ಬೀದರ – ಗಡಿ ಜಿಲ್ಲೆ ಬೀದರ್ ನಲ್ಲಿ ವಿಪರೀತ ಸಾಲದ ಬಾಧೆಯಿಂದ ಬೇಸತ್ತು ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಬೀದರ್ ತಾಲ್ಲೂಕಿನ ಚಟ್ನಳ್ಳಿ ಗ್ರಾಮದ ಹಾವಪ್ಪಾ ತಂದೆ ಅಡೆಪ್ಪ ಮುದ್ದೆಪ್ಪನೋರ ( 60) ಎಂಬಾತ ಮೃತ ರೈತ ದುರ್ದೈವಿ.
ಈತನು ಕಳೆದ ಕೆಲ ವರ್ಷದಿಂದ ಹೊಲದ ಬೆಳೆ ಸಲವಾಗಿ ಅನೇಕ ಕಡೆ ಖಾಸಗಿ ಸಾಲವನ್ನು ಪಡೆದಿದ್ದರು.
ಹೊಲದ ಮೇಲೆ ಎರಡು ವರ್ಷದ ಹಿಂದೆ PKPS ಬ್ಯಾಂಕದಲ್ಲಿ 1,00,000 ( ಒಂದು ಲಕ್ಷ ರೂಪಾಯಿ ) ಬೆಳೆ ಸಾಲ ತೆಗೆದುಕೊಂಡಿದ್ದರು.
ಎರಡು ವರ್ಷದಿಂದ ಹೊಲದಲ್ಲಿ ಹಾಕಿದ ಬೆಳೆಯು ಮಳೆ ಹೋಗಿ ಮತ್ತು ಮಳೆ ಹೆಚ್ಚಾಗಿ ಬೆಳೆ ಬಂದಿರಲಿಲ್ಲ. ಅಲ್ಲದೆ ಈ ಹೊಲದಲ್ಲಿ ಗೊಬ್ಬರ ಸಲುವಾಗಿ ಖಾಸಗಿ ಸಾಲ 3 ಲಕ್ಷ ರೂಪಾಯಿ ಕೂಡಾ ತಂದಿರುತ್ತಾರೆ.ಸಾಲದ ಚಿಂತೆಯಲ್ಲಿ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ತನ್ನ ಹೊಲದಲ್ಲಿದ್ದ ಮಾವಿನ ಗಿಡಕ್ಕೆ ನೇಣು ಹಾಕಿಕೊಂಡಿದ್ದಾರೆ.
ಇವರು ಒಬ್ಬಳು ಹೆಣ್ಣು ಮಗಳು ಎರಡು ಗಂಡು ಮಕ್ಕಳು ಹೊಂದಿರುವ ರೈತ.ಈ ಸಂಬಂಧ ಮನ್ನಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು , ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ವೈದ್ಯರಿಂದ ಶವಪರೀಕ್ಷೆ ನಡೆಸಿ ಬಳಿಕ ವಾರಸುದಾರರಿಗೆ ಒಪ್ಪಿಸಿದರು.
ವರದಿ: ನಂದಕುಮಾರ ಕರಂಜೆ, ಬೀದರ