬಣ್ಣಕ್ಕೆ ತಿರುಗುತ್ತದೆ ಎಂದು ಜಾಹೀರಾತಿನಲ್ಲಿ ಹೇಳುತ್ತಿದ್ದವು. ಇದರಿಂದ ಕಪ್ಪುವರ್ಣೀಯರನ್ನು ಅವಹೇಳನ ಹಾಗೂ ಜನಾಂಗೀಯ ತಾರತಮ್ಯ ಮಾಡಿದಂತಾಗುತ್ತಿದೆ ಎಂಬ ಆರೋಪಗಳು ಕೇಳಿ ಬರ ತೋಡಗಿದವು.

- Advertisement -

ವಿಶ್ವಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಬಹುದೊಡ್ಡ ಆಂದೋಲನವೇ ನಡೆಯತೊಡಗಿತು. ಈ ಕಾರಣಕ್ಕೆ ಅಮೆರಿಕದಲ್ಲಿ “ಬ್ಲಾಕ್ ಲೈವ್ಸ್ ಮ್ಯಾಟರ್” ಎಂಬ ಪ್ರತಿಭಟನೆ ಆರಂಭವಾಗಿ ನಂತರ ಅದು ನಿಧಾನವಾಗಿ ಇಡೀ ಜಗತ್ತನ್ನೆ ವ್ಯಾಪಿಸತೊಡಗಿತು. ಇದರಿಂದ ಹಿಂದೂಸ್ತಾನ್ ಯುನಿಲಿವರ್ ಕಂಪನಿ ಶೇರುಗಳ ಮೌಲ್ಯದ ಜತೆಗೆ ಕ್ರೀಮಗಳ ಮಾರಾಟ ಕೂಡ ಕುಸಿಯತೊಡಗಿತು.

ಇದರಿಂದ ಎಚ್ಚೆತ್ತುಕೊಂಡ ಕಂಪನಿ ತನ್ನ ಕ್ರೀಮಗಳ ಹೆಸರನ್ನ ಕ್ರಮವಾಗಿ “ಗ್ಲೋ ಆಂಡ್ ಲವ್ಲಿ” ಹಾಗೂ “ಗ್ಲೋ ಆಂಡ್ ಹ್ಯಾಂಡಸಮ್” ಗೆ ಬದಲಿಸಿಕೊಂಡು ಹಾನಿಯಿಂದ ಹೊರಬಂತು. ನೆನಪಿರಲಿ ಉತ್ಪನ್ನಗಳ ಹೆಸರಷ್ಟೆ ಬದಲಾಯಿಸಿತೆ ಹೊರತು ಕಂಪನಿಯ ಹೆಸರು ಹಿಂದೂಸ್ಥಾನ ಲಿವರ್ ಲಿಮಿಟೆಡ್ ಬದಲಾಗದೆ ಹಾಗೆ ಉಳಿಯಿತು.

ಈಗ ವಿಷಯಕ್ಕೆ ಬರೋಣ. ನಮ್ಮ ದೇಶದಲ್ಲೂ ಒಂದು ಪಕ್ಷವಿದೆ. ಅದನ್ನ ಪಕ್ಷ ಎನ್ನದೆ ಕಂಪನಿ ಎನ್ನುವುದೆ ಸೂಕ್ತ. ಅದು ತನ್ನ ಹೆಸರನ್ನ ಭ್ರಷ್ಟಾಚಾರ, ಸೃಜನಪಕ್ಷಪಾತ, ಅಲ್ಪಸಂಖ್ಯಾತರ ಒಲೈಕೆ, ಬಹುಸಂಖ್ಯಾತರ ತಿರಸ್ಕಾರ, ದೇಶ ಹಾಗೂ ಜನ ವಿರೋಧಿ ನೀತಿಗಳ ಕಾರಣಕ್ಕಾಗಿ ಕೆಡಿಸಿಕೊಂಡಿತು. ತದನಂತರ ಅದರ ಪ್ರಭಾವ ಕುಸಿದು ಕೇಂದ್ರದಲ್ಲಿ ಅಧಿಕಾರ ಕಳೆದುಕೊಳ್ಳುವದರೊಂದಿಗೆ ಒಂದೊಂದೆ ರಾಜ್ಯಗಳನ್ನು ಕಳೆದುಕೊಳ್ಳುತ್ತಾ ಹೋಯಿತು.

- Advertisement -

ಭ್ರಷ್ಟಾಚಾರ ಹಗರಣಗಳ ಮೂಲಕ ಬ್ರಾಂಡ್ ನೇಮ್ ಕಳೆದು ಕೊಂಡ “ಯುಪಿಎ” (U.P.A) ಯನ್ನ “ಐ.ಎನ್.ಡಿ.ಐ.ಎ” (I.N.D.I.A.) ಗೆ ಬದಲಿಸಿತು.

ತಾನು ಪ್ರವೇಶಿಸಿದ ರಾಜ್ಯಗಳಲ್ಲೆಲ್ಲ ಅಧಿಕಾರ ಕಳೆದುಕೊಂಡ ಕಾರಣ ಮತ್ತೊಂದು ಬ್ರಾಂಡಾದ “ಭಾರತ ಜೋಡೊ ಯಾತ್ರಾ” ವನ್ನ “ಭಾರತ ಜೋಡೊ ನ್ಯಾಯ ಯಾತ್ರಾ” ಗೆ ಬದಲಿಸಿತು. ನಂತರ ಅದರಿಂದಲೂ ಕೆಲ ಪಕ್ಷಗಳು ದೂರವಾದದ್ದೆ “ಭಾರತ ನ್ಯಾಯ ಯಾತ್ರಾ” ಅಂತ ಮರು ಬದಲಾಯಿಸಿತು.

ಕಾರಣ ನಿಮ್ಮಲ್ಲಿ ನನ್ನ ಮನವಿಯಿಷ್ಟೆ ಕಾಲಕ್ಕೆ ತಕ್ಕಂತೆ ಬದಲಾಗುವ ಕಾಂಗ್ರೆಸ್ ಕಂಪನಿಯ ಬ್ರಾಂಡಗಳನ್ನ ಮಾತ್ರವಲ್ಲ ಇಡಿ ಕಾಂಗ್ರೆಸ್ ಕಂಪನಿಯನ್ನೇ ನಾವು ಬ್ಯಾನ್ ಮಾಡಬೇಕಿದೆ.


ಮಲ್ಲಿಕಾರ್ಜುನ ಚೌಕಾಶಿ

ವಕೀಲರು

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group