ಸಿಂದಗಿ : ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಯುನಿಸೆಫ್ ಪ್ರಾಯೋಜಕತ್ವದಲ್ಲಿ ವಿಜಯಪುರ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಯೋಗದಲ್ಲಿ ಸೆಪ್ಟೆಂಬರ್ 11 ಮತ್ತು 12ರಂದು
ಗ್ರಾಮೀಣ ಪತ್ರಕರ್ತರಿಗೆ ಮಕ್ಕಳ ವಿಷಯಗಳ ವರದಿಗಾರಿಕೆ ಕುರಿತು ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲು
ಉದ್ದೇಶಿಸಿದೆ.
ಈ ಕಾರ್ಯಾಗಾರದಲ್ಲಿ ಹಿರಿಯ ಪತ್ರಕರ್ತರು, ಮಕ್ಕಳ ತಜ್ಞರು, ಯುನಿಸೆಫ್ ಅಧಿಕಾರಿಗಳು ಮತ್ತು
ಮಾಧ್ಯಮ ತಜ್ಞರು, ಮಾಧ್ಯಮ ಅಧ್ಯಯನ ವಿಭಾಗಗಳ ಅಧ್ಯಾಪಕರು ಸಂಪನ್ಮೂಲ ವ್ಯಕ್ತಿಗಳಾಗಿ
ಭಾಗವಹಿಸಲಿದ್ದಾರೆ.
ಈ ಕಾರ್ಯಾಗಾರದಲ್ಲಿ ವಿಜಯಪುರ, ಬಾಗಲಕೋಟೆ, ಬೆಳಗಾವಿ, ಕೊಪ್ಪಳ, ಕಲಬುರಗಿ ಮತ್ತಿತರ ಜಿಲ್ಲೆಗಳ ಪತ್ರಕರ್ತರು ಭಾಗವಹಿಸಬಹುದಾಗಿದೆ. ಆಸಕ್ತ ಪತ್ರಕರ್ತರು ತಮ್ಮ ಹೆಸರು, ಪತ್ರಿಕೆಯ ಹೆಸರು, ಪತ್ರಕರ್ತರಾಗಿ ಎಷ್ಟು ವರ್ಷಗಳ ಅನುಭವ, ಊರು, ಈಮೇಲ್ ವಿಳಾಸ ಹಾಗೂ ಮೊಬೈಲ್ ಸಂಖ್ಯೆ ಇಷ್ಟು ವಿವರಗಳನ್ನು ವಾಟ್ಸಾಪ್ ಮೂಲಕ 9481364526 ನಂಬರ್‌ಗೆ ಕಳುಹಿಸಬಹುದು ಎಂದು ವಿವಿ
ಪ್ರಕಟಣೆ ತಿಳಿಸಿದೆ. ಹೈದ್ರಾಬಾದ್ ನ ಯುನಿಸೆಫ್ ಅಧಿಕಾರಿಗಳು ಈ ತರಬೇತಿ ಕಾರ್ಯಾಗಾರದಲ್ಲಿ
ಭಾಗವಹಿಸುವವರ ಆಯ್ಕೆಯನ್ನು ಮಾಡಲಿದ್ದಾರೆ.
ಆಯ್ಕೆಯಾದ ಪತ್ರಕರ್ತರಿಗೆ ವಿಜಯಪುರಕ್ಕೆ ಬಂದು
ಹೋಗುವ ಬಸ್ ಚಾರ್ಜ್ ಮರುಪಾವತಿಸಲಾಗುವುದು. ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಇರುತ್ತದೆ.
ಆಯ್ಕೆಯಾದ ಪತ್ರಕರ್ತರಿಗೆ ಮುಂಚಿತವಾಗಿಯೇ ಮಾಹಿತಿ ನೀಡಲಾಗುವುದು ಮತ್ತು ಆಯ್ಕೆಯಾದವರಿಗೆ
ಮಾತ್ರ ಕಾರ್ಯಾಗಾರದಲ್ಲಿ ಭಾಗವಹಿಸಲು ಅವಕಾಶವಿದೆ ಎಂದು ಪ್ರಕಟಣೆ ತಿಳಿಸಿದೆ.